ಮೆಟ್ರೋ ನಗರದ ಅಪಾರ್ಟ್‌ಮೆಂಟ್ ಜೀವನಕ್ಕೆ ಹೇಳಿ ಗುಡ್‌ಬೈ : ಇಲ್ಲಿ ಆಸ್ತಿ ಖರೀದಿಸಿದರೆ ಹಣ ವ್ಯರ್ಥ; ಯುವತಿಯ ವಿಡಿಯೋ ವೈರಲ್

ನಾವು ನಮ್ಮ ಶಾಲಾ ದಿನಗಳಲ್ಲಿ ಹಳ್ಳಿ ಮೇಲೋ ಸಿಟಿ ಮೇಲೋ ಎನ್ನುವ ಚರ್ಚೆಯಲ್ಲಿ ಭಾಗವಹಿಸಿರಬಹುದು. ನಮಗೆ ಸಿಕ್ಕಿರುವ ವಿಷಯಕ್ಕೆ ಅನುಗುಣವಾಗಿ ಭಾಷಣವನ್ನೂ ಮಾಡಿರಬಹುದು. ಆದರೆ ಇದೀಗ ನಿಜ ಜೀವನದಲ್ಲಿಯೂ ಈ ಚರ್ಚೆ ಹುಟ್ಟಿಕೊಂಡಿದೆ. ಓದು ಮುಗಿಯುತ್ತಿದ್ದ ಹಾಗೆ ಇತ್ತೀಚಿನ ಯುವಕರು ನಗರಗಳಿಗೆ ಅದು ಕೂಡಾ ಮೆಟ್ರೋ ನಗರಗಳಿಗೆ ಹಾರಿ ಬಿಡುತ್ತಾರೆ. ಒಂದಷ್ಟು ವರ್ಷ ಅಲ್ಲಿ ಬದುಕಿದ ಮೇಲೆ ಮತ್ತೆ ಊರಿಗೆ ವಾಪಸ್‌ ಬರುವುದು ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಆಗ ಅಲ್ಲಿಯೇ ತಮ್ಮ ವಾಸಕ್ಕೆ ಮನೆ ಖರೀದಿಗೂ ಮುಂದಾಗುತ್ತಾರೆ. ಈಗ ಏನಿದ್ದರೂ ಅಪಾರ್ಟ್‌ಮೆಂಟ್‌ಗಳದ್ದೇ ದರ್ಬಾರ್.‌ ಎಲ್ಲಿ ನೋಡಿದರೂ ಹೈ ರೈಸ್‌ ಬಿಲ್ಡಿಂಗ್‌ಗಳು.

ಮೆಟ್ರೋ ನಗರಗಳಲ್ಲಿ ಅಂಥದ್ದೇನಿದೆ ?

ನಗರದಲ್ಲಿರುವ ಇಂಥಹ ಬಹುಮಹಡಿ ಅಪಾರ್ಟ್‌ಮೆಂಟ್‌ಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಆದರೆ, ಇದೀಗ ಮೆಟ್ರೋ ನಗರಗಳಲ್ಲಿ ವಾಸಿಸುವ ಆಕರ್ಷಣೆಯನ್ನೇ ಇಲ್ಲೊಬ್ಬ ಮಹಿಳೆ ಪ್ರಶ್ನೆ ಮಾಡಿದ್ದಾರೆ. ಜನ ಯಾತಕ್ಕಾಗಿ ಮೆಟ್ರೋ ನಗರಗಳನ್ನು ಇಷ್ಟಪಡುತ್ತಿದ್ದಾರೆ? ಇಲ್ಲಿ ಏನಿದೆ ಅಂತ ತಮ್ಮ ಊರನ್ನು ಬಿಟ್ಟು ಬರುತ್ತಿದ್ದಾರೆ. ಹಳ್ಳಿಗಳ ಸ್ವಚ್ಛವಾದ ಪರಿಸರ, ಅಲ್ಲಿ ಸಿಗವ ಜನ ಬೆಂಬಲ ಮತ್ತು ಉತ್ತಮ ಗುಣಮಟ್ಟದ ಜೀವನ ನಗರಗಳಲ್ಲಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಮಹಿಳೆಯ ವಿಡಿಯೋ ಇದೀಗ ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ.

