ಆರ್ ಆರ್ ನಗರ ಮತದಾರರಿಗೆ ಕೊರೊನಾ ವೈರಸ್ ಭಯ?
ಬೆಂಗಳೂರು, ನ. 03: ಅತ್ತೆಯ ಬೆಂಬಲ ಸಿಗುತ್ತಲೇ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಇಡೀ ಆರ್ ಆರ್ ನಗರ ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಇಂದು ಮತದಾನ ನಡೆಯುತ್ತಿರುವ ಮತ ಕೇಂದ್ರಗಳಿಗೆ ಭೇಟಿ ಕೊಡುತ್ತಿದ್ದಾರೆ. ಆರ್ ಆರ್ ನಗರದ ಪ್ರತಿ ವಾರ್ಡ್‌ಗಳಿಗೂ ಕುಸುಮಾ ಅವರು ಭೇಟಿ ಕೊಡುತ್ತಿದ್ದಾರೆ. ನಿನ್ನೆಯಷ್ಟೇ ಸೊಸೆಯ ಕಣ್ಣೀರಿಗೆ ಕರುಗಿದ ದಿ. ಐಎಎಸ್ ಅಧಿಕಾರಿ ಡಿಕೆ ರವಿ ಅವರ ತಾಯಿ ಗೌರಮ್ಮ ಅವರು ಸೊಸೆ ಕುಸುಮಾ ಅವರ ಪರವಾಗಿ ಮಾತನಾಡಿದ್ದರು.
ಕೆಲ ಹೊತ್ತಿನ ಹಿಂದೆ ಆರ್ ಆರ್ ನಗರದ ಲಗ್ಗೆರೆ ವಾರ್ಡ್‌ನ ಮತದಾನ ಕೇಂದ್ರಗಳಿಗೆ ಭೇಟಿ ಕೊಟ್ಟ ಬಳಿಕ ಮಾಧ್ಯಮಗಳೊಂದಿಗೆ ಕುಸುಮಾ ಅವರು ಮಾತನಾಡಿದ್ದಾರೆ.
ಬೆಳಿಗ್ಗೆಯಿಂದ ನಾನು ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ವಾರ್ಡ್‌ಗಳಿಗೂ ಭೇಟಿ ನೀಡುತ್ತಿದ್ದೇನೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರು ಮತದಾನ ಮಾಡಬೇಕಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಹೇಳಿಕೆ ನೀಡಿದ್ದಾರೆ.

ಮತದಾರರಲ್ಲಿ ನಾನು ಒಂದು ವುತಂಯಿತನ್ನು ಮಾಡಿಕೊಳ್ಳುತ್ತೇನೆ, ದಯವಿಟ್ಟು ನಿಮ್ಮ ಮತದಾನದ ಹಕ್ಕನ್ನು ಉಪಯೋಗಿಸಿಕೊಳ್ಳಿ. ಬೆಳಿಗ್ಗೆ ನಾನು ಮತ ಹಾಕಿ ಅಂತ ಎಲ್ಲೂ ಕೇಳಿಕೊಂಡಿಲ್ಲ. ಗೆಲ್ಲುವ ವಿಶ್ವಾಸ ಯಾವಾಗಲೂ ಇದ್ದೇ ಇದೆ. ಕೊರೊನಾ ವೈರಸ್ ಭಯದಿಂದ ಕೆಲವರು ಬಂದು ಮತ ಹಾಕಿಲ್ಲ. ಸಂಜೆ ಆರು ಗಂಟೆಯ ವರೆಗೂ ಕಾಲಾವಕಾಶವಿದೆ. ಚುನಾವಣಾ ಆಯೋಗ ಸುರಕ್ಷಿತ ಮತದಾನಕ್ಕೆ ಎಲ್ಲ ವ್ಯವಸ್ಥೆ ಮಾಡಿದೆ. ದಯವಿಟ್ಟು ಬಂದು ನಿಮ್ಮ ಅಧಿಕಾರ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.
Recommended Video
ಎಲ್ಲಾ ಮತದಾರರೂ ಬಂದು ಮತದಾನದ ಹಕ್ಕನ್ನು ಉಪಯೋಗಿಸಿಕೊಳ್ಳಿ ಎಂದು ಕುಸುಮಾ ಅವರು ಮನವಿ ಮಾಡಿದ್ದಾರೆ.












Click it and Unblock the Notifications