ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ಮಾರಿ ಹಣ ಮಾಡಿ, ತ್ಯಾಜ್ಯ ವಿಲೇವಾರಿಗೆ ಹೊಸ ಮಂತ್ರ

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ನಂದಿನಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ವಿನೂತನ ತ್ಯಾಜ್ಯ ಬೇರ್ಪಡಿಸುವಿಕೆ ಹಾಗೂ ವಿಲೇವಾರಿ ವ್ಯವಸ್ಥೆ ಜಾರಿಗೊಳಿಸಿದ್ದು ಜನಪ್ರಿಯತೆ ಗಳಿಸುತ್ತಿದೆ.

ಕಸದಿಂದ ರಸ : 'ಮುಳುಗಡೆ ನಗರಿ' ಬಾಗಲಕೋಟೆ ಈಗ ಮಾದರಿ ನಗರಸಭೆಕಸದಿಂದ ರಸ : 'ಮುಳುಗಡೆ ನಗರಿ' ಬಾಗಲಕೋಟೆ ಈಗ ಮಾದರಿ ನಗರಸಭೆ

ಬೆಂಗಳೂರಿನ ಅನೇಕ ಬಡಾವಣೆಗಳು ತ್ಯಾಜ್ಯದ ವೈಜ್ಞಾನಿಕ ಮತ್ತು ಸಮರ್ಪಕ ನಿರ್ವಹಣೆಗೆ ಪರಿತಪಿಸುತ್ತಿದೆ, ಆದರೆ ನಂದಿನಿ ಲೇಔಟ್ ನಿವಾಸಿಗಳ ಸಂಘ ಕಳೆದ ಒಂದು ವರ್ಷದಿಂದ 'ಕಸ ಮಾರಿ, ದುಡ್ಡು ಮಾಡಿ' ಎಂಬ ಘೋಷ ವಾಕ್ಯವನ್ನು ಬಿಬಿಎಂಪಿ ಸಹಯೋಗದಲ್ಲಿ ಅನುಷ್ಠಾನಗೊಳಿಸಿದೆ.

Sale the waste, earn the money: New Mantra in SWM

ಕಸ ಮಾರಿ ದುಡ್ಡು ಮಾಡಿ ಯೋಜನೆಯ ವೈಶಿಷ್ಟ್ಯತೆ ಎಂದರೆ ನಂದಿನಿ ಬಡಾವಣೆಯ ಸುಮಾರು ೨೦ ಸಾವಿರ ಮನೆಗಳು ತಮ್ಮ ಮನೆಯ ತ್ಯಾಜ್ಯಗಳನ್ನು ಸಮರ್ಪಕವಾಗಿ ಬೇರ್ಪಡಿಸಿ ಬಿಬಿಎಂಪಿಗೆ ಮಾರಾಟ ಮಾಡುವ ಮೂಲಕ ಗಣ ಗಳಿಸುತ್ತಿದ್ದಾರೆ. ದಿನಪತ್ರಿಕೆ ಪ್ರತಿ ಕೆಜಿಗೆ 8ರೂ. ಪ್ಲಾಸ್ಟಿಕ್ಗೆ 14 ರೂ. ಕಾರ್ಡ್ ಬೋರ್ಡ್ ಹಾಗೂ ಪುಸ್ತಕಗಳಿಗೆ ತಲಾ 5ರೂ. ಹೀಗೆ ನಾನಾ ರೀತಿಯ ತ್ಯಾಜ್ಯಕ್ಕೆ ನಾನಾ ದರವನ್ನು ಪಾಲಿಕೆ ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಘ ದರ ನಿಗದಿ ಮಾಡಿದೆ.

ಬೆಂಗಳೂರಿಗರಿಗೆ ಹೊಸ ತೆರಿಗೆ ಹಾಕಲಿದೆ ಬಿಬಿಎಂಪಿಬೆಂಗಳೂರಿಗರಿಗೆ ಹೊಸ ತೆರಿಗೆ ಹಾಕಲಿದೆ ಬಿಬಿಎಂಪಿ

ಪ್ರತಿದಿನ ಬೆಳಗ್ಗೆ 11ಗಂಟೆಗೆ ಪೌರಕಾರ್ಮಿಕರು ತಮ್ ನಿತ್ಯದ ಕೆಲಸದ ನಂತರ ಮನೆಮನೆಗೆ ತೆರಳಿ ಬೇರ್ಪಟ್ಟ ತ್ಯಾಜ್ಯ ಸಂಗ್ರಹಿಸುತ್ತಾರೆ. ಇದೇ ವೇಳೆ ತ್ಯಾಜ್ಯಕ್ಕೆ ತಕ್ಕ ಹಣ ಪಾವತಿಸುತ್ತಾರೆ. ಈ ರೀತಿ ನಿತ್ಯ20 ಸಾವಿರ ಮನೆಗಳಿಂದ90 ಸಾವಿರ ಜನಸಂಖ್ಯೆಯ ಬಡಾವಣೆಯಿಂದ 12 ಟನ್ ಕಸ ಸಂಗ್ರಹಿಸುವ ಪೌರ ಕಾರ್ಮಿಕರು ಪಾಲಿಕೆ ತೆರೆದಿರುವ ಕಸ ಸಂಗ್ರಹ ಕೇಂದ್ರಕ್ಕೆ ರವಾನಿಸುತ್ತಾರೆ.

English summary
The residents of Nandini Layout in Bengaluru have came out with a new mantra. Sale the waste, earn the money, to manage and dispose the scientific way of waste in the area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X