ಬೆಂಗಳೂರಿನ ಕೊಮ್ಮಘಟ್ಟ ಕೆರೆಯಲ್ಲಿ ಸಾವಿರಾರು ಮೀನುಗಳ ಸಾವು

ಬೆಂಗಳೂರು, ಮೇ 30: ಬೆಂಗಳೂರಿನ ಕೊಮ್ಮಘಟ್ಟ ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

Recommended Video

      ಸದ್ಯದಲ್ಲೇ ಭಾರತದಲ್ಲಿ ತಯಾರಾಗಿದೆ ಕೋವಿಡ್ ಲಸಿಕೆ | Oneindia Kannada

      ನಗರದ ಪ್ರಮುಖ ಕೆರೆಗಳಲ್ಲಿ ಕೊಮ್ಮಘಟ್ಟ ಕೆರೆಯೂ ಕೂಡ ಒಂದು, ಕೊಮ್ಮಘಟ್ಟ ಕೆರೆ ಇಲ್ಲಿನ ಸಮೀಪದ ಕಾರ್ಖಾನೆಗಳ ತ್ಯಾಜ್ಯದ ನೀರನ್ನು ಅವೈಜ್ಞಾನಿಕವಾಗಿ ಬಿಡುತ್ತಿರುವುದೇ ಇಲ್ಲಿನ ಕೆರೆ ಮಾಲಿನ್ಯಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

      ಕೆಂಗೇರಿಯ ಸರ್ ಎಂ ವಿಶ್ವೇಶ್ವರಾಯ ಲೇಔಟ್ ನ ನಿವಾಸಿಗಳು ಅವೈಜ್ಞಾನಿಕ ಕಲ್ಮಶ ನೀರನ್ನು ಕೆರೆಗೆ ಬಿಡುತ್ತಿರುವ ಕುರಿತು ಬಿಡಿಎ ಅಧಿಕಾರಿಗಳಿ ಸಾಕಷ್ಟು ಬಾರಿ ದೂರು ನೀಡಿದ್ದಾರೆ. ಆದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ.

      fish

      ಸುಮಾರು 35 ಎಕೆರೆ ವಿಸ್ತೀರ್ಣದಲ್ಲಿರುವ ಕೊಮ್ಮಘಟ್ಟ ಕೆರೆಯಲ್ಲಿ ಟನ್ ಗಟ್ಟಲೆ ಮೀನುಗಳು ಸತ್ತು ನೀರಿನ ಮೇಲೆ ತೇಲುತ್ತಿದ್ದವು. ಸ್ಥಳೀಯ ಮೀನುಗಾರರೊಬ್ಬರು ತೆಪ್ಪದ ಮೂಲಕ ನೀರಿನ ಮೇಲಿದ್ದ ರಾಶಿ ರಾಶಿ ಮೀನುಗಳನ್ನು ತೆರವು ಮಾಡುತ್ತಿದ್ದ ದೃಶ್ಯ ವಿದ್ರಾವಕವಾಗಿತ್ತು.

      ಕೊಮ್ಮಘಟ್ಟ ಕೆರೆಯಲ್ಲಿ ಇಂತಹ ಘಟನೆ ಇದೇ ಮೊದಲೇನಲ್ಲ. ಈ ಹಿಂದೆಯೇ ಕೂಡ ಸಾಕಷ್ಟು ಬಾರಿ ಇಲ್ಲಿ ಮಾಲಿನ್ಯದಿಂದಾಗಿ ಮೀನುಗಳ ಸತ್ತು ನೀರಿನ ಮೇಲೆ ತೇಲುತ್ತಿದ್ದ ಸಾಕಷ್ಟು ಉದಾಹರಣೆಗಳಿವೆ, ಹೀಗಿದ್ದೂ ಇಲ್ಲಿನ ಅಧಿಕಾರಿಗಳು ಮಾತ್ರ ಏನೂ ಮಾತನಾಡುತ್ತಿಲ್ಲ.

      ಈ ಹಿಂದೆ ವರ್ತೂರು ಕೆರೆಯಲ್ಲಿಯೂ ಮೀನುಗಳು ಸತ್ತಿದ್ದವು, ಹಾಗೆಯೇ ಕರ್ನಾಟಕ ತಮಿಳುನಾಡು ಗಡಿಯಲ್ಲಿರುವ ಗಡಿ ಮಾರಗೊಂಡಪಲ್ಲಿಯಲ್ಲಿ ಕೂಡ ಲಕ್ಷಾಂತರ ಮೀನುಗಳು ಸಾವನ್ನಪ್ಪುತ್ತಿದೆ.

      ಈ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು 3 ಲಕ್ಷಕ್ಕೂ ಹೆಚ್ಚು ಮೀನು ಮರಿಗಳನ್ನು ಬಿಟ್ಟಿದ್ದು ಕೆರೆಗೆ ಬೆಂಗಳೂರಿನ ವರ್ತೂರು ಕೆರೆಯ ಕಲುಷಿತ ನೀರು ಹರಿದು ಬರುತ್ತದೆ ಇದರಿಂದಲೇ ನಿನ್ನೆ ರಾತ್ರಿ ಲಕ್ಷಾಂತರ ಮೀನುಗಳ ಮಾರಣಹೋಮವಾಗಿದೆ ಎಂದು ಅಲ್ಲಿನ ಜನರು ಆರೋಪಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+