ಜನಾರ್ದನ ರೆಡ್ಡಿ ಪಾಪಕ್ಕೆ ಮಕ್ಕಳಿಗೆ ಶಿಕ್ಷೆ ಆಗದಿರಲಿ: ಸಿದ್ದರಾಮಯ್ಯ ಟ್ವೀಟ್
Recommended Video

ಬೆಂಗಳೂರು, ಅಕ್ಟೋಬರ್ 30: ಮಾಜಿ ಸಚಿವ ಜನಾರ್ದನರೆಡ್ಡಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ವಯಕ್ತಿಕ ವಾಗ್ದಾಳಿ ತಾರಕಕ್ಕೇರಿದ್ದು, ಪರಸ್ಪರ ವಯಕ್ತಿಕ ದೋಷಾರೋಪಣೆ ನಂತರ ಇದೀಗ ಸಿದ್ದರಾಮಯ್ಯ ತಮ್ಮ ಪುತ್ರನ ಸಾವಿನ ಬಗೆಗೆ ನೀಡಿದ್ದ ಹೇಳಿಕೆ ಕುರಿತಂತೆ ಜನಾರ್ದನ ರೆಡ್ಡಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ನನ್ನ ಮಗನ ಸಾವಿನ ಬಗ್ಗೆ ಜನಾರ್ದನ ರೆಡ್ಡಿ ಮಾತನಾಡಿದ್ದಾರೆ, ನಾನು ಮಾಡಿದ ಪಾಪದಿಂದಲೇ ನನ್ನ ಮಗನ ಸಾವಾಯಿತು ಎಂದಿದ್ದಾರೆ, ಆದರೆ ಜನಾರ್ದನ ರೆಡ್ಡಿ ಪಾಪಗಳಿಗೆ ದೇವರು ಅವರ ಮಕ್ಕಳಿಗೆ ಶಿಕ್ಷೆ ನೀಡದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವ ಮೂಲಕ ಜನಾರ್ದನ ರೆಡ್ಡಿ ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ.
ನನ್ನ ಮಗನ ಸಾವು ನನಗೆ ದೇವರುಕೊಟ್ಟ ಶಿಕ್ಷೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ.@INCKarnataka
— Siddaramaiah (@siddaramaiah) October 30, 2018
ಕಳೆದ ಮೂರು ದಿನಗಳಿಂದ ಸಿದ್ದರಾಮಯ್ಯ ಹಾಅಗೂ ಜನಾರ್ದನ ರೆಡ್ಡಿ ನಡುವೆ ಪರಸ್ಪರ ವಾದ-ಪ್ರತಿವಾದ ನಡೆದಿದ್ದು ಮಂಗಳವಾರ ಬೆಳಗ್ಗೆಯಷ್ಟೇ ಚಿತ್ರದುರ್ಗ ಜಿಲ್ಲೆಯಲ್ಲಿ ಜನಾರ್ದನ ರೆಡ್ಡಿ ಹೇಳಿಕೆ ನೀಡಿ ಜನಾರ್ದನ ರೆಡ್ಡಿಯವರು ಸಿದ್ದರಾಮಯ್ಯ ಮಾಡಿದ ಪಾಪಕೃತ್ಯಗಳಿಂದಲೇ ಅವರ ಪುತ್ರನ ಸಾವು ಸಂಭವಿಸಿತ್ತು ಎಂದು ಅವರು ಟೀಕಿಸಿದ್ದರು.

ಹೀಗಾಗಿ ಅದಕ್ಕೆ ಉತ್ತರ ನೀಡಿರುವ ಸಿದ್ದರಾಮಯ್ಯ, ಜನಾರ್ದನ ರೆಡ್ಡಿ ಮಾಡಿರುವ ಪಾಪಗಳಿಗೆ ಮಕ್ಕಳಿಗೆ ಶಿಕ್ಷೆಯಾಗದಿರಲಿ ಎಂದು ಪ್ರಾರ್ಥಿಸುವ ಮೂಲಕ ಪ್ರಬುದ್ಧತೆ ಪ್ರದರ್ಶಿಸಿದ್ದಾರೆ ಆದರೆ ಇದಕ್ಕೆ ಜನಾರ್ದನ ರೆಡ್ಡಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.












Click it and Unblock the Notifications