• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಡ ಕಲಾವಿದರಿಗೆ ದಿನಸಿ ನೀಡಿದ ಹಿರಿಯ ನಟಿ ಲೀಲಾವತಿ

|

ಬೆಂಗಳೂರು, ಏಪ್ರಿಲ್ 03: ಲಾಕ್‌ಡೌನ್‌ನಿಂದ ದಿನನಿತ್ಯದ ಕೂಲಿ ಕಾರ್ಮಿಕರಿಗೆ ದೊಡ್ಡ ಸಮಸ್ಯೆಯಾಗಿದೆ. ಚಿತ್ರರಂಗದ ಬಡ ಕಲಾವಿದರು ಸಹ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಇಂತಹವರ ನೆರವಿಗೆ ಇದೀಗ ಹಿರಿಯ ನಟಿ ಲೀಲಾವತಿ ಬಂದಿದ್ದಾರೆ.

ಲಾಕ್‌ಡೌನ್‌ನಿಂದ ತೊಂದರೆಯಲ್ಲಿ ಇದ್ದ ಜೂನಿಯರ್ ಆರ್ಟಿಸ್ಟ್‌ಗಳ ಕುಟುಂಬಕ್ಕೆ ದಿನಸಿಯನ್ನು ಲೀಲಾವತಿ ನೀಡಿದ್ದಾರೆ. ನಿನ್ನೆ ಬೆಂಗಳೂರಿನ ಸುಮ್ಮನಹಳ್ಳಿಯಲ್ಲಿ ಜೂನಿಯರ್ ಆರ್ಟಿಸ್ಟ್‌ಗಳ ಸಂಘಕ್ಕೆ ಆಹಾರ ಪದಾರ್ಥಗಳನ್ನು ಕೊಟ್ಟಿದ್ದಾರೆ. ಲೀಲಾವತಿ ಪುತ್ರ ವಿನೋದ್ ರಾಜ್ ಸಹ ಈ ವೇಳೆ ಹಾಜರಿದ್ದರು.

ಅವಳಿ ಮಕ್ಕಳಿಗೆ 'ಕೊರೊನಾ', 'ಕೋವಿಡ್' ಎಂದು ಹೆಸರಿಟ್ಟ ತಂದೆ ತಾಯಿ

ತಮ್ಮ ತೋಟದಲ್ಲಿ ಬೆಳೆದ ಬೆಳೆಗಳೊಂದಿಗೆ, ನೆಲಮಂಗಲದ ಅಂಗಡಿಯಲ್ಲಿ ದಿನಸಿ ವಸ್ತುಗಳನ್ನು ಕೊಂಡುಕೊಂಡು ಕಲಾವಿದರಿಗೆ ನೀಡಿದ್ದಾರೆ. ನೂರಾರೂ ಬಡ ಕಲಾವಿದರ ಹೊಟ್ಟೆ ಇದರಿಂದ ತುಂಬಿದೆ. ಲೀಲಾವತಿಯವರ ಈ ಕೆಲಸ ಕಂಡು ಆ ಕಲಾವಿದರು ಖುಷಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಗ್ರಾಮದಲ್ಲಿ ನಟ ವಿನೋದ್ ರಾಜ್ ತಾವೇ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದರು. ಕೊರೊನಾ ವೈರಸ್‌ ಭೀತಿ ಇದ್ದ ಕಾರಣ ಕ್ರಿಮಿನಾಶಕ ಸಿಂಪಡಿಸಿ ಕೊರೊನಾ ನಿಯಂತ್ರಣ ಕೆಲಸದಲ್ಲಿ ಭಾಗಿಯಾಗಿದ್ದರು.

ಸಿನಿಮಾಗಳು ಹಾಗೂ ಧಾರಾವಾಹಿಗಳ ಚಿತ್ರೀಕರಣ ಸಂಪೂರ್ಣ ಬಂದ್ ಆಗಿರುವ ಕಾರಣ ಇದೇ ಕೆಲಸವನ್ನು ನಂಬಿಕೊಂಡ ನೂರಾರೂ ಕುಟುಂಬಗಳಿಗೆ ತೊಂದರೆ ಆಗಿದೆ.

English summary
Kannada senior actress Leelavathi distributed food items to junior artists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X