ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ, 3 ಸೂಟ್ ಕೇಸ್ ದಾಖಲೆ ವಶ!
ಬೆಂಗಳೂರು, ಆಗಸ್ಟ್ 2: ಸಚಿವ ಡಿಕೆ ಶಿವಕುಮಾರ್ ಮನೆ ಮತ್ತು ಕಚೇರಿ ಮೇಲಿನ ಆದಾಯ ತೆರಿಗೆ ದಾಳಿ ವೇಳೆ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ.
ಡಿ.ಕೆ ಶಿವಕುಮಾರ್ ಗೆ ಸೇರಿದ ದೆಹಲಿ ಕಚೇರಿಯಲ್ಲಿ 5 ಕೋಟಿ ರೂಪಾಯಿಗೂ ಹೆಚ್ಚು ನಗದು ಸಿಕ್ಕಿರುವುದಾಗಿ ಐಟಿ ಇಲಾಖೆ ಹೇಳಿದೆ. ಇಲ್ಲಿ ಡಿಕೆ ಶಿವಕುಮಾರ್ ಅವರ ಕಾರು ಚಾಲಕನನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಬೆಂಗಳೂರಿನ ಸದಾಶಿವನಗರ, ಕನಕಪುರದ ಮನೆ ಹಾಗೂ ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿನ ಕಚೇರಿ ಮೇಲಿನ ದಾಳಿಯ ನಂತರ ಒಟ್ಟಾರೆ 11 ಕೋಟಿ ರೂಪಾಯಿ ನಗದು ವಶಕ್ಕೆ ಪಡೆದಿರುವುದಾಗಿ ಮೂಲಗಳು ಹೇಳಿವೆ. ವಾರ್ಡ್ ರೋಬ್, ಹಾಸಿಗೆ ಕೆಳಗೆ ಹೀಗೆ ಸಿಕ್ಕ ಸಿಕ್ಕಲ್ಲಿ ದುಡ್ಡಿನ ರಾಶಿಯೇ ಐಟಿ ಅಧಿಕಾರಿಗಳಿಗೆ ಎದುರಾಗಿದೆ.
ಇದೇ ವೇಳೆ ಮನೆಯಿಂದ ಮೂರು ಸೂಟ್ ಕೇಸ್ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.












Click it and Unblock the Notifications