Get Updates
Get notified of breaking news, exclusive insights, and must-see stories!

ಬಿಜೆಪಿ, ಓವೈಸಿ ಪಕ್ಷ ಸಮಾಜ ಒಡೆಯುವ ಕೆಲಸ ಮಾಡುತ್ತಿವೆ: ಸಿಎಂ

ಬೆಂಗಳೂರು, ಜನವರಿ 29 : ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿಯು ಓವೈಸಿ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಓವೈಸಿ ಹಾಗೂ ಬಿಜೆಪಿ ಎರಡೂ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓವೈಸಿ ಹಾಗೂ ಬಿಜೆಪಿ ಒಂದಾದರೆ ಸಮಾಜದ ಗತಿಯೇನು, ಮುಸ್ಲಿಮರನ್ನು ಬಿಜೆಪಿ ಪಕ್ಷ ವಿರೋಧಿಸುತ್ತಲ್ಲವಾ ಅದು ಹೇಗೆ ಮುಸ್ಲಿಮರ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ, ಓಟ್ ಡೈವರ್ಷನ್ ಮಾಡೀಕೆ ಈ ರೀತಿ ಮಾಡುತ್ತಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದರು.

ಓವೈಸಿಯಿಂದ ರಾಜ್ಯಕ್ಕೆ ಧಕ್ಕೆ ಮಾಡಲು ಸಾಧ್ಯವಿಲ್ಲ

ಓವೈಸಿಯಿಂದ ರಾಜ್ಯಕ್ಕೆ ಧಕ್ಕೆ ಮಾಡಲು ಸಾಧ್ಯವಿಲ್ಲ

ರಾಜ್ಯಕ್ಕೆ ಯಾವ ಓವೈಸಿ ಬಂದರೂ ಏನೂ ಮಾಡಲು ಸಾಧ್ಯವಿಲ್ಲ. ಕರ್ನಟಕದ ಮುಸ್ಲಿಮರು ತುಂಬಾ ಬುದ್ಧಿವಂತರು, ಬಿಜೆಪಿಯ ಇಂತಹ ತಂತ್ರಗಳನ್ನು ಅರಿತಿದ್ದಾರೆ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ.

ಓವೈಸಿ ಜತೆಗೆ ಬೆಜೆಪಿ ಹೊಂದಾಣಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದ ಮುಸ್ಲಿಮರು ತುಂಬಾ ಬುದ್ಧಿವಂತರು, ಬಿಜೆಪಿಯ ತಂತ್ರಗಳನ್ನು ಚೆನ್ನಾಗಿ ಅರಿತಿದ್ದಾರೆ. ನಾನು ಜೆಡಿಎಸ್ ನಲ್ಲಿದ್ದಾ ಮುಸ್ಲಿಂ ಮತಗಳನ್ನು ಪಡೆಯುವುದು ಕಷ್ಟವಾಗಿತ್ತು. ಆದರೆ ಕಾಂಗ್ರೆಸ್ ನಲ್ಲಿ ಅಂತಹ ವಾತಾವರಣವಿಲ್ಲ, ಎಲ್ಲಾ ಮುಸ್ಲಿಮರು ಕಾಂಗ್ರೆಸ್ ನ್ನು ಬೆಂಬಲಿಸಲಿದ್ದಾರೆ ಎಂದರು.

ಶಕ್ತಿ ಭವನದಲ್ಲಿ ಸಿಎಂ ಭೇಟಿ ಮಾಡಿದ ಬಂಡಾಯ ಶಾಸಕರು

ಶಕ್ತಿ ಭವನದಲ್ಲಿ ಸಿಎಂ ಭೇಟಿ ಮಾಡಿದ ಬಂಡಾಯ ಶಾಸಕರು

ಸಿಎಂ ಭೇಟಿಗೆ ಬಂದ ಜೆಡಿಎಸ್ ಬಂಡಾಯ ಶಾಸಕರು, ಜಮೀರ್, ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸ ಮೂರ್ತಿ, ಕಾಂಗ್ರೆಸ್‌ನಿಂದ ಟಿಕೆಟ್ ನೀಡಿಕೆ ವಿಚಾರದಲ್ಲಿ ಗೊಂದಲ, ನಿಮಗೆ ಯಾರು ಹೇಳಿದ್ದು ಗೊಂದಲ ಇದೆ ಅಂತಾ, ಟಿಕೆಟ್ ವಿಚಾರ ಚರ್ಚೆ ಬೇಡ, ಅದನ್ನು ಪಕ್ಷ ವೇ ನಿರ್ಧರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಓವೈಸಿ ಜತೆಗೆ ಬಿಜೆಪಿ ಗುಪ್ತ ಸಭೆ

ಓವೈಸಿ ಜತೆಗೆ ಬಿಜೆಪಿ ಗುಪ್ತ ಸಭೆ

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಓವೈಸಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಗುಪ್ತ ಮಾತುಕತೆ ನಡೆಸಿದೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಸೋಮವಾರ ನಗರದ ಶಕ್ತಿ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಕೋಮುವಾದಿ ಓವೈಸಿ ಪಕ್ಷದೊಂದಿಗೆ ಮುಂಬರುವ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಹೈದರಾಬಾದ್ ನಲ್ಲಿ ಗುಪ್ತ ಸಭೆ ನಡೆಸಿದೆ. ಈ ಕುರಿತು ನಮಗೆ ಖಚಿತ ಮಾಹಿತಿ ಲಭ್ಯವಾಗಿದೆ ಎಂದರು.

ಬಿಜೆಪಿಯ ನಿಜ ಬಣ್ಣ ಬಯಲು

ಬಿಜೆಪಿಯ ನಿಜ ಬಣ್ಣ ಬಯಲು

ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳ ಜತೆಗೆ ಕಾಂಗ್ರೆಸ್ ಗೆ ಸಂಪರ್ಕವಿದೆ ಎಂದು ಆರೋಪಿಸುವ ಬಿಜೆಪಿ ಇದೀಗ ಓವೈಸಿ ಮಾಡುಕತೆ ನಡೆಸುವ ಮೂಲಕ ತಮ್ಮ ನಿಜ ಬಣ್ಣವನ್ನು ಬಯಲು ಮಾಡಿಕೊಂಡಂತಾಗಿದೆ ಎಂದು ದೂರಿದ್ದಾರೆ.

ಈ ಹಿಂದೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ಕೆಲ ಸಂಘಟನೆಗಳ ಜತೆಗೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಕರ್ನಾಟಕದಲ್ಲೂ ಅದೇ ರೀತಿ ಕೆಲ ಸಂಘಟನೆಗಳೊಂದಿಗೆ ಅದರಲ್ಲೂ ಆತಂಕಕಾರಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಪಿಎಫ್ ಐ, ಎಸ್ ಡಿಪಿಐ ಸಂಘಟನೆಗಳೊಂದಿಗೆ ಬಿಜೆಪಿ ಒಳ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಇದರ ಬಗ್ಗೆ ನಮ್ಮ ಬಳಿ ಖಚಿತವಾದ ಆಧಾರವಿದ್ದು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+