ಸಂಕ್ರಾಂತಿ ವಿಶೇಷ; ಬೆಂಗಳೂರಿನಿಂದ ಸೂಪರ್ ಫಾಸ್ಟ್ ರೈಲು ಸಂಚಾರ

ಬೆಂಗಳೂರು, ಜನವರಿ 07; ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಸೂಪರ್ ಫಾಸ್ಟ್‌ ರೈಲುಗಳ ಸಂಚಾರವನ್ನು ನಡೆಸಲಾಗುತ್ತಿದೆ. ಪ್ರಯಾಣಿಕರು ರೈಲು ಸೇವೆಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಪೂರ್ವ ಕರಾವಳಿ ರೈಲ್ವೆಯು ವಿಶಾಖಪಟ್ಟಣಂ-ಯಲಹಂಕ-ವಿಶಾಖಪಟ್ಟಣಂ ನಡುವೆ ಸೂಪರ್ ಫಾಸ್ಟ್ ಸಂಕ್ರಾಂತಿ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

ಜನವರಿ 16ರಂದು ರೈಲು ಸಂಖ್ಯೆ 08577 ವಿಶಾಖಪಟ್ಟಣಂ-ಯಲಹಂಕ ಸೂಪರ್ ಫಾಸ್ಟ್ ವಿಶೇಷ ರೈಲು ವಿಶಾಖಪಟ್ಟಣಂನಿಂದ ಮಧ್ಯಾಹ್ನ 3.55ಕ್ಕೆ ಹೊರಡಲಿದೆ. ಬೆಂಗಳೂರಿನ ಯಲಹಂಕವನ್ನು ಮುಂಜಾನೆ 9 ಗಂಟೆಗೆ ತಲುಪಲಿದೆ.

special train

ಜನವರಿ 17ರಂದು ರೈಲು ಸಂಖ್ಯೆ 08578 ಯಲಹಂಕ-ವಿಶಾಖಪಟ್ಟಣಂ ಸೂಪರ್ ಫಾಸ್ಟ್‌ ಸಂಕ್ರಾಂತಿ ವಿಶೇಷ ರೈಲು ಯಲಹಂಕದಿಂದ ಬೆಳಗ್ಗೆ 10.15ಕ್ಕೆ ಹೊರಡಲಿದೆ. ಮರುದಿನ ಬೆಳಗ್ಗೆ 5 ಗಂಟೆಗೆ ವಿಶಾಖಪಟ್ಟಣಂ ತಲುಪಲಿದೆ.

ಈ ರೈಲು ಎಸಿ 3 ಟೈರ್ ಮೂರು, 10 ಸ್ಲೀಪರ್ ಎರಡನೇ ದರ್ಜೆ, 6 ಸಾಮಾನ್ಯ ಎರಡನೇ ದರ್ಜೆ ಬೋಗಿ ಮತ್ತು ಎರಡು ಸಾಮಾನ್ಯ ಎರಡನೇ ದರ್ಜೆ ಲಗ್ಗೇಜ್ ಕಮ್ ಬ್ರೇಕ್ ವ್ಯಾನ್ ಸೇರಿ ಒಟ್ಟು 21 ಬೋಗಿಗಳನ್ನು ಒಳಗೊಂಡಿದೆ.

ಇದು ಸಂಕ್ರಾಂತಿ ವಿಶೇಷ ಸೂಪರ್ ಫಾಸ್ಟ್ ರೈಲು ಆಗಿರುವುದರಿಂದ ದರ ಸಹ ಹೆಚ್ಚಿದೆ. ಸಾಮಾನ್ಯ ರೈಲಿಗಿಂತ 1.3ರಷ್ಟು ಹೆಚ್ಚು ದರದೊಂದಿಗೆ ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ರೈಲು ಪ್ರಯಾಣದ ಸಂದರ್ಭದಲ್ಲಿ ಹಾಗೂ ರೈಲು ನಿಲ್ದಾಣದಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡಬೇಕಿದೆ. ಕೋವಿಡ್ ಮಾರ್ಗಸೂಚಿಗಳ ಅನ್ವಯ ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ ಮಾಡಬೇಕು.

ಈ ರೈಲು ವಿಶಾಖಪಟ್ಟಣಂ, ದುವ್ವಾಡ, ಸಾಮಲಕೋಟ, ರಾಜಮಂಡ್ರಿ, ಎಲೂರು, ವಿಜಯವಾಡ, ಒಂಗೋಲ್, ನೆಲ್ಲೂರ್, ಗುಡೂರ, ರೇನಿಗುಂಟಾ, ಕಟ್ಟಾಡಿ, ಜೋಲಾರಪಟ್ಟೈ, ಕೃಷ್ಣರಾಜಪುರಂ, ಯಲಹಂಕ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+