ಬೆಂಗಳೂರು ಪೊಲೀಸರಿಗೆ 57 ಬೊಲೆರೋ ವಾಹನಗಳು
ಬೆಂಗಳೂರು,
ಮೇ 21 : ಬೆಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಹೊಸದಾಗಿ 57 ಹೊಯ್ಸಳ ಗಸ್ತುವಾಹನಗಳನ್ನು ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ವಾಹನಗಳಿಗೆ ಬುಧವಾರ ಹಸಿರು ನಿಶಾನೆ ತೋರಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'>ವಿಧಾನಸೌಧದ
ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ.ಜಾರ್ಜ್, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ 57 ಬೊಲೆರೋ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು. id='are-slot-2' class='oiad oi-axt oiadv'>
57 ಗಸ್ತುವಾಹನ ಸೇರ್ಪಡೆ
ಬೆಂಗಳೂರು ನಗರದಲ್ಲಿ ಪೊಲೀಸರು ಗಸ್ತು ತಿರುಗಲು 57 ಹೊಸ ಬೊಲೆರೋ ವಾಹನಗಳನ್ನು ಬುಧವಾರ ನೀಡಲಾಗಿದೆ.

ಹಸಿರು ನಿಶಾನೆ ತೋರಿದ ಸಿಎಂ ಸಿದ್ದರಾಮಯ್ಯ
ವಿಧಾನಸೌಧದ ಮುಂಭಾಗದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ.ಜಾರ್ಜ್ ಬೊಲೆರೋ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು.

108 ವಾಹನಗಳು ನಗರದಲ್ಲಿ
57 ವಾಹನಗಳ ಸೇರ್ಪಡೆಯಿಂದಾಗಿ ಬೆಂಗಳೂರು ನಗರದಲ್ಲಿ 108 ಬೆಲೆರೋ ವಾಹನಗಳು ಗಸ್ತಿಗೆ ನಿಯೋಜಿತವಾದಂತಾಗಿದೆ.

5 ಕೋಟಿ ವೆಚ್ಚದಲ್ಲಿ ವಾಹನ ಖರೀದಿ
ಒಟ್ಟು 5 ಕೋಟಿ ಅನುದಾನದಲ್ಲಿ ಪೊಲೀಸ್ ಇಲಾಖೆಗೆ 103 ವಾಹನಗಳನ್ನು ಖರೀದಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹೇಳಿದರು. 68 ಬೊಲೆರೋ, 45 ಮಾರುತಿ ಎಕೋಗಳನ್ನು ಖರೀದಿಸಲಾಗಿದೆ.

ಎಸಿಪಿ ಗ್ರೇಡ್ ಅಧಿಕಾರಿಗಳಿಗೆ ಕಾರು
57 ಬೊಲೆರೋ ವಾಹನಗಳನ್ನು ಹೊಯ್ಸಳಕ್ಕೆ ನೀಡಲಾಗಿದ್ದರೆ, 45 ಮಾರುತಿ ಎಕೋ ವಾಹನಗಳನ್ನು ಎಸಿಪಿ ದರ್ಜೆಯ ಅಧಿಕಾರಿಗಳಿಗೆ ನೀಡಲಾಗುತ್ತದೆ.

ಯಾರು ಜೊತೆಗಿದ್ದರು
ಸಿಎಂ ಸಿದ್ದರಾಮಯ್ಯ ಜೊತೆ ಸಚಿವ ರೋಷನ್ ಬೇಗ್, ಗೃಹ ಸಚಿವ ಕೆಜೆ ಜಾರ್ಜ್, ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಮುಂತಾದವರು ಹಾಜರಿದ್ದರು.












Click it and Unblock the Notifications