ಬಿಜೆಪಿ ಸರ್ಕಾರದಿಂದ ಭ್ರಷ್ಟಾಚಾರ: ಹೇಗಿದೆ ಸಿದ್ದರಾಮಯ್ಯ ಲೆಕ್ಕಾಚಾರ?

ಬೆಂಗಳೂರು, ಜುಲೈ.23: ವೆಂಟಿಲೇಟರ್, ಪಿಪಿಇ ಕಿಟ್ ಗಳಿಗೆ ಮಾತ್ರ ಸರ್ಕಾರದ ಭ್ರಷ್ಟಾಚಾರ ಮೀಸಲಾಗಿಲ್ಲ. ಬದಲಿಗೆ ಸ್ಯಾನಿಟೈಸರ್ ಮತ್ತು ಮುಖಕ್ಕೆ ಹಾಕಿಕೊಳ್ಳುವ ಮಾಸ್ಕ್ ಖರೀದಿಯಲ್ಲೂ ಸರ್ಕಾರವು ಹಣ ಹೊಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Recommended Video

      Corona Vaccine ತಯಾರಿಸುವಲ್ಲಿ ಯಾವ ದೇಶ ಯಾವ ಹಂತದಲ್ಲಿದೆ ? | Oneindia Kannada

      ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಲೆಕ್ಕ ಕೊಡಿ ಅಭಿಯಾನ ಆರಂಭಿಸಿದ್ದು, ಗುರುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. 500 ಎಂಎಲ್ ಸ್ಯಾನಿಟೈಸರ್ ಖರೀದಿಯಲ್ಲೂ ಸರ್ಕಾರವು ಜೇಬು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಉಭಯ ನಾಯಕರು ಕಿಡಿ ಕಾರಿದ್ದಾರೆ.

      ಕೊರೊನಾವೈರಸ್ ಸೋಂಕು ಹರಡದಂತೆ ತಡೆಯುವುದಕ್ಕೆ ಸಾರ್ವಜನಿಕರಿಗೆ ಮಾಸ್ಕ್ ಧರಿಸುವುದಕ್ಕೆ ಸರ್ಕಾರವೇ ಸಲಹೆ ನೀಡುತ್ತದೆ. ಸಾರ್ವಜನಿಕರು ಬಳಸುವ ಸಾಮಾನ್ಯ ಮಾಸ್ಕ್ ಗಳಿಗೆ ಮಾರುಕಟ್ಟೆಯ ಬೆಲೆ ಕನಿಷ್ಠ 20 ರೂಪಾಯಿಯಿಂದ ಆರಂಭವಾಗುತ್ತದೆ.

      ಒಂದು ಮಾಸ್ಕ್ ಗೆ 60ರ ಬದಲು 150 ರೂಪಾಯಿ ಪಾವತಿ

      ಒಂದು ಮಾಸ್ಕ್ ಗೆ 60ರ ಬದಲು 150 ರೂಪಾಯಿ ಪಾವತಿ

      ಕರ್ನಾಟಕದಲ್ಲಿ ಕೊರೊನಾವಾರಿಯರ್ಸ್ ಬಳಸುವುದಕ್ಕಾಗಿ ಉತ್ತಮ ಮಾಸ್ಕ್ ಗಳನ್ನು ಸರ್ಕಾರವೇ ಖರೀದಿಸಿದೆ. ಆದರೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 50 ರಿಂದ 60 ರೂಪಾಯಿಗೆ ಸಿಗುವ ಮಾಸ್ಕ್ ಗಳಿಗೆ ಸರ್ಕಾರವು 126 ರಿಂದ 150 ರೂಪಾಯಿವರೆಗೂ ಹಣ ಪಾವತಿ ಮಾಡಿದೆ. ಅಂದರೆ ಬಹುತೇಕ ದುಪ್ಪಟ್ಟು ಹಣವನ್ನು ನೀಡಿ ಮಾಸ್ಕ್ ಖರೀದಿಸಲಾಗಿದೆ.

