ಬೆಡ್‌ಶೀಟ್ ಹೊದ್ದ ಮಹಿಳೆಯರಿಂದ ಚಿಕ್ಕಪೇಟೆಯಲ್ಲಿ ಸೀರೆ ಅಂಗಡಿ ದರೋಡೆ
ಬೆಂಗಳೂರು, ಜನವರಿ 8: ಬೆಡ್‌ಶೀಟ್ ಹೊದ್ದು ಮಹಿಳೆಯರು ಸೀರೆ ಅಂಗಡಿಯ ದರೋಡೆ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಡ್‌ಶೀಟ್ ಹೊದ್ದು ಬಟ್ಟೆ ಮಾರಾಟ ಮಳಿಗೆಯೊಂದರ ಎದುರು ಬೆಂಕಿಯಲ್ಲಿ ಚಳಿ ಕಾಯಿಸುತ್ತಾ ಕುಳಿತಿರುವಂತೆ ನಟಿಸಿ ಬಳಿಕ ಶೆಟರ್ ಮುರಿದು ದರೋಡೆ ಮಾಡಿರುವ ಘಟನೆ ಚಿಕ್ಕಪೇಟೆಯಲ್ಲಿ ನಡೆದಿದೆ.
ದರೋಡೆಯಲ್ಲಿ 4.5 ಲಕ್ಷ ರೂ ದೋಚಿದ್ದಾರೆ. ಜ.2ರಂದು ಚಿಕ್ಕಪೇಟೆಯ ಭೈರಪ್ಪ ಅಂಡ್ ಸನ್ಸ್ ಸಿಲ್ಕ್ಸ್ ಬಟ್ಟೆ ಅಂಗಡಿಯ ಶೆಟರ್ ಮುರಿದು ದರೋಡೆ ಮಾಡಲಾಗಿದೆ, ಒಟ್ಟು 9 ಮಂದಿ ಕಳ್ಳಿಯರ ಜೊತೆಗೆ ಬಾಲಕ ಕೂಡ ಇದ್ದು, ಒಟ್ಟಾಗಿ ಕೃತ್ಯ ನಡೆಸಿರುವುದು ಸಿಸಿಟಿವಿ ಮೂಲಕ ತಿಳಿದುಬಂದಿದೆ.

ಜನವರಿ 2ರಂದು ಈ ಘಟನೆ ನಡೆದಿದ್ದು, ಬೆಳಗಿನ ಜಾವ ಸುಮಾರು 5.30ಕ್ಕೆ ಬೆಡ್‌ಶೀಟ್ ಹೊದ್ದ ಮಹಿಳೆಯರು ಒಬ್ಬೊಬ್ಬರಾಗಿ ಭೈರಪ್ಪ ಸಿಲ್ಕ್ಸ್ ಮಳಿಗೆ ಹತ್ತಿರ ಬಂದು ಮೆಟ್ಟಿಲಿನಲ್ಲಿ ಕೂರುತ್ತಾರೆ ಬಳಿಕ ನಿಧಾನವಾಗಿ ಶೆಟರ್ ಮುರಿದು ಒಳಗೆ ಹೋಗಿ ಕಳ್ಳತನ ಮಾಡುತ್ತಾರೆ.
ಜನವರಿ 2 ರ ಬೆಳಗ್ಗೆ 9.30 ಸುಮಾರಿಗೆ ಮಾಮೂಲಿಯಂತೆ ಅಂಗಡಿ ಮಾಲೀಕರು ಬಂದಾಗ ಶೆಟರ್ ಮುರಿದಿರುವುದು ಕಂಡುಬಂತು ಅಂಗಡಿ ಒಳಗೆ ಕ್ಯಾಷ್ ಬಾಕ್ಸ್ ಮುರಿದಿರುವುದು ಕಂಡುಬಂದಿದೆ. ಬಳಿಕ ಚಿಕ್ಕಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.












Click it and Unblock the Notifications