ಬೆಂಗಳೂರಿನ ಟೀ ವ್ಯಾಪಾರಿ ಬ್ಯಾಂಕ್ ಖಾತೆಗೆ ಬಿತ್ತು ₹999 ಕೋಟಿ ಹಣ.!-ಹೇಗೆ ಸಾಧ್ಯ? ಇಲ್ಲಿದೆ ಮಾಹಿತಿ
ಬೆಂಗಳೂರು, ಅಕ್ಟೋಬರ್, 12: ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳರ ಕಾಟ ಹೆಚ್ಚಾಗುತ್ತಿದೆ. ಈಗಾಗಲೇ ಹಲವೆಡೆ ಸಾಮಾನ್ಯ ಜನರ ಖಾತೆಗಳಿಗೆ ಖನ್ನಾ ಹಾಕಿ ಹಣ ದೋಚಿರುವ ಘಟನೆಗಳು ನಡೆದಿವೆ. ಆದರೆ ಇದೀಗ ಟೀ ವ್ಯಾಪಾರಿಯ ಬ್ಯಾಂಕ್ ಖಾತೆಗೇ ಒಂದಲ್ಲ..ಎರಡಲ್ಲ ಬರೋಬ್ಬರಿ 999 ಕೋಟಿ ರೂಪಾಯಿ ಜಮೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಹೇಗೆ ಸಾಧ್ಯ ಎಂದು ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ ಟೀ ವ್ಯಾಪಾರಿಯೊಬ್ಬರ ಬ್ಯಾಂಕ್ ಖಾತೆಗೆ ಒಂದಲ್ಲ..ಎರಡಲ್ಲ.. ಬರೋಬ್ಬರಿ 999 ಕೋಟಿ ರೂಪಾಯಿ ಜಮೆಯಾಗಿದೆ. ಇನ್ನು ಇದೀಗ ಆ ಟೀ ವ್ಯಾಪಾರಿಯು ನನಗೆ ಯಾಕಾದರೂ ಇಷ್ಟೊಂದು ಹಣ ಬಂತು ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕ್ಯಾಂಪಸ್‌ನಲ್ಲಿ ಟೀ ವ್ಯಾಪಾರಿ ಎಸ್.ಪ್ರಭಾಕರ್ ಖಾತೆಗೆ ಈ ಹಣ ಜಮೆ ಆಗಿದೆ. ಹಣ ಜಮೆ ಆಗಿರುವ ಖಾತೆಯಿಂದಲೇ ಪ್ರಭಾಕರ್ ಪ್ರತಿದಿನ ವ್ಯವಹಾರ ನಡೆಸುತ್ತಾರೆ. ಇನ್ನು ತಮ್ಮ ಖಾತೆಗೆ ಇದೀಗ 999 ಕೋಟಿ ರೂಪಾಯಿ ಹಣ ಜಮೆ ಆಗಿರುವ ಸಂದೇಶ ಕಂಡು ಪ್ರಭಾಕರ್ ಆಶ್ಚರ್ಯಗೊಂಡಿದ್ದರು.
ಅವರು ಮೊದಲಿಗೆ ಯಾವುದೋ ಫೇಕ್ ಸಂದೇಶ ಎಂದು ತಿಳಿದುಕೊಂಡಿದ್ದರು. ಆದರೆ ಬಳಿಕ ಪರಿಶೀಲನೆ ಮಾಡಿಸಿದಾಗ ಹಣ ಜಮೆ ಆಗಿರುವುದು ದೃಢಪಟ್ಟಿದೆ. ಹಣ ಜಮೆ ಆದ ಕ್ಷಣದಿಂದಲೇ ಪ್ರಭಾಕರ್ ಅವರ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.
ಇನ್ನು ಟಿ ವ್ಯಾಪಾರಿ ಎಸ್.ಪ್ರಭಾಕರ್ ಅವರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಹಣ ಜಮೆಯಾದ ತಕ್ಷಣದಿಂದಲೇ ಬ್ಯಾಂಕ್ ಖಾತೆ ಸ್ಥಗಿತವಾಗಿವೆ. ಇದರಿಂದ ಯಾವುದೇ ಬ್ಯಾಂಕಿಂಗ್ ವ್ಯವಹಾರ ಮಾಡಲು ಸಾಧ್ಯ ಆಗುತ್ತಿಲ್ಲ. ನನ್ನ ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರಿದೆ ಎಂದು ಪ್ರಭಾಕರ್ ಅಳಲು ತೋಡಿಕೊಂಡಿದ್ದಾರೆ.
ಮೂಲಗಳ ಪ್ರಕಾರಣ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಪ್ರಭಾಕರ್ ಖಾತೆಗೆ 999 ಕೋಟಿ ರೂಪಾಯಿ ಜಮೆ ಆಗಿದೆ. ತಮ್ಮ ತಪ್ಪು ಅರಿವು ಆಗುತ್ತಿದ್ದಂತೆ ಪ್ರಭಾಕರ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.
ಟಿ ವ್ಯಾಪಾರಿ ಎಸ್.ಪ್ರಭಾಕರ್ ಇದೇ ಖಾತೆಯನ್ನು ಪ್ರತಿನಿತ್ಯದ ವ್ಯವಹಾರಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಗ್ರಾಹಕರು ಪಾವತಿಸುವಮ ಹಣವೆಲ್ಲಾ ಇದೇ ಖಾತೆಗೆ ಜಮೆ ಆಗುತ್ತದೆ. ಇದರಿಂದ ಪ್ರಭಾಕರ್ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಬ್ಯಾಂಕ್ ಸಿಬ್ಬಂದಿ ಎಲ್ಲಿ ತಪ್ಪಾಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಪ್ರಭಾಕರ್ ಅವರನ್ನು ಕೂಡ ಬ್ಯಾಂಕ್‌ಗೆ ಅಲೆದಾಡಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಇನ್ನು ಪ್ರಭಾಕರ್ ಅವರು ವ್ಯಾಪಾರವನ್ನೆಲ್ಲ ಬಿಟ್ಟು ಬ್ಯಾಂಕ್‌ಗೆ ಅಲೆದಾಡುವಂತಹ ಪರಿಸ್ಥಿತಿ ಬಂದಿದೆ. ಅಷ್ಟೇ ಅಲ್ಲದೆ ಬ್ಯಾಂಕ್ ಸಿಬ್ಬಂದಿ ಅವರ ಬಳಿ ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಕೇಳುತ್ತಿದ್ದಾರೆ. ಇದರಿಂದ ಪ್ರಭಾಕರ್ ಚಿಂತೆಗೆ ಒಳಗಾಗಿದ್ದಾರೆ.
ಘಟನೆ ನಡೆದ ಮೂರು ದಿನ ಕಳೆದರೂ ಬ್ಯಾಂಕ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವಿಷಯವನ್ನು ಪ್ರಭಾಕರ್, ಆರ್ಥಿಕ ತಜ್ಞರೊಬ್ಬರ ಗಮನಕ್ಕೆ ತಂದಾಗ ನೇರವಾಗಿ ರಿಸರ್ವ್ ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕ ಮಾಡಬೇಕು. ಇದೀಗ ದಸರಾ ಹಾಗೂ ಶನಿವಾರ-ಭಾನುವಾರ ರಜೆ ಇರುವ ಹಿನ್ನೆಲೆ ಸೋಮವಾರ ರಿಸರ್ವ್ ಬ್ಯಾಂಕ್‌ಗೆ ಮೇಲ್ ಕಳುಹಿಸಲು ಪ್ರಭಾಕರ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications