ದಿ. ಶಾಂತವೇರಿ ಗೋಪಾಲಗೌಡರ ಪತ್ನಿ ಸೋನಕ್ಕ ವಿಧಿವಶ
ಬೆಂಗಳೂರು: ರಾಜ್ಯ ಕಂಡ ಮಾದರಿ ರಾಜಕಾರಣಿ, ಸಮಾಜವಾದಿ ನಾಯಕ ತೀರ್ಥಹಳ್ಳಿಯ ಮಾಜಿ ಶಾಸಕ, ದಿವಂಗತ ಶಾಂತವೇರಿ ಗೋಪಾಲಗೌಡರ ಅವರ ಪತ್ನಿ ಸೋನಕ್ಕ(85) ವಿಧಿವಶರಾಗಿದ್ದಾರೆ.
ಕಳೆದ ಆಗಸ್ಟ್ ನಿಂದ ಮೂರು ಬಾರಿ ಬಿದ್ದು ಅನಾರೋಗ್ಯಕ್ಕೆ ಈಡಾಗಿದ್ದ ಸೋನಕ್ಕ ಅವರು ಗುರುವಾರ ಮಧ್ಯಾಹ್ನ ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನವೆಂಬರ್ 1ರ ಮಧ್ಯಾಹ್ನ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಶಾಂತವೇರಿ ಗೋಪಾಲಗೌಡರ ಪುತ್ರ ರಾಮ್ ಮನೋಹರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸೋನಕ್ಕ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಸದಾಶಿವ ನಗರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮಲೆನಾಡಿನ ಸಾಧಕ ರಾಜಕಾರಣಿ, ಮಾದರಿ ರಾಜಕಾರಣಿಗೆ ಸಾಥ್ ನೀಡಿದ್ದ ಸೋನಕ್ಕ ಹುಬ್ಬಳ್ಳಿ ಮೂಲದವರಾಗಿದ್ದು ಅವರ ನಿಧನಕ್ಕೆ ಮಲೆನಾಡಿನ ನಾಯಕರು, ಸಮಾಜವಾದಿ ಚಿಂತಕರು, ಸಾಹಿತಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications