Ring rail: ಬೆಂಗಳೂರಿನ ಈ ಮಾರ್ಗಗಳಲ್