Say Goodbye To Metro City No Air Quality Buying Property Here Is Waste Of Money woman Video Goes Viral

ಹೊಸ ಪ್ರಶ್ನೆ ಹುಟ್ಟುಹಾಕಿದ ವಿಡಿಯೋ

ತಮ್ಮ ಹೈರೈಸ್‌ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ನಿಂತುಕೊಂಡು ವಿಡಿಯೋ ಮಾಡಿರುವ ದೀಕ್ಷಾ ಗುಪ್ತಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಜೊತೆಗೆ ತಮ್ಮ ಆಲೋಚನೆಗಳನ್ನು ಶೇರ್‌ ಮಾಡಿದ್ದಾರೆ. ದೀರ್ಘಾವಧಿಗೆ ಯೋಚನೆ ಮಾಡಿದರೆ ಮಹಾನಗರಗಳಲ್ಲಿ ದುಬಾರಿ ಆಸ್ತಿಯನ್ನು ಖರೀದಿಸುವುದು ಎಷ್ಟು ಯೋಗ್ಯ ಎನ್ನುವುದನ್ನು ಪ್ರಶ್ನೆ ಮಾಡಿದ್ದಾರೆ.

ಶುದ್ದ ನೀರೂ ಇಲ್ಲ ಗಾಳಿಯೂ ಇಲ್ಲ

ಮೆಟ್ರೋ ನಗರಗಳಲ್ಲಿ ವಾಸಿಸಲು ಇಷ್ಟ ಪಡುವ ಕಾರಣ ಯಾವುದು? ಎಂದು ಅವರು ಪ್ರಶ್ನಿಸಿದ್ದಾರೆ. ಇಲ್ಲಿ ನಿಮಗೆ ಶುದ್ಧ ಗಾಳಿಯೂ ಸಿಗುವುದಿಲ್ಲ, ಉತ್ತಮ ಗುಣಮಟ್ಟದ ಕುಡಿಯುವ ನೀರೂ ಸಿಗುವುದಿಲ್ಲ. ಶುದ್ದ ನೀರು ಬೇಕು ಎಂದಾದರೆ RO ನೀರನ್ನು ಕುಡಿಯಬೇಕು. ಅದು ಫಿಲ್ಟರ್ ಮಾಡಿದ ನೀರು. ಇದರ ಬದಲು ಒಮ್ಮೆಯಾದರೂ ಹಳ್ಳಿಯಲ್ಲಿ ನೀರು ಕುಡಿಯಲು ಪ್ರಯತ್ನಿಸಿ ಮತ್ತು ಅದರ ರುಚಿ ಮತ್ತು ಪ್ರಯೋಜನಗಳಲ್ಲಿನ ವ್ಯತ್ಯಾಸವನ್ನು ಕಂಡುಕೊಳ್ಳಿ ಎಂದು ಹೇಳಿದ್ದಾರೆ. ಮಹಾನಗರ ಜೀವನದ ದೀರ್ಘಕಾಲೀನ ಪ್ರಯೋಜನಗಳನ್ನು ಪ್ರಶ್ನಿಸುವ ಮೊದಲು, ಅವರು ಇಲ್ಲಿನ ನೀರಿನ ಗುಣಮಟ್ಟ ಮತ್ತು ಕೂದಲು ಉದುರುವಿಕೆಯಂತಹ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ್ದಾರೆ.

ಸ್ನಾನ ಮಾಡಲು ಶುದ್ಧ ನೀರು ಸಿಗುವುದಿಲ್ಲ, ಇಲ್ಲಿ ವಾಸಿಸಿದ ನಂತರ ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚಾಗುತ್ತಿದೆ. ಎಲ್ಲಾ ಸಮಸ್ಯೆಗಳನ್ನು ಮೈ ಮೇಲೆ ಹಾಕಿಕೊಂಡು ಬದುಕುವುದರಲ್ಲಿ ಅರ್ಥ ಏನಿದೆ ಎಂದು ಪ್ರಶ್ನಿಸಿದ್ದಾರೆ.

