ಎಸ್‌ಎಪಿ ಬೆಂಗಳೂರು ಹೊಸ ಕ್ಯಾಂಪಸ್ ಉದ್ಘಾಟನೆ ದಿನಾಂಕ ಘೋಷಣೆ
ಬೆಂಗಳೂರು, ಏಪ್ರಿಲ್ 22: ಪ್ರಮುಖ ಐಟಿ ಕಂಪನಿ ಸ್ಯಾಪ್ ಲ್ಯಾಬ್ಸ್ (ಎಸ್‌ಎಪಿ) ಬೆಂಗಳೂರು ನಗರದ ಹೊಸ ಕ್ಯಾಂಪಸ್ ಉದ್ಘಾಟನೆ ದಿನಾಂಕ ಘೋಷಣೆ ಮಾಡಿದೆ. 4.2 ಸಾವಿರ ಉದ್ಯೋಗಿಗಳನ್ನು ಮೊದಲ ಹಂತದಲ್ಲಿ ಹೊಸ ಕ್ಯಾಂಪಸ್‌ಗೆ ಸ್ಥಳಾಂತರಗೊಳಿಸಲಾಗುತ್ತದೆ. ಸುಮಾರು 750 ಕೋಟಿ ರೂ. ವೆಚ್ಚದಲ್ಲಿ ದೇವನಹಳ್ಳಿಯಲ್ಲಿ ಈ ಕ್ಯಾಂಪಸ್ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಬೃಹತ್ ಕಛೇರಿಯನ್ನು ನಿರ್ಮಾಣ ಮಾಡುವ ಮೂಲಕ ವ್ಯಾಪಾರ-ವಹಿವಾಟು ವಿಸ್ತರಣೆ ಮಾಡುತ್ತಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿ ದೇವನಹಳ್ಳಿಯಲ್ಲಿ 41 ಎಕರೆ ಪ್ರದೇಶದಲ್ಲಿ ಎಸ್‌ಎಪಿ ಬೆಂಗಳೂರು ಬೃಹತ್ ಕಛೇರಿಯನ್ನು ನಿರ್ಮಾಣ ಮಾಡಿದೆ. ಸುಮಾರು 15,000 ಉದ್ಯೋಗಿಗಳು ಕೆಲಸ ಮಾಡುವಷ್ಟು ದೊಡ್ಡ ಕಛೇರಿ ಇದಾಗಿದ್ದು, ಆಗಸ್ಟ್ 5, 2025ರಂದು ಇದನ್ನು ಉದ್ಘಾಟನೆ ಮಾಡಲಾಗುತ್ತದೆ ಎಂದು ಎಸ್‌ಎಪಿ ಬೆಂಗಳೂರು ಘೋಷಣೆ ಮಾಡಿದೆ.

ಅಂತರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳೊಂದಿಗೆ ಹಲವಾರು ವೈಶಿಷ್ಟ್ಯಗಳೊಂದಿಗೆ ಈ ಕಛೇರಿಯನ್ನು ನಿರ್ಮಾಣ ಮಾಡಲಾಗಿದೆ. ಸ್ಪಾ ಸೇರಿದಂತೆ ವಿವಿಧ ಸೌಲಭ್ಯಗಳು ಇಲ್ಲಿ ಉದ್ಯೋಗಿಗಳಿಗೆ ಲಭ್ಯವಿದೆ. ಸದ್ಯ ನಗರದಲ್ಲಿ ವೈಟ್‌ಫೀಲ್ಡ್‌ನಲ್ಲಿ ಎಸ್‌ಎಪಿ ಬೆಂಗಳೂರು ಕಛೇರಿಯನ್ನು ಹೊಂದಿದೆ. ದೇವನಹಳ್ಳಿಯಲ್ಲಿ 2ನೇ ಕಛೇರಿ ನಿರ್ಮಾಣವಾಗಿದೆ. ವೈಟ್‌ಫೀಲ್ಡ್ ಮತ್ತು ನಗರದ ವಿವಿಧ ಕಛೇರಿಗಳಲ್ಲಿ ಇರುವ ಉದ್ಯೋಗಿಗಳನ್ನು ಹಂತ ಹಂತವಾಗಿ ದೇವನಹಳ್ಳಿ ಕಛೇರಿಗೆ ಕಂಪನಿ ಸ್ಥಳಾಂತರ ಮಾಡಲಿದೆ.
