ಬೆಂಗಳೂರಲ್ಲಿ ರಸ್ತೆ ಅಗಲೀಕರಣ: ಭೂಸ್ವಾಧೀನ & ಟಿಡಿಆರ್, ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್!

ಬೆಂಗಳೂರು: ಜುಲೈ-30 ಬೆಂಗಳೂರಿ ಪ್ರಮುಖ ರಸ್ತೆಗಳ ಅಗಲೀಕರಣಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದ್ದು. ಈ ನಡುವೆ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಬೆಂಗಳೂರು ನಗರದಲ್ಲಿ ರಸ್ತೆ ಅಗಲೀಕಣಕ್ಕೆ ತೆಗೆದುಕೊಂಡಿರುವ ರಸ್ತೆಗಳಲ್ಲಿ ಟಿಡಿಆರ್ ಸಮಸ್ಯೆ ಬಗೆಹರಿಸಿ ಭೂಸ್ವಾಧೀನ ಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಟಿಡಿಆರ್ ಸಮಸ್ಯೆ ಎದುರಾಗಿದ್ದ ಆಸ್ತಿದಾರರಿಗೆ ಗುಡ್‌ನ್ಯೂಸ್ ಸಿಕ್ಕಂತೆ ಆಗಿದೆ.

ನಗರದಲ್ಲಿ ರಸ್ತೆ ಮೂಲಭೂತ ಸೌಕರ್ಯ ವಿಭಾಗದಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಕುರಿತು ಬುಧವಾರ ಬಿ.ಎಸ್.ಡಬ್ಲ್ಯೂ.ಎಂ.ಎಲ್ ಕಚೇರಿಯ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಾತನಾಡಿದ್ದಾರೆ.
ನಗರದಲ್ಲಿ 16 ರಸ್ತೆಗಳಲ್ಲಿ ಕೈಗೆತ್ತಿಕೊಂಡಿರುವ ಅಗಲೀಕರಣ ಕಾರ್ಯದಲ್ಲಿ, 2 ರಸ್ತೆಗಳಲ್ಲಿ ಸಂಪೂರ್ಣ ಅಗಲೀಕರಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಇನ್ನು ಟಿಡಿಆರ್ ಸಮಸ್ಯೆ ಇರುವ ರಸ್ತೆಗಳಲ್ಲಿ ಆಸ್ತಿ ಮಾಲಿಕರೊಂದಿಗೆ ಮಾತ‌ನಾಡಿ ಸಮಸ್ಯೆ ಇತ್ಯರ್ಥಪಡಿಸಲು ಸೂಚಿಸಿದ್ದಾರೆ.

Road widening in Bengaluru Great good news for land acquisition and TDR property owners

ಅಗಲೀಕರಣ ರಸ್ತೆಗಳ ಪೈಕಿ ಈಗಾಗಲೇ ಎಷ್ಟು ಆಸ್ತಿಗಳಿಗೆ ಟಿಡಿಆರ್ ನೀಡಲಾಗಿದೆ. ಇನ್ನೂ ಆಸ್ತಿಗಳನ್ನು ಭೂಸ್ವಾಧೀನಪಡಿಸಿಕೊಳ್ಳಬೇಕಿದೆ. ಎಷ್ಟು ಹಣ ವ್ಯಯವಾಗಲಿದೆ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜಂಕ್ಷನ್‌ಗಳ ಅಭಿವೃದ್ಧಿಗೆ ಕ್ರಮ: ಇನ್ನು ಬೆಂಗಳೂರಿನ ಪ್ರಮುಖ ಜಂಕ್ಷನ್‌ಗಳ ಸಮಗ್ರ ಅಭಿವೃದ್ಧಿ ಮಾಡುವುದರೊಂದಿಗೆ ವಾಹನಗಳ ಸುಗಮ ಸಂಚಾರ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ತೊಡಕುಗಳು ಉಂಟಾಗಂತೆ ವಿನ್ಯಾಸ ರೂಪಿಸಿ, ಕಾಲಮಿತಿಯೊಳಗಾಗಿ ಅಭಿವೃದ್ಧಿಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

ಹೈಡೆನ್ಸಿಟಿ ಕಾರಿಡಾರ್ ಕಾಮಗಾರಿಗಳಿಗೆ ವೇಗ ನೀಡಲು ಸಹ ಇದೇ ಸಂದರ್ಭದಲ್ಲಿ ಸೂಚನೆ ನೀಡಲಾಗಿದೆ. ನಗರದ ಹೊರ ವರ್ತುಲ‌ ರಸ್ತೆಗಳಲ್ಲಿ ಕೈಗೆತ್ತಿಕೊಂಡಿರುವ ಹೈಡೆನ್ಸಿಟಿ ಕಾರಿಡಾರ್ ಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಅವುಗಳಿಗೆ ವೇಗ ನೀಡಿ ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಆಸ್ತಿದಾರರು ನಿರಾಳ: ಇನ್ನು ಬೆಂಗಳೂರಿನ ರಸ್ತೆಗಳ ಅಗಲೀಕರಣ ವಿಚಾರದಲ್ಲಿ ಆಸ್ತಿದಾರರಿಗೆ ಎದುರಾಗಿದ್ದ ಗೊಂದಲ ಹಾಗೂ ಆತಂಕವನ್ನು ಪರಿಹರಿಸುವ ಕೆಲಸವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಡುವುದಕ್ಕೆ ಮುಂದಾಗಿದ್ದಾರೆ. ಟಿಡಿಆರ್ - ಅಭಿವೃದ್ಧಿಪಡಿಸಿದ ಭೂಮಿ ಅಥವಾ ಪರ್ಯಾಯ ಭೂಮಿ ಇದೀಗ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟು ಕೊಡುವ ಆಸ್ತಿದಾರರಿಗೆ ಸಿಗಲಿದೆ.

ಈ‌ ವೇಳೆ ವಿಶೇಷ ಆಯುಕ್ತರಾದ ಕರೀಗೌಡ, ಡಾ. ಕೆ. ಹರೀಶ್ ಕುಮಾರ್, ಮುಖ್ಯ ಎಂಜಿನಿಯರ್ ಲೋಕೇಶ್, ಅಧೀಕ್ಷಕ ಎಂಜಿನಿಯರ್ ಹೇಮಲತಾ, ಕಾರ್ಯಪಾಲಕ ಎಂಜಿನಿಯರ್ ಸೇರಿದಂತೆ ಹಲವರು ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+