ಕಷ್ಟ ಕಾಲದಲ್ಲಿ ನೆನಪಾಗುವುದು ನಮ್ಮ ಸ್ವಂತ ಊರೇ

ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಹೆಚ್ಚಿನವರು ಪ್ರಮುಖ ನಗರಗಳನ್ನು ತೊರೆದು ತಮ್ಮ ಊರುಗಳು ಮತ್ತು ಹಳ್ಳಿಗಳಿಗೆ ಮರಳಿದ್ದಾರೆ. ಇಲ್ಲಿ ಆಸ್ತಿಯಲ್ಲಿ ಹೂಡಿಕೆ ಮಾಡಿದರೆ ಏನು ಪ್ರಯೋಜನ? ಮುಂದೊಂದು ದಿನ ನೀವು ನಿಮ್ಮ ಸ್ವಂತ ಊರಿಗೇ ವಾಪಸ್‌ ಹೋಗಬೇಕಾಗುತ್ತದೆ. ಇದರ ಬದಲು ಕೆಲಸ ಮಾಡಲು ಹಣ ಸಂಪಾದಿಸಲು ನಗರಗಳಿಗೆ ಬರಬಹುದು, ಆದರೆ ತಮ್ಮ ಉಳಿತಾಯವನ್ನು ತಮ್ಮ ಊರಿನಲ್ಲಿರುವ ಭೂಮಿ ಅಥವಾ ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದೇ ಜಾಣ್ಮೆ ಎಂದಿದ್ದಾರೆ. ಮೆಟ್ರೋ ನಗರಗಳಲ್ಲಿ ಇರಿ, ಕೆಲಸ ಮಾಡಿ ಮತ್ತು ಸಾಧ್ಯವಾದಷ್ಟು ಸಂಪಾದಿಸಿ. ಆದರೆ ಇಲ್ಲಿ ಆಸ್ತಿಯನ್ನು ಖರೀದಿಸಿ ಹಣ ವ್ಯರ್ಥ ಮಾಡಬೇಡಿ. ಹೂಡಿಕೆ ಮಾಡಲು ನಿಮ್ಮ ಸ್ವಂತ ಊರಿಗೇ ಹೋಗಿ ಎಂದು ಹೇಳಿದ್ದಾರೆ.

ಹಳ್ಳಿಗಳಲ್ಲಿ ಅಥವಾ ನಮ್ಮ ಸ್ವಂತ ಊರಿನಲ್ಲಿ ಸಿಗುವ ಬೆಂಬಲ ನಮಗೆ ಬೇರೆ ಎಲ್ಲೂ ಸಿಗಲು ಸಾಧ್ಯವಿಲ್ಲ. ಊರಿನಲ್ಲಿ ನಮಗೆ ಒಂದು ಸಮಸ್ಯೆ ಎದುರಾದರೆ, 100 ಕುಟುಂಬಗಳು ಜೊತೆಗೆ ಬಂದು ನಿಲ್ಲುತ್ತವೆ. ಆದರೆ, ನಗರಗಳಲ್ಲಿ ಪಕ್ಕದ ಫ್ಲಾಟ್‌ನಲ್ಲಿ ಯಾರಿದ್ದಾರೆ ಎನ್ನುವುದೇ ಗೊತ್ತಿರುವುದಿಲ್ಲ ಎಂದಿದ್ದಾರೆ.

ಇಂಟರ್ನೆಟ್ ಮೂಲಕ ಕಾಮೆಂಟ್‌

ಈ ಪೋಸ್ಟ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವಾರು ಬಳಕೆದಾರರು ಗುಪ್ತಾ ಮಾತನ್ನು ಒಪ್ಪಿಕೊಂಡಿದ್ದಾರೆ. ಹಳ್ಳಿಗಳಲ್ಲಿನ ಜೀವನವು ಶಾಂತಿಯನ್ನು ನೀಡುತ್ತದೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಐಷಾರಾಮಿ ಫ್ಲಾಟ್‌ಗಳಿಗಿಂತ ಶುದ್ಧ ಗಾಳಿ ಮತ್ತು ನೀರು ಮುಖ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಉದ್ಯೋಗಕ್ಕೆ ಮೆಟ್ರೋ ನಗರಗಳು ಬೆಸ್ಟ್‌ ಆದರೆ ಜೀವನಕ್ಕೆ ಅಲ್ಲ ಎಂದು ಮತ್ತೊಬ್ಬರು ರಿಯಾಕ್ಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+