ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಓಟಿ ಬಂತು ದಾರಿ ಬಿಡಿ: ಇಂಟರ್ ನೆಟ್ ಕುರಿತು ಸಂವಾದ

|
Google Oneindia Kannada News

ಬೆಂಗಳೂರು, ಮಾರ್ಚ್ 26: ಮುನ್ನೋಟ ಬುಕ್ ಸ್ಟೋರ್ ನ ಆದಿತ್ಯ ಕುಲಕರ್ಣಿಯವರು ಒಂದೊಂದು ನೂತನ ವಿಷಯವನ್ನಾಧರಿಸಿ ಅನೇಕ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಇಂದಿನ ಸಮಾಜದಲ್ಲಿ ಇಂಟರ್ ನೆಟ್ ಜನರ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ಈ ಕುರಿತು ಏಪ್ರಿಲ್ 1ರಂದು ಐಓಟಿ ಬಂತು ದಾರಿ ಬಿಡಿ ಎನ್ನುವ ಶೀರ್ಷಿಕೆಯೊಂದಿಗೆ ಮಿಸ್ತ್ರಾಲ್ ಸಲ್ಯುಶನ್ಸ್ ಸಂಸ್ಥೆಯ ಸಂಸ್ಥಾಪಕರಾದ ರಾಜೀವ್ ರಾಮಚಂದ್ರ ಮಾತನಾಡಲಿದ್ದಾರೆ.

ಐಓಟಿ ಎಂದರೆ ಇಂಟರ್ ನೆಟ್ ಆಫ್ ಥಿಂಗ್ಸ್, ಕನ್ನಡದಲ್ಲೇ ಅರಿವುಕಟ್ಟುವ ಹಂಚುವ ಕಾರ್ಯಕ್ರಮ ಇದಾಗಿದೆ. ಇಂಟರ್ ನೆಟ್ ಆಫ್ ಥಿಂಗ್ಸ್ ತಂತ್ರಜ್ಙಾನದ ಪ್ರಪಂಚದಲ್ಲಿ ಬಿರುಗಾಳಿ ಎಬ್ಬಿಸಿರುವ ಹೊಸ ಸಾಧ್ಯತೆ, ಮೊಬೈಲ್, ಟಿವಿ, ಕಂಪ್ಯೂಟರ್ ನಲ್ಲಿ ಇಂಟರ್ ನೆಟ್ ಬಳಸುವುದರ ಬಗ್ಗೆ ಎಲ್ಲರಿಗೂ ತಿಳಿದಿದೆ.

ಶಬ್ದದ ಕಥೆ ಕೇಳೋಣ, ಹಿಂದಿರುವ ಮಹತ್ವ ಅರಿಯೋಣ : ಸಂವಾದಶಬ್ದದ ಕಥೆ ಕೇಳೋಣ, ಹಿಂದಿರುವ ಮಹತ್ವ ಅರಿಯೋಣ : ಸಂವಾದ

ಆದರೆ ಟ್ರಾಫಿಕ್ ಸಿಗ್ನಲ್ ನಿಂದ ಹಿಡಿದು ಕಾರಿನವರೆಗೆ, ಮನೆಯಲ್ಲಿನ ಫ್ರಿಡ್ಜ್ ನಿಂದ ಹಿಡಿದು ಹಲ್ಲುಜ್ಜುವ ಬ್ರಶ್ ವರೆಗೆ ಎಲ್ಲಕ್ಕೂ ಇಂಟರ್ ನೆಟ್ ಸಂಪರ್ಕ ಸಿಕ್ಕಲ್ಲಿ, ಒಂದಿಷ್ಟು ಬುದ್ಧಿವಂತಿಕೆ ಬಂದಲ್ಲಿ ಏನಾಗಬಹುದು ಇದೆಲ್ಲವನ್ನು ಐಓಟಿ ಸಾಧ್ಯವಾಗಿಸುತ್ತದೆ.

Science talk on IOT bantu Daari Bidi

ಹಾಗಿದ್ದರೆ ಐಓಟಿ ಎಂದರೆ ಏನು ಅದು ಹೇಗೆ ಕೆಲಸ ಮಾಡುತ್ತದೆ, ಅದರ ಬಳಕೆಯ ಸಾಧ್ಯತೆಗಳೇನು, ಅದು ನಿಜಕ್ಕೂ ಸುರಕ್ಷಿತವೇ, ಇಂತಹ ಎಲ್ಲ ಪ್ರಶ್ನೆಗಳಿಗೆ ರಾಜೀವ ರಾಮಚಂದ್ರ ಅವರು ಕನ್ನಡದಲ್ಲಿಯೇ ಉತ್ತರ ನೀಡಲಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಏನು-ಇಂಟರ್ ನೆಟ್ ಕುರಿತು ಮಾಹಿತಿ ನೀಡುವ ಐಓಟಿ ಬಂದು ದಾರಿ ಬಿಡಿ ಸಂವಾದ
ಎಲ್ಲಿ-ಮುನ್ನೋಟ ಬುಕ್ ಸ್ಟೋರ್, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ನಾಗಸಂದ್ರ ವೃತ್ತ ಬಳಿ, ಬಸವನಗುಡಿ
ಯಾವಾಗ- ಏ.1 ಭಾನುವಾರ, ಬೆಳಗ್ಗೆ 11.30

English summary
Munnota Book Store Organising a Talk on Science called 'IOT Bantu Daari bidi' on April 1 at Munnota book store in Bengaluru. Founder of Mistral solutions speak about How IOT will change the way we live and work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X