8 ನಾಯಿಮರಿ ಕೊಂದ ಮಹಿಳೆಗೆ ಒಂದು ಸಾವಿರ ರೂ. ದಂಡ!
ಬೆಂಗಳೂರು, ಆ.08 : ಹದಿನೈದು ದಿನದ 8 ನಾಯಿಮರಿಗಳನ್ನು ಹತ್ಯೆ ಮಾಡಿದ್ದ ಮಹಿಳೆಗೆ ನ್ಯಾಯಾಲಯ ಒಂದು ಸಾವಿರ ರೂ. ದಂಡ ವಿಧಿಸಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಪ್ರಾಣಿದಯಾ ಸಂಘ ನಿರ್ಧರಿಸಿದೆ.
ಪೊನ್ನಮ್ಮ ಎಂಬ ಮಹಿಳೆ 2016ರ ಮಾರ್ಚ್ 16ರಂದು ಹದಿನೈದು ದಿನಗಳ ಎಂಟು ನಾಯಿ ಮರಿಗಳನ್ನು ಕಲ್ಲಿಗೆ ಹೊಡೆದು ಹತ್ಯೆ ಮಾಡಿದ್ದಳು. ಈ ಘಟನೆ ನಡೆದ ಕೆಲವು ದಿನಗಳಲ್ಲಿ ತಾಯಿ ನಾಯಿಯೂ ಸಾವನ್ನಪ್ಪಿತ್ತು.

ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಿಹಳ್ಳಿಯಲ್ಲಿ ಈ ಘಟನೆ ನಡೆದಿತ್ತು. ಸ್ಥಳೀಯರ ನೆರವಿನಿಂದ ಪ್ರಾಣಿದಯಾ ಸಂಘದವರು ಪೊಲೀಸರಿಗೆ ಪೊನ್ನಮ್ಮ ವಿರುದ್ಧ ದೂರು ನೀಡಿದ್ದರು. ಪೀಣ್ಯ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 45ನೇ ಎಸಿಎಂಎಂ ಕೋರ್ಟ್ ಪೊನ್ನಮ್ಮಗೆ ಒಂದು ಸಾವಿರ ರೂ. ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲವಾದರೆ ಹದಿನೈದು ದಿನಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ. ಪ್ರಾಣಿದಯಾ ಸಂಘ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.












Click it and Unblock the Notifications