ಜಕ್ಕೂರು ವಿಮಾನ ತರಬೇತಿ ಶಾಲೆಯಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ
ಬೆಂಗಳೂರು, ಡಿಸೆಂಬರ್ 5: ಸರ್ಕಾರಿ ಸ್ವಾಮ್ಯದ ಜಕ್ಕೂರು ವಿಮಾನ ತರಬೇತಿ ಕೇಂದ್ರದಲ್ಲಿ ತರಬೇತುದಾರನೊಬ್ಬ ವಿಮಾನ ಹಾರಾಟ ಕಲಿಯಲು ಬಂದ ಯುವತಿಯರಿಗೆ ಲೈಂಗಿಕ ಕಿರುಕುಳ ಕೊಟ್ಟ ಗಂಭೀರ ಆರೋಪ ಕೇಳಿಬಂದಿದೆ.
ಕಳೆದ ಒಂದು ವರ್ಷದಿಂದ ಸರ್ಕಾರದ ಸಾಮಾಜಿಕ ಸುರಕ್ಷಾ ಯೋಜನೆಯಡಿ ವಿಮಾನ ಹಾರಾಟ ತರಬೇತಿ ಪಡೆಯಲು ಬಂದಿರುವ ದಲಿತ ಯುವತಿಯರು ಸೇರಿದಂತೆ ಒಟ್ಟು ಏಳು ಮಂದಿ ಯುವತಿಯರಿಗೆ ಅಮರ್ ಜಿತ್ ಸಿಂಗ್ ಎಂಬಾತ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿರುವ ದೂರು ಲಿಖಿತ ರೂಪದಲ್ಲಿ ದಾಖಲಾಗಿದೆ.
ಯುವತಿಗೆ ತರಬೇತಿದಾರ 900ಕ್ಕೂ ಹೆಚ್ಚು ವಾಟ್ಸಪ್ ಸಂದೇಶವನ್ನು ಕಳುಹಿಸಿದ್ದು, ಅವರೊಂದಿಗೆ ಕಳೆದ ಒಂಭತ್ತು ತಿಂಗಳಿಂದ ಅಸಭ್ಯವಾಗಿ ವರ್ತಿಸುತ್ತಾ ಬಂದಿದ್ದಾನೆ. ವಿಮಾನ ಹಾರಾಟ ತರಬೇತಿ ಸಂದರ್ಭದಲ್ಲಿ ವಿಮಾನ ಆಕಾಶದಲ್ಲಿ ಹಾರಾಡುತ್ತಿರುವ ಸಂದರ್ಭದಲ್ಲೂ ಒಂಟಿಯಾಗಿರುವ ಯುವತಿಯೊಂದಿಗೆ ತರಬೇತುದಾರ ಅನುಚಿತವಾಗಿ ವರ್ತಿಸುತ್ತಿದ್ದಾನೆ ಎಂದು ಯುವತಿಯರು ನೀಡಿರುವ ಲಿಖಿತ ದೂರಿನಲ್ಲಿ ಆರೋಪಿಸಲಾಗಿದೆ.

ಅಲ್ಲದೆ ಇನ್ನೊಬ್ಬ ಯುವತಿಗೆ ವಾಟ್ಸಪ್ ಸಂದೇಶ ಕಳುಹಿಸಿರುವ ತರಬೇತುದಾರ ನೀನು ನ್ನೊಂದಿಗೆ ಹಾಸಿಗೆ ಹಂಚಿಕೊಂಡರೆ 1 ಕೋಟಿ ರೂ ನೀಡುತ್ತೇನೆ ಎಂದು ಆಮಿಷವೊಡ್ಡಿದ್ದಾನೆ. ಇದೇ ರೀತಿ ಹಲವು ಯುವತಿಯರಿಗೆ ಕಿರುಕುಳ ನೀಡಿರುವ ಕುರಿತು ವಾಟ್ಸಪ್ ಸಂದೇಶ ಇನ್ನಿತರೆ ದಾಖಲೆಗಳು ಲಭ್ಯವಾಗಿವೆ.












Click it and Unblock the Notifications