ದ್ವಿಪತ್ನಿತ್ವ ಪ್ರಕರಣ: ಎರಡನೇ ಹೆಂಡತಿ ಹಾಗೂ ಆಕೆಯ ಬಂಧುಗಳ ವಿರುದ್ಧ ಕಾನೂನು ಕ್ರಮವಿಲ್ಲ ಎಂದ ಹೈಕೋರ್ಟ್

ಬೆಂಗಳೂರು, ಮಾರ್ಚ್ 30: ದ್ವಿಪತ್ನಿತ್ವ ಪ್ರಕರಣಗಳಲ್ಲಿ 2ನೇ ಸಂಗಾತಿ ಮತ್ತು ಬಂಧುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಇದರಿಂದಾಗಿ ಅಂತಹ ಹಲವು ಪ್ರಕರಣಗಳು ವಿಲೇವಾರಿಯಾಗಲಿವೆ.

ಐಪಿಸಿ ಸೆಕ್ಷನ್‌ 494 ಅಡಿ ಹಿಂದಿನ ಮದುವೆ ಚಾಲ್ತಿಯಲ್ಲಿದ್ದಾಗ ಪತಿ ಎರಡನೇ ಮದುವೆ ಆದರೆ ಆಗ ಆತನನ್ನು ವಿಚಾರಣೆಗೆ ಒಳಪಡಿಸಬಹುದೇ ಹೊರತು, ಆತನನ್ನು ಎರಡನೇ ಮದುವೆ ಆದವರನ್ನು ಮತ್ತು ಅವರ ಕುಟುಂಬದವರನ್ನಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Second Spouse Or Their Family Can t Be Prosecuted in Bigamy case High Court

ಅಲ್ಲದೆ, ಎರಡನೇ ಪತ್ನಿಯ ಪೋಷಕರು ಹಾಗೂ ಸಹೋದರಿಯ ಮೇಲೆ ಹೂಡಿದ್ದ ಪ್ರಕರಣವನ್ನು ರದ್ದು ಮಾಡಿರುವ ನ್ಯಾಯಾಲಯ ಎರಡನೇ ಮದುವೆ ಆದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಬಹುದೇ ಹೊರತು, ಅವರನ್ನು ಮದುವೆಯಾಗಿರುವ ಎರಡನೇ ಪತ್ನಿ ಹಾಗೂ ಅವರ ಸಂಬಂಧಿಗಳ ವಿರುದ್ಧ ಐಪಿಸಿ ಸೆಕ್ಷನ್‌ 494 ರಡಿ ಪ್ರಕರಣ ಹೂಡಲಾಗದು ಎಂದು ಆದೇಶಿಸಿದೆ.

ಹೈಕೋರ್ಟ್ ಆದೇಶವೇನು..?

ಚಿತ್ರದುರ್ಗ ಜೆಎಂಎಫ್‌ಸಿ ನ್ಯಾಯಾಲಯದಲ್ಲಿತಮ್ಮ ವಿರುದ್ಧ ಹೂಡಿರುವ ಪ್ರಕರಣ ರದ್ದು ಕೋರಿ ಎರಡನೇ ಪತ್ನಿಯ ಪೋಷಕರು ಹಾಗೂ ಅವರ ಬಂಧುಗಳು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

''ಐಪಿಸಿ ಸೆಕ್ಷನ್‌ 494 ಅನ್ನು ಕೂಲಂಕಶವಾಗಿ ಪರಿಶೀಲಿಸಿದರೆ, ಮೊದಲ ಗಂಡ ಅಥವಾ ಹೆಂಡತಿ ಬದುಕಿದ್ದಾಗಲೇ ಪತಿ ಅಥವಾ ಪತ್ನಿ ಇನ್ನೊಂದು ಮದುವೆಯಾದರೆ ಅದು ಅಪರಾಧವಾಗುತ್ತದೆ. ಅಂತಹ ಪ್ರಕರಣಗಳಲ್ಲಿ ಏಳು ವರ್ಷಗಳವರೆಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿಅವಕಾಶವಿದೆ. ಆದರೆ ಅದರಲ್ಲೂ ಕೆಲವು ವಿನಾಯಿತಿಗಳಿವೆ, ಆದು ಈ ಪ್ರಕರಣದಲ್ಲಿ ಅನ್ವಯಿಸುತ್ತದೆ. ಎರಡನೇ ಮದುವೆಯಲ್ಲಿ ಭಾಗವಹಿಸಿದ್ದರು ಎನ್ನುವ ಕಾರಣಕ್ಕೆ ಎರಡನೇ ಪತಿಯ ಪೋಷಕರು ಹಾಗೂ ಬಂಧುಗಳನ್ನು ವಿಚಾರಣೆಗೊಳಪಡಿಸಲಾಗದು'' ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರ ವಕೀಲರು, ದ್ವಿಪತ್ನಿತ್ವ ಪ್ರಕರಣಗಳಲ್ಲಿಎರಡನೇ ಬಾರಿಗೆ ಯಾರು ಪತಿ ಅಥವಾ ಪತ್ನಿ ಮದುವೆಯಾಗುತ್ತಾರೋ ಅಂತಹವರನ್ನು ವಿಚಾರಣೆಗೆ ಗುರಿಪಡಿಸಬಹುದೇ ಹೊರತು, ಅವರ ಕುಟುಂಬದವರನ್ನಲ್ಲ. ಕಾನೂನಿನಲ್ಲಿ ಕುಟುಂಬದವರ ವಿಚಾರಣೆಗೆ ಅವಕಾಶವೂ ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

ಮೊದಲನೇ ಪತ್ನಿ, ಎರಡನೇ ಪತ್ನಿ ಹಾಗೂ ಅವರ ಪೋಷಕರ ವಿರುದ್ಧ ದೂರು ನೀಡಿದ್ದರು. ಎರಡನೇ ಪತ್ನಿಯ ಪೋಷಕರು ಹಾಗೂ ಬಂಧುಗಳು ಮದುವೆಯಲ್ಲಿ ಭಾಗಿಯಾಗಿದ್ದರಿಂದ ಅವರನ್ನೂ ಸಹ ವಿಚಾರಣೆಗೊಳಪಡಿಸಬೇಕು ಎಂದು ಕೋರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+