Get Updates
Get notified of breaking news, exclusive insights, and must-see stories!

ಬೆಂಗಳೂರಿನ ರಸ್ತೆ ಗುಡಿಸಲು ಬಂದವು ದೈತ್ಯಾಕಾರದ ಮೆಷೀನ್!

ಬೆಂಗಳೂರು ರಸ್ತೆಗಳನ್ನು ಸ್ವಚ್ಛಗೊಳಿಸಲು ಸುಮಾರು 500 ಕೋಟಿ ವೆಚ್ಛದಲ್ಲಿ ಬಿಬಿಎಂಪಿಯು ಈ ಯಂತ್ರಗಳನ್ನು ಖರೀದಿಸಿದೆ.

ಬೆಂಗಳೂರು, ಮೇ 22: ಬೆಂಗಳೂರು ರಸ್ತೆಗಳನ್ನು ಸ್ವಚ್ಛಗೊಳಿಸುವುದು ಹಾಗೂ ಧೂಳು ರಹಿತವನ್ನಾಗಿ ಮಾಡಲು ಅನುಕೂಲವಾಗುವಂತೆ, 15 ದೈತ್ಯಾಕಾರದ ರಸ್ತೆ ಗುಡಿಸುವ ಯಂತ್ರಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿದ್ದು, ಅವುಗಳಿಗೆ ಸೋಮವಾರ ಅಧಿಕೃತ ಚಾಲನೆ ನೀಡಲಾಯಿತು.

ವಿಧಾನ ಸೌಧದ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಯಂತ್ರಗಳಿಗೆ ಚಾಲನೆ ನೀಡಿದರು. ಅದೇ ವೇಳೆ, ಅವರಿಗೆ ಯಂತ್ರದ ಕಾರ್ಯವೈಖರಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.

Road cleaning machines purchased by BBMP

ಈ 15 ಯಂತ್ರಗಳಲ್ಲಿ ಎಂಟು ದೈತ್ಯ ಗಾತ್ರದವು. ಇನ್ನು 5 ಯಂತ್ರಗಳು ಮಧ್ಯಮ ಗಾತ್ರದ್ದು. ರಸ್ತೆ ಸ್ವಚ್ಛತೆಯಲ್ಲಿ ಅತೀವ ಕ್ಷಮತೆ ತೋರುವ ಈ ಯಂತ್ರಗಳು ದಿನವೊಂದಕ್ಕೆ ಸುಮಾರು 50 ಕಿ.ಮೀ. ರಸ್ತೆಗಳನ್ನು ಸ್ವಚ್ಛ ಮಾಡಬಲ್ಲ ಸಾಮರ್ಥ್ಯ ಹೊಂದಿವೆ.

13ನೇ ಹಣಕಾಸು ಆಯೋಗದ ಅನುದಾನದಲ್ಲಿ ಸುಮಾರು 50 ಕೋಟಿ ರು. ವೆಚ್ಛ ಮಾಡಿ ಈ ಯಂತ್ರಗಳನ್ನು ಖರೀದಿಸಲಾಗಿದೆ. ರಸ್ತೆಗಳು ಮಾತ್ರವಲ್ಲ, ಪಾದಚಾರಿಗಳ ಮಾರ್ಗ, ವಿಭಜಕ ಹಾಗೂ ರಸ್ತೆಯ ಟಾರಿನ ಅಕ್ಕಪಕ್ಕದಲ್ಲಿ ಸಂಗ್ರಹವಾಗುವ ಮಣ್ಣು, ಕೆಸರು, ಧೂಳು, ಕೊಳೆಗಳನ್ನೂ ಈ ಯಂತ್ರಗಳು ಸ್ವಚ್ಛ ಮಾಡಲಿವೆ.

ಜಿಪಿಎಸ್ ವ್ಯವಸ್ಥೆಯನ್ನು ಈ ಯಂತ್ರಗಳಿಗೆ ಅಳವಡಿಸಲಾಗಿದ್ದು, ಪ್ರತಿನಿತ್ಯ ಎಷ್ಟು ಕಿ.ಮೀ. ಸ್ವಚ್ಛವಾಗಿದೆ ಎಂಬುದನ್ನು ಪರಿಶೀಲಿಸಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+