      500ml ಸ್ಯಾನಿಟೈಸರ್ ಗೆ 250 ರೂಪಾಯಿ

      500ml ಸ್ಯಾನಿಟೈಸರ್ ಗೆ 250 ರೂಪಾಯಿ

      ಮಾಸ್ಕ್ ಖರೀದಿಯಷ್ಟೇ ಅಲ್ಲ ಸ್ಯಾನಿಟೈಸರ್ ಖರೀದಿಯಲ್ಲೂ ಸರ್ಕಾರವು ಭಾರಿ ಅವ್ಯವಹಾರ ನಡೆಸಿರುವ ಬಗ್ಗೆ ಕಾಂಗ್ರೆಸ್ ಆರೋಪಿಸಿದೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 500ಎಂಎಲ್ ಸ್ಯಾನಿಟೈಸರ್ ಬೆಲೆ 80 ರಿಂದ 1000 ರೂಪಾಯಿ ಆಗಿರುತ್ತದೆ. ಆದರೆ ಸರ್ಕಾರವು 250 ರೂಪಾಯಿ ನೀಡಿ 500ಎಂಎಲ್ ಸ್ಯಾನಿಟೈಸರ್ ಖರೀದಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಂತೂ 500 ಎಂಎಲ್ ಸ್ಯಾನಿಟೈಸರ್ ಗೆ ಬರೋಬ್ಬರಿ 600 ರೂಪಾಯಿ ಪಾವತಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

      ಥರ್ಮಲ್ ಸ್ಕ್ಯಾನರ್ ಖರೀದಿಗೆ 5945 ರೂಪಾಯಿ

      ಥರ್ಮಲ್ ಸ್ಕ್ಯಾನರ್ ಖರೀದಿಗೆ 5945 ರೂಪಾಯಿ

      ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 2 ರಿಂದ 3 ಸಾವಿರ ರೂಪಾಯಿಗೆ ಒಂದು ಥರ್ಮಲ್ ಸ್ಕ್ಯಾನರ್ ಸಿಗುತ್ತದೆ. ಅದಾಗಿಯೂ ರಾಜ್ಯ ಸರ್ಕಾರವು ಒಂದು ಥರ್ಮಲ್ ಸ್ಕ್ಯಾನರ್ ಖರೀದಿಸಲು 5945 ರೂಪಾಯಿ ಪಾವತಿ ಮಾಡಿದೆ. ಅದೇ ಥರ್ಮಲ್ ಸ್ಕ್ಯಾನರ್ ಗಳಿಗೆ ಸಮಾಜ ಕಲ್ಯಾಣ ಇಲಾಖೆಯು 9 ಸಾವಿರ ರೂಪಾಯಿ ನೀಡಿ ಖರೀದಿಸಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸುತ್ತಿದೆ ಎಂದು ಕಾಂಗ್ರೆಸ್ ದೂಷಿಸುತ್ತಿದೆ.

      ದುಪ್ಪಟ್ಟು ಹಣ ನೀಡಿ ಆಕ್ಸಿಜನ್ ಡಿವೈಸ್ ಖರೀದಿ

      ದುಪ್ಪಟ್ಟು ಹಣ ನೀಡಿ ಆಕ್ಸಿಜನ್ ಡಿವೈಸ್ ಖರೀದಿ

      ಕೇರಳ ರಾಜ್ಯದಲ್ಲಿ ಆಮ್ಲಜನಕ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕೊಳವೆ ಮೂಲಕ ಶ್ವಾಸಕೋಶಗಳಿಗೆ ಆಮ್ಲಜನಕ ಪೂರೈಕೆ ಮಾಡುವ ಸಾಧನಗಳನ್ನು ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿ 300 ಡಿವೈಸ್ ಗಳ ದರ ಮತ್ತು ಕೇರಳ ಮೆಡಿಕಲ್ ಸರ್ವಿಸ್ ಕಾರ್ಪೋರೇಶನ್ ಖರೀದಿಸಿರುವ ದರದ ಮಧ್ಯೆ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಕೇರಳದಲ್ಲಿ ಒಂದು ಡಿವೈಸ್ ಖರೀದಿಸಲು 2.86 ಲಕ್ಷ ರೂಪಾಯಿ ಪಾವತಿಸಿದ್ದಲ್ಲಿ ಅದೇ ಆಕ್ಸಿಜನ್ ಡಿವೈಸ್ ಖರೀದಿಸಲು ಕರ್ನಾಟಕ ಸರ್ಕಾರವು 4.36 ಲಕ್ಷ ರೂಪಾಯಿ ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+