Shopping Streets Near Metro: ಬೆಂಗಳೂರಿನಲ್ಲಿ ಮೆಟ್ರೋ ನಿಲ್ದಾಣದ ಬಳಿಯಿರುವ ಶಾಪಿಂಗ್ ಸ್ಟ್ರೀಟ್‌ಗಳಿವು-ಇಲ್ಲಿದೆ ಮಾಹಿತಿ
Shopping Streets Near Metro Station: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ರೈಲು ಕೂಡ ಒಂದಾಗಿದೆ. ನಗರದ ಬಹುತೇಕ ಮಂದಿ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಮೆಟ್ರೋ ಸಾರಿಗೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾದರೆ ನೀವು ಒಂದು ವೇಳೆ ಶಾಪಿಂಗ್ ಮಾಡಬೇಕೆಂದರೆ, ಮೆಟ್ರೋ ನಿಲ್ದಾಣದ ಪಕ್ಷದಲ್ಲಿವೆ ಶಾಪಿಂಗ್ ಸ್ಟ್ರೀಟ್‌ಗಳು. ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರಿನಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಕಡಿಮೆ ಸಮಯದಲ್ಲಿ ಶಾಪಿಂಗ್ ಮಾಡಬೇಕೆ. ಹಾಗಾದರೆ ಮೆಟ್ರೋ ನಿಲ್ದಾಣದ ಪಕ್ಷದಲ್ಲೇ ಇವೆ ನೋಡಿ ಶಾಪಿಂಗ್ ಸ್ಟ್ರೀಟ್‌ಗಳು. ಹಾಗಾದರೆ ದೂರ, ತಲುಪಲು ಸಮಯ ಎಷ್ಟು ಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

1. ಕಮರ್ಷಿಯಲ್ ಸ್ಟ್ರೀಟ್: ಪರ್ಪಲ್ ಲೈನ್ ಆದ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ಈ ಸ್ಟ್ರೀಟ್ ಇದೆ. ಇದು ಮೆಟ್ರೋ ನಿಲ್ದಾಣದದಿಂದ ಕೇಲವ 800 ಮೀಟರ್ ದೂರ ಆಗಲಿದ್ದು, ಇಲ್ಲಿಗೆ 10-11 ನಿಮಿಷಗಳ ಒಳಗೆ ತಲುಪಬಹುದಾಗಿದೆ.
2. ಚಿಕ್ಕಪೇಟೆ ಸ್ಟ್ರೀಟ್: ಇದು ಗ್ರೀನ್ ಲೈನ್ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಬಳಿಯೇ ಇದೆ. ಮೆಟ್ರೋ ನಿಲ್ದಾಣದಿಂದ ಕೇವಲ 500 ಮೀಟರ್ ದೂರಲ್ಲಿದ್ದು, ತಲುಪಲು ಬೇಕಾಗುವುದು 7 ನಿಮಿಷ ಅಷ್ಟೇ.
3. ಜಯನಗರ 4ನೇ ಬ್ಲಾಕ್: ಇದು ಗ್ರೀನ್ ಲೈನ್ ಜಯನಗರ ಮೆಟ್ರೋ ನಿಲ್ದಾಣದ ಬಳಿಯೇ ಇದೆ. ಮೆಟ್ರೋ ನಿಲ್ದಾಣದಿಂದ ಕೇವಲ 500 ಮೀಟರ್ ದೂರಲ್ಲಿದ್ದು, ತಲುಪಲು ಬೇಕಾಗುವುದು 7 ನಿಮಿಷ ಅಷ್ಟೇ.
4. ಬ್ರಿಗೇಡ್ ರಸ್ತೆ ಸ್ಟ್ರೀಟ್: ಪರ್ಪಲ್ ಲೈನ್ ಆದ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ಈ ಸ್ಟ್ರೀಟ್ ಇದೆ. ಇದು ಮೆಟ್ರೋ ನಿಲ್ದಾಣದದಿಂದ ಕೇಲವ 800 ಮೀಟರ್ ದೂರ ಆಗಲಿದ್ದು, ಇಲ್ಲಿಗೆ ನಡೆದುಕೊಂಡು ಹೋದರೆ 10 ನಿಮಿಷಗಳ ಒಳಗೆ ತಲುಪಬಹುದಾಗಿದೆ.
