Get Updates
Get notified of breaking news, exclusive insights, and must-see stories!

ವಿರಾಟ್‌ ಕೊಹ್ಲಿ ಬಳಿ ಬಂದ ಅಭಿಮಾನಿಯನ್ನು ಕಾಲಲ್ಲಿ ತುಳಿದ ಸೆಕ್ಯೂರಿಟಿ ಸಿಬ್ಬಂದಿ-ರೂಪೇಶ್‌ ರಾಜಣ್ಣ ಹೇಳಿದ್ದೇನು?

ನಿಯಮದ ಪ್ರಕಾರ ಕ್ರಿಕೆಟ್‌ ಪಂದ್ಯ ನಡೆಯುವಾಗ ಕ್ರಿಕೆಟ್‌ ಮೈದಾನದ ಒಳಗಡೆ ಆಟಗಾರರು ಆಂಪೈರ್ಸ್‌ಗಳನ್ನು ಹೊರತುಪಡಿಸಿ ಯಾರು ಬರುವಂತಿಲ್ಲ. ಆದರೂ ಈಗಾಗಲೇ ಮ್ಯಾಚ್‌ ನಡೆಯುವ ವೇಳೆ ಅಭಿಮಾನಿಗಳು ತಮ್ಮ ಇಷ್ಟದ ಆಟಗಾರರನ್ನು ಭೇಟಿ ಮಾಡಲು ಮೈದಾನಕ್ಕೆ ನುಗ್ಗಿದ ಘಟನೆಗಳು ನಡೆದಿದ್ದು, ಈ ವೇಳೆ ಅಭಿಮಾನಿಗಳಿಗೆ ಯಾವುದೇ ತೊಂದರೆ ಆಗದಂತೆ ಅಲ್ಲಿಂದ ಹೊರ ಕಳುಹಿಸಿಲಾಗಿದೆ. ಆದರೆ ಮೊನ್ನೆಯಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ ಅಭಿಮಾನಿಯನ್ನು ಸೆಕ್ಯೂರಿಟಿಗಳು ಥಳಿಸಿರುವ ಅಮಾನವೀಯ ಘಟನೆ ನಡೆದಿದೆ.

ಮೊನ್ನೆಯಷ್ಟೇ ಬೆಂಗಳೂರು ಚಿನ್ನಸ್ವಾಮಿ ಮೈದಾನದಲ್ಲಿ ಪಂಜಾಬ್‌ ಮತ್ತು ಆರ್‌ಸಿಬಿ ತಂಡಗಳ ನಡುವೆ ಪಂದ್ಯ ಪಡೆಯುತ್ತಿತ್ತು. ಈ ವೇಳೆ ಅಭಿಮಾನಿಯೊಬ್ಬರು ದಿಢೀರನೇ ಮೈದಾನಕ್ಕೆ ನುಗ್ಗಿ ಅಭಿಮಾನದಿಂದ ವಿರಾಟ್ ಕೊಹ್ಲಿ ಕಾಲು ಹಿಡಿದಿದ್ದಾರೆ.

Security guard staff trampled to virat Kohli fan in Bengaluru Stadium What dis Rupesh Rajanna Says

ಈ ವೇಳೆ ಸೆಕ್ಯೂರಿಟಿಗಳು ಆ ಅಭಿಮಾನಿಯನ್ನು ಸಮಾಧಾನದಿಂದ ಹೊರಗೆ ಕಳುಹಿಸಬಹುದಾಗಿತ್ತು. ಆದರೆ ಕಾಲಲ್ಲಿ ತುಳಿದು ಅಮಾನವೀಯತೆಯನ್ನು ಮೆರೆದಿದ್ಧಾರೆ. ಇನ್ನು ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಇದಕ್ಕೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಇನ್ನು ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ತಮ್ಮ ಟ್ವೀಟ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಿವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. "ಮೊನ್ನೆಯ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನದಿಂದ ವಿರಾಟ್ ಕೊಹ್ಲಿ ಕಾಲು ಹಿಡಿದ ಅಭಿಮಾನಿಯೊಬ್ಬನಿಗೆ ಈ ರೀತಿ ಕಾಲಲ್ಲಿ ತುಳಿಯೋದು ಎಷ್ಟು ಸರಿ?, ತಪ್ಪು ಮಾಡಿದ್ರೆ ಕಾನೂನು ಕ್ರಮವಾಗಲಿ. ಆದರೆ ಅಲ್ಲಿನ ಸೆಕ್ಯೂರಿಟಿ ಸಿಬ್ಬಂದಿ ಆತನನ್ನು ತುಳಿದು ಹೊಡೆಯೋದು ಎಷ್ಟು ಸರಿ?," ಎಂದು ಪ್ರಶ್ನಿಸುವ ಮೂಲಕ ಕೆಂಡಕಾರಿದ್ದಾರೆ.

ಮಾರ್ಚ್‌ 25ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಆರ್‌ಸಿಬಿ ನಡುವೆ ಪಂದ್ಯ ನಡೆದಿದ್ದು, ಈ ವೇಳೆ ಪಂಜಾಬ್‌ ವಿರುದ್ಧದ ಆರ್‌ಸಿಬಿ ಗೆಲುವು ಸಾಧಿಸಿತು. ಈ ಮೂಲಕ ಆರ್‌ಸಿಟಿ ಲೀಗ್‌ನಲ್ಲಿ ತನ್ನ ಮೊದಲು ಗೆಲುವು ದಾಖಲಿಸಿದಂತಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 6 ವಿಕೆಟ್‌ ನಷ್ಟಕ್ಕೆ 177 ರನ್‌ಗಳನ್ನು ಕಲೆಹಾಕಿತು. ಇತ್ತ 177 ರನ್‌ಗಳ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ತಂಡ 19.2 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್‌ಗಳಿಂದ ಜಯ ಸಾಧಿಸಿತು.

