ಸಿದ್ದರಾಮಯ್ಯ ಅವರಿಂದ ಲಾಟರಿ ಮೂಲಕ ಫ್ಲಾಟ್ಸ್ ಹಂಚಿಕೆ

ಬೆಂಗಳೂರು, ಡಿ.21: ಬೆಂಗಳೂರು ನಗರದ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ರೂಪಿಸಲಾಗುತ್ತದೆ ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಲಾಟರಿ ಎತ್ತುವ ಮೂಲಕ ಬಿಡಿಎ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ.

ವಿವಿಧ ಆದಾಯಗಳ ವರ್ಗದ ಜನರಿಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿರ್ಮಿಸಿರುವ ಮೂರು ಸಾವಿರ ವಸತಿ ಘಟಕ(ಫ್ಲಾಟ್ಸ್) ಗಳನ್ನು ಅರ್ಹ ಅರ್ಜಿದಾರರಿಗೆ ಲಾಟರಿ ಮೂಲಕ ಹಂಚಿಕೆ ಮಾಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.26 ರಂದು ಚಾಲನೆ ನೀಡಲಿದ್ದಾರೆ ಎಂದು ಬಿಡಿಎ ಪ್ರಕಟಿಸಿದೆ.

ಬೆಂಗಳೂರಿನ ಕುಮಾರಪಾರ್ಕ್ ಪಶ್ಚಿಮ , ಟಿ ಚೌಡಯ್ಯ ರಸ್ತೆಯಲ್ಲಿರುವ ಬಿಡಿಎ ಕಚೇರಿ ಆವರಣದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಡಿ.26ರಂದು ಬೆಳಗ್ಗೆ 11 ಗಂಟೆ ಕಾರ್ಯಕ್ರಮ ಆರಂಭವಾಗಲಿದ್ದು ಶಾಸಕ ರೋಷನ್ ಬೇಗ್ ಅವರು ಉಪಸ್ಥಿತರಿರುತ್ತಾರೆ.

ಕರ್ನಾಟಕ ಸರ್ಕಾರದ 2011ರ ಆದೇಶದಂತೆ ಬೆಂಗಳೂರಿನ 9 ಸ್ಥಳಗಳಲ್ಲಿ ವಸತಿ ಗೃಹಗಲನ್ನು ನಿರ್ಮಿಸಿ ಹಂಚಿಕೆ ಮಾಡಲು ಬಿಡಿಎ ಕ್ರಮ ಕೈಗೊಂಡಿದ್ದು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಒಂದು ಕೊಠಡಿಗಳ ಮನೆಗಳಲ್ಲಿ ಶೇ 50 ರಷ್ಟು ಫ್ಲಾಟ್ಸ್ ಗಳನ್ನು ಹಿಂದುಳಿದ ವರ್ಗಗಳಿಗಾಗಿ ಮೀಸರಿಸಲಾಗಿದೆ.

Allotment of BDA flats through lottery system

ಮೀಸಲಾತಿ ಅನುಸರಿಸಿ ಅರ್ಹ ಅರ್ಜಿದಾರರಿಗೆ ಬಿಡಿಎ ನಿವೇಶನ ಹಂಚಿಕೆ ಮಾಡಲಿದೆ. ಪ್ರಥಮ ಆದ್ಯತೆಯಲ್ಲಿರುವ ವಸತಿ ಘಟಕಗಳು ಮುಕ್ತಾಯವಾದರೆ ನಂತರದ ಆದ್ಯತೆಯ ಘಟಕಗಳನ್ನು ಹಂಚಲಾಗುತ್ತದೆ ಎಂದು ಬಿಡಿಎ ಪ್ರಕಟಿಸಿದೆ.

ವಲಗೇರಹಳ್ಳಿ, ದೊಡ್ಡಬನಹಳ್ಳಿ, ಗುಂಜೂರು, ಆಲೂರು, ತಿಪ್ಪಸಂದ್ರ, ಮಾಲಗಾಳ, ಹಲಗೆವಡೇರಹಳ್ಳಿ ಹಾಗೂ ಕೊತ್ತನೂರು ಪ್ರದೇಶದಲ್ಲಿ ವಸತಿ ಸಮುಚ್ಚಯಗಳು ನಿರ್ಮಾಣಗೊಂಡು ವಸತಿ ಘಟಕಗಳು ಹಂಚಿಕೆಗೆ ಸಿದ್ಧವಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ. [ನನಸಾಗಲಿದೆ ಬೆಂಗಳೂರಿಗರ ಸ್ವಂತ ಮನೆ ಕನಸು]

ಬಿಡಿಎ ಸದ್ಯ 4,388 ಸಿಂಗಲ್ ಬೆಡ್ ಮನೆಗಳನ್ನು ನಿರ್ಮಿಸುತ್ತಿದೆ. ಸಿಂಗಲ್ ಬೆಡ್ ರೂಮ್ ಮನೆಗಳ ದರ 9.5 ಲಕ್ಷದಿಂದ 11.2 ಲಕ್ಷದ ತನಕ ನಿಗದಿಗೊಳಿಸಲಾಗಿದೆ. ಬಿಡಿಎ ಪರಿಶಿಷ್ಟ ಜಾತಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡುವ ಮನೆಗಳಿಗೆ 3 ಲಕ್ಷರೂ.ಗಳ ಸಹಾಯಧನ ನೀಡುತ್ತದೆ. ಸದ್ಯ ವಾರ್ಷಿಕ ಆದಾಯ ಪರಿಷ್ಕರಣೆ ಪ್ರಸ್ತಾವನೆ ಸರ್ಕಾರ ಮುಂದಿದ್ದು, ಒಪ್ಪಿಗೆ ದೊರಕಿದ ಬಳಿಕ ಬಿಡಿಎ ಮನೆಗಳನ್ನು ಪಡೆಯಲು ಅರ್ಜಿ ಆಹ್ವಾನಿಸಿತ್ತು. ಈಗ ಅರ್ಹ ಅರ್ಜಿದಾರರಿಗೆ 3000 ಫ್ಲಾಟ್ಸ್ ಹಂಚಿಕೆ ಮಾಡಲಾಗುತ್ತಿದೆ ಎಂದು ಬಿಡಿಎ ಆಯುಕ್ತ ಶ್ಯಾಂ ಭಟ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+