5. ಮಲ್ಲೇಶ್ವರಂ ಶಾಪಿಂಗ್ ಪಾಯಿಂಟ್: ಗ್ರೀನ್ ಲೈನ್ ಶ್ರೀರಾಂಪುರ ಮೆಟ್ರೋ ನಿಲ್ದಾಣದ ಹತ್ತಿರದಲ್ಲೇ ಈ ಶಾಂಪಿಂಗ್ ಪಾಯಿಂಟ್ ಇದೆ. ಇದು ಮೆಟ್ರೋ ನಿಲ್ದಾಣದದಿಂದ ಕೇಲವ 1.5 ಕಿಮೀ ದೂರ ಆಗಲಿದ್ದು, ಇಲ್ಲಿಗೆ ನಡೆದುಕೊಂಡು ಹೋದರೆ 15 ನಿಮಿಷಗಳ ಒಳಗೆ ತಲುಪಬಹುದಾಗಿದೆ.
6. ಚರ್ಚ್ ಸ್ಟ್ರೀಟ್: ಪರ್ಪಲ್ ಲೈನ್ ಆದ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ಈ ಸ್ಟ್ರೀಟ್ ಇದೆ. ಇದು ಮೆಟ್ರೋ ನಿಲ್ದಾಣದದಿಂದ ಕೇಲವ 300 ಮೀಟರ್ ದೂರ ಇದ್ದು, ಇಲ್ಲಿಗೆ 5 ನಿಮಿಷದ ಒಳಗೆ ನಡೆದುಕೊಂಡು ತಲುಪಬಹುದಾಗಿದೆ.
7. ಅವೆನ್ಯೂ ರಸ್ತೆ ಸ್ಟ್ರೀಟ್: ಗ್ರೀನ್ ಲೈನ್ ಆದ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ಈ ಸ್ಟ್ರೀಟ್ ಇದೆ. ಇದು ಮೆಟ್ರೋ ನಿಲ್ದಾಣದದಿಂದ ಕೇಲವ 500 ಮೀಟರ್ ದೂರ ಇದ್ದು, ಇಲ್ಲಿಗೆ 5 ನಿಮಿಷದ ಒಳಗೆ ತಲುಪಬಹುದಾಗಿದೆ.
8. ಗಾಂಧಿ ಬಜಾರ್: ಗ್ರೀನ್ ಲೈನ್ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಬಳಿಯೇ ಈ ಸ್ಟ್ರೀಟ್ ಇದೆ. ಮೆಟ್ರೋ ನಿಲ್ದಾಣದಿಂದ 600 ಮೀಟರ್ ಆಗಲಿದ್ದು, 10 ನಿಮಿಷಗಳ ಒಳಗೆ ಇಲ್ಲಿಗೆ ನಡೆದುಕೊಂಡು ಹೋಗಬಹುದಾಗಿದೆ.
9. ಕೆಆರ್ ಮಾರುಕಟ್ಟೆ: ಇದು ಗ್ರೀನ್ ಲೈನ್ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಸ್ವಲ್ಪ ದೂರದಲ್ಲೇ ಇದೆ. ಮೆಟ್ರೋ ನಿಲ್ದಾಣದಿಂದ 1 ಕಿಲೋ ಮೀಟರ್ ದೂರ ಆಗಲಿದ್ದು, 11-15 ನಿಮಿಷಗಳ ಒಳಗೆ ಇಲ್ಲಿಗೆ ಹೋಗಬಹುದಾಗಿದೆ.
10. ನ್ಯಾಷನಲ್ ಮಾರುಕಟ್ಟೆ: ಈ ಮಾರುಕಟ್ಟೆ ಪರ್ಪಲ್ ಲೈನ್ ಆದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಬಳಿಯೇ ಇದೆ. ಮೆಟ್ರೋ ನಿಲ್ದಾಣದಿಂದ ಸುಮಾರು 2 ಕಿಲೋ ಮೀಟರ್ ಆಗಲಿದ್ದು, ಆಟೋ ಹತ್ತಿ ಹೋದರೆ, ಕೇಲವ 15 ನಿಮಿಷಗಳ ಒಳಗೆ ತಲುಪಬುದಾಗಿದೆ.












Click it and Unblock the Notifications