ಬಿಗ್ ಬಜಾರ್ ಮ್ಯಾನೇಜರ್ ಮೇಲೆ ಲೈಂಗಿಕ ಕಿರುಕುಳ ಆರೋಪ
ಬಿಗ್ ಬಜಾರ್ ಮ್ಯಾನೇಜರ್, ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದುದಲ್ಲದೆ, ಈ ಬಗ್ಗೆ ಯಾರಿಗಾದರೂ ಹೇಳಿದರೆ ಕಳ್ಳತದ ಆರೋಪ ಹೊರಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದ.
ಬೆಂಗಳೂರು, ಏಪ್ರಿಲ್ 11: ಬಿಗ್ ಬಜಾರ್ ಮ್ಯಾನೇಜರ್ ಒಬ್ಬ ತಮ್ಮಲ್ಲಿ ಬ್ಯೂಟಿ ಅಡ್ವೈಸರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.[ಬೆಂಗಳೂರಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ]
ಬೆಂಗಳೂರಿನ ಬಾಣಸವಾಡಿಯ ರಿಂಗ್ ರೋಡ್ ಬಿಗ್ ಬಜಾರ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎಂ.ಡಿ.ಕಾರ್ತೀಕ್ ಎಂಬುವವರು ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಸೇಲ್ ಐಟೆಂ ಜೋಡಿಸುವ ನೆಪದಲ್ಲಿ ಮೈಕೈ ಮುಟ್ಟುತ್ತಿದ್ದುದಲ್ಲದೆ, ಇದನ್ನು ವಿರೋಧಿಸಿದರೆ ಮಹಿಳೆಯ ಮೇಲೆ ಕಳ್ಳತನದ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕುತ್ತಿದ್ದರು.[ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಡ್ಯಾನ್ಸ್ ಅಧ್ಯಾಪಕನಿಂದ ಅತ್ಯಾಚಾರ]
ಇದರಿಂದ ನೊಂದ ಮಹಿಳೆ ಆಡಳಿತ ಮಂಡಳಿಗೆ ದೂರು ನೀಡಿದರೆ, ಆಕೆಯನ್ನೇ ಕಂಪೆನಿ ಕೆಲಸದಿಂದ ತೆಗೆದುಹಾಕಿದೆ. ಕಿರುಕುಳಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಪೊಲೀಸರೂ ಸಿದ್ಧರಿರಲಿಲ್ಲ ಎಂದು ಯುವತಿ ದೂರಿದ್ದಾರೆ. ಸದ್ಯಕ್ಕೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.