ಕನ್ನಡ ಬೋರ್ಡ್ ಇಲ್ಲದ ಬೆಂಗಳೂರಿನ ಅಂಗಡಿಗಳಿಗೆ ಕಾದಿದೆ ಗಂಡಾಂತರ

Recommended Video

      ಬೆಂಗಳೂರಿನಲ್ಲಿ ಕನ್ನಡ ಬೋರ್ಡ್ ಇಲ್ಲದ ಅಂಗಡಿಗಳಿಗೆ ಕಾದಿದೆ ಗಂಡಾಂತರ | Oneindia Kannada

      ಬೆಂಗಳೂರು, ನವೆಂಬರ್ 17: ಅಂಗಡಿ ಮುಂಗಟ್ಟುಗಳ ನಾಮ ಫಲಕಗಳಲ್ಲಿ ಕನ್ನಡ ಬಳಸಲು ಬಿಬಿಎಂಪಿ ನವೆಂಬರ್ 30ರ ಗಡುವು ನೀಡಿದೆ. ಈಗಾಗಲೇ ಬೋರ್ಡ್ ಗಳನ್ನು ಅಳವಡಿಸಿಕೊಳ್ಳುವಂತೆ ಅಂಗಡಿಗಳ ಮಾಲಿಕರಿಗೆ ವಿನಂತಿ ಮಾಡಿಕೊಳ್ಳುತ್ತಿದ್ದು, ತಪ್ಪಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

      "ಬಿಬಿಎಂಪಿಯ ಎಲ್ಲಾ ವಲಯಗಳ ಜಂಟಿ ಆಯುಕ್ತರಿಗೆ ತಮ್ಮ ತಮ್ಮ ವಲಯಗಳಲ್ಲಿರುವ ಎಲ್ಲಾ ಸಂಸ್ಥೆಗಳ ಫಲಕಗಳಲ್ಲಿ ಕನ್ನಡ ಬಳಸುವಂತೆ ಮಾಡಲು ಸೂಚನೆ ನೀಡಲಾಗಿದೆ," ಎಂದು ಮೇಯರ್ ಸಂಪತ್ ರಾಜ್ ಹೇಳಿದ್ದಾರೆ.

      Shops without Kannada boards to face action in Bengaluru

      "ಕೆಡಿಎ ನೀಡಿದ ನಿರ್ದೇಶನದ ಮೇರೆಗೆ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ. ಡಿಸ್ಪ್ಲೇ ಬೋರ್ಡ್ ಗಳಲ್ಲಿ ಶೇಕಡಾ 60 ಜಾಗವನ್ನು ಕನ್ನಡ ಭಾಷೆಗೆ ಬಳಸಬೇಕು ಎಂಬ ನಿಯಮವಿದೆ. ಅದರ ಪ್ರಕಾರ ನಾವು ಕ್ರಮ ಕೈಗೊಂಡಿದ್ದೇವೆ," ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

      ನವೆಂಬರ್ ಅಂತ್ಯದೊಳಗೆ ಎಲ್ಲಾ ಬೋರ್ಡ್ ಗಳಲ್ಲಿ ಕನ್ನಡ ಇರುವಂತೆ ನೋಡಿಕೊಳ್ಳಲಿದ್ದೇವೆ ಎಂದು ಸಂಪತ್ ರಾಜ್ ಹೇಳಿದ್ದಾರೆ.

      ಇತ್ತೀಚೆಗೆ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಬೋರ್ಡ್ ಗಳಲ್ಲಿ ಕನ್ನಡ ಬಳಸುವಂತೆ ಮಂತ್ರಿಮಾಲ್ ಗೆ ನೊಟೀಸ್ ನೀಡಿದ್ದನ್ನೂ ಇಲ್ಲಿ ಸ್ಮರಿಸಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+