ಇದು ಬೆಂಗಳೂರಲ್ಲಿ ನಡೆಯುತ್ತಿರುವ ಕೊನೆಯ ಏರ್‌ ಶೋ?

ಬೆಂಗಳೂರು, ಫೆಬ್ರವರಿ 21: ಬೆಂಗಳೂರಲ್ಲಿ ನಡೆಯುತ್ತಿರುವ ಕೊನೆಯ ಏರ್‌ ಶೋ ಇದಾಗಲಿದೆ ಎನ್ನುವ ವದಂತಿಗಳು ಕೇಳಿಬರುತ್ತಿವೆ.

ದಕ್ಷಿಣ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವೆನಿಸಿಕೊಂಡಿರುವ ಏರೋ ಇಂಡಿಯಾದ 12 ಆವೃತ್ತಿಯೇ ಬೆಂಗಳೂರು ಪಾಲಿಗೆ ಕಡೆಯ ಆವೃತ್ತಿಯಾಗಲಿದೆಯೇ ಎನ್ನುವ ಅನುಮಾನ ಕಾಡಿದೆ.

ಏರೋ ಇಂಡಿಯಾ ಬೆಂಗಳೂರಲ್ಲಿ ಆರಂಭಗೊಂಡಿದ್ದು, ಲೋಹದ ಹಕ್ಕಿಗಳ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ಇದು ಕಟ್ಟಕಡೆಯ ಅವಕಾಶ ಎಂಬ ಭಾವನೆ ಎಲ್ಲರಲ್ಲಿ ಮೂಡಿದೆ.

Rumours around last aero india show at Bengaluru

ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಿಂದ ಕಸಿದುಕೊಳ್ಳಲು ದೇಶದ ಹಲವು ನಗರಗಳು ಪ್ರಯತ್ನ ಮಾಡುತ್ತಿವೆ. ಕೇಂದ್ರ ಸರ್ಕಾರದ ಪ್ರಮುಖರು ಈ ನಿಟ್ಟಿನಲ್ಲಿ ಲಾಬಿ ನಡೆಸಿದ್ದಾರೆ. ಈ ಬಾರಿಯೂ ಏರೋ ಇಂಡಿಯಾ ಬೆಂಗಳೂರು ಇನ್ನೇನು ಕೈತಪ್ಪಿ ಹೋಗುತ್ತಿದೆ ಎನ್ನುವಾಗ ಅಂತಿಮವಾಗಿ ಬೆಂಗಳೂರನ್ನೇ ಆಯ್ಕೆಮಾಡಿಕೊಳ್ಳಲಾಗಿತ್ತು.

ಆದರೆ, 2020ರ ಏರ್‌ ಶೋ ಬೇರೆ ನಗರಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಈ ವೈಮಾನಿಕ ಪ್ರದರ್ಶನವನ್ನು ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು ಇತರೆ ನಗರಗಳಿಗೂ ಅವಕಾಶ ಲಭ್ಯವಾಗಬೇಕು ಎಂಬ ಕೇಂದ್ರ ಸರ್ಕಾರದ ನೀತಿಯ ಪರಿಣಾಮವಾಗಿ ಈ ಪ್ರದರ್ಶನ ಸ್ಥಳಾಂತರವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+