ಈ ಪಂದ್ಯದಲ್ಲಿ ವಿರಾಟ್ ಕಿಂಗ್‌ ಕೊಹ್ಲಿ 49 ಎಸೆತಗಳಲ್ಲಿ 77 ರನ್ ಚಚ್ಚಿ ಮಿಂಚಿದ್ದರು. ಇನ್ನು ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿ ತಂಡದ ಗೆಲುವಿಗೆ ಮುಖ್ಯ ಪಾತ್ರರಾದರು. ಇದಕ್ಕೂ ಮುಂಚೆ ಮಹಿಪಾಲ್ ಲೊಮ್ರೋರ್ ಕೂಡ 8 ಎಸೆತಗಳಲ್ಲಿ ಅಜೇಯ 17 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ಆದರೂ ಇವರ ಈ ರನ್‌ಗಳು ಕೂಡ ತಂಡದ ಗೆಲುವಿಗೆ ಪ್ರಮುಖ ಕೊಡುಗೆಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.

ಉತ್ತಮ ಆರಂಭ ನೀಡಿದ ಕಿಂಗ್‌ ಕೊಹ್ಲಿ: 177 ರನ್ ಬೆನ್ನತ್ತಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದರು. ಆದರೆ ನಾಯಕ ಫಾಫ್ ಡುಪ್ಲೆಸಿಸ್ ಬೇಗ ವಿಕೆಟ್ ಒಪ್ಪಿಸಿ ಆರಂಭದಲ್ಲಿಯೇ ಹೊಡೆತ ಕೊಟ್ಟರು. ಬಳಿಕ ಇದರ ಬೆನ್ನಲ್ಲೇ ಕ್ಯಾಮರೂನ್ ಗ್ರೀನ್ ವಿಕೆಟ್ ಬಿದ್ದಿದ್ದು, ಡುಪ್ಲಿಸಿಸ್ ಹಾಗೂ ಗ್ರೀನ್ ತಲಾ 3 ರನ್ ಸಿಡಿಸಿದರಷ್ಟೇ. ಬಳಿಕ ಕಣದಲ್ಲಿ ಒಬ್ಬೊಂಟಿಯಾಗಿ ಹೋರಾಡುತ್ತಿದ್ದ ಕಿಂಗ್‌ ಕೊಹ್ಲಿಗೆ ಗ್ಲೇನ್‌ ಮ್ಯಾಕ್ಸ್‌ವೆಲ್‌ ಆದ್ರೂ ಸಾಥ್‌ ನೀಡುತ್ತಾರೆ ಎನ್ನುವ ಭರವಸೆ ಅಭಿಮಾನಿಗಳಲ್ಲಿತ್ತು. ಆದರೆ ಇದು ಕೂಡ ವಿಫಲವಾಯಿತು.

ಮ್ಯಾಕ್ಸಿ ಕೇವಲ 3 ರನ್ ಸಿಡಿಸಿ ವಿಕೆಟ್‌ ಒಪ್ಪಿಸಿದರು. ನಂತರವೂ ಕೊಹ್ಲಿ ಹೋರಾಟ ಮಾತ್ರ ಅಬ್ಬರದಿಂದಲೇ ಮುಂದುವರೆದಿತ್ತು. ನಂತರ ಬಂದ ರಜತ್ ಪಾಟೀದಾರ್ ಕೂಡ ಹೆಚ್ ಸಮಯ ಮೈದಾನದಲ್ಲಿರದೇ, 18 ರನ್ ಸಿಡಿಸಿ ಔಟಾದರು. ಆಗಳು ಕೊಹ್ ಎದೆಗುಂದದೇ ತಮ್ಮ ಏಕಾಂಗಿ ಹೋರಾಟವನ್ನು ಮುಂದುವರೆಸಿ ಅರ್ಧ ಶತಕವನ್ನು ಮಾಡಿಕೊಂಡರು. ನಂತರ 77 ರನ್‌ ಸಿಡಿಸಿ ಔಟಾದರು. 49 ಎಸೆತದಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಕಿಂಗ್‌ ಕೊಹ್ಲಿ 77 ರನ್ ಸಿಡಿಸಿ ಔಟಾದರು.

ಬಳಿಕ ಅನೂಜ್ ರಾವತ್ 11 ರನ್ ಸಿಡಿಸಿ ಔಟಾದರು. ಆದರೆ ಮಹಿಪಾಲ್ ಲೊಮ್ರೊರ್ ಹಾಗೂ ದಿನೇಶ್ ಕಾರ್ತಿಕ್ ಆಟ ಪಂದ್ಯದ ಗತಿಯನ್ನೇ ಬೇರೆಡೆ ಕರೆದುಕೊಂಡು ಹೋಯಿತು. ಲೊಮ್ರೊರ್ ಹಾಗೂ ದಿನೇಶ್‌ ಕಾರ್ತಿಕ್ ಬೌಂಡರಿ, ಸಿಕ್ಸ್‌ಗಳ ಸುರಿಮಳೆ ಸುರಿಸುವ ಮೂಲಕ ಆರ್‌ಸಿಬಿ ಗೆಲುವಿಗೆ ಪ್ರಮುಖ ಪಾತ್ರ ವಹಿಸುವ ಮೂಲಕ ಅಭಿಮಾನಿಗಳ ನಿರಾಸೆಯನ್ನು ಹೋಗಾಲಾಡಿಸಿರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+