ಎಸ್‌ಎಪಿ ಬೆಂಗಳೂರು ವಿಶ್ವದಾದ್ಯಂತ ಇರುವ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ ಶೇ 40ರಷ್ಟು ಕೊಡುಗೆಯನ್ನು ನೀಡುತ್ತದೆ. ಹಸಿರು ಇಂಧನ, ಉದ್ಯೋಗಿಗಳು ಮೊದಲು ಎಂಬ ಪರಿಕಲ್ಪನೆಯನ್ನು ಹೊಸ ಕ್ಯಾಂಪಸ್ ಅನ್ನು ನಿರ್ಮಾಣ ಮಾಡಲಾಗಿದೆ. ಹೊಸ ಕ್ಯಾಂಪಸ್ ಸ್ಥಳಾಂತರಕ್ಕೆ ಈಗಾಗಲೇ ಹಲವು ಉದ್ಯೋಗಿಗಳಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಗಿದೆ.
ದೇವನಹಳ್ಳಿಯ ಹೊಸ ಕ್ಯಾಂಪಸ್ ಮೂಲಕ ಎಸ್‌ಎಪಿ ಬೆಂಗಳೂರು ದೇಶದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಲಿದೆ ಎಂದು ಹೇಳಿದೆ. ಮೇ 29, 2023ರಲ್ಲಿ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿತ್ತು. 2025ರ ಮಧ್ಯಭಾಗದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕಟ್ಟಡ ಉದ್ಘಾಟನೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿತ್ತು.
ಇಂದಿನ ಗ್ರಾಹಕರಿಗೆ ಅಗತ್ಯವಾದ ಕಸ್ಟಮ್ ಎಐ ಮತ್ತು ಮಲ್ಟಿ ಏಜೆಂಟ್ ಎಐ ತಂತ್ರಜ್ಞಾನದ ಮೇಲೆ ಎಸ್‌ಎಪಿ ಬೆಂಗಳೂರು ಗಮನವನ್ನು ಹರಿಸಿದೆ. ಕಂಪನಿ ಉದ್ಯೋಗಿಗಳಲ್ಲಿ ಶೇ 50ರಷ್ಟು ಜನರು ಎಐ ಕೌಶಲ್ಯವನ್ನು ಹೊಂದಿದ್ದಾರೆ. ಮುಂದಿನ ದಿನಗಳ ವ್ಯಾಪಾರ ವಹಿವಾಟು ಮಾರ್ಪಾಡಿಗೆ ತಕ್ಕಂತೆ ಸೇವೆಯನ್ನು ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.
ಜಾಗತಿಕವಾಗಿ ಎಸ್‌ಎಪಿಯ 2ನೇ ಅತಿ ದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಬೆಂಗಳೂರು ನಗರದಲ್ಲಿದೆ. ಕಂಪನಿಯ ಪೇಟೆಂಟ್‌ಗಳಲ್ಲಿ ನಾಲ್ಕನೇ ಒಂದು ಭಾಗ ಇಲ್ಲಿಂದಲೇ ಬರುತ್ತದೆ. 4,50,000 ಗ್ರಾಹಕರಿಗೆ ಪರಿಹಾರಗಳನ್ನು ಅಭಿವೃದ್ಧಿಗೊಳಿಸುವ ಕೆಲಸದಲ್ಲಿ ಎಸ್ಎಪಿ ತೊಡಗಿಕೊಂಡಿದೆ.
2023ರಲ್ಲಿ ಎಸ್ಎಪಿ ತನ್ನ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾರತದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ತೀರ್ಮಾನವನ್ನು ಘೋಷಣೆ ಮಾಡಿತ್ತು. ಆಗಲೇ ಬೆಂಗಳೂರು ನಗರದಲ್ಲಿ ಬೃಹತ್ ಕಛೇರಿಯನ್ನು ನಿರ್ಮಾಣ ಮಾಡುವ ಕುರಿತು ಮಾಹಿತಿ ನೀಡಿತ್ತು. ಈಗ ಕಾಮಗಾರಿ ಪೂರ್ಣಗೊಂಡು ಕಛೇರಿ ಉದ್ಘಾಟನೆಯಾಗಲಿದೆ.
ಭಾರತದಲ್ಲಿ ಸ್ಯಾಪ್ ಲ್ಯಾಬ್ಸ್ ಪುಣೆ, ಗುರುಗ್ರಾಮ, ಮುಂಬೈ, ಹೈದರಾಬಾದ್‌ನಲ್ಲಿಯೂ ಕಛೇರಿಗಳನ್ನು ಹೊಂದಿದ್ದು, ಸಾವಿರಾರು ಉದ್ಯೋಗಿಗಳಿದ್ದಾರೆ. ಕೇವಲ ಉದ್ಯೋಗ ನೀಡುವುದು ಮಾತ್ರವಲ್ಲ ಐಟಿ ವಲಯಕ್ಕೆ ಬರಲು ಆಸಕ್ತಿ ಹೊಂದಿರುವ ಯುವಕ/ ಯುವತಿಯರಿಗೆ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಸಹ ಎಸ್‌ಎಪಿ ನಡೆಸುತ್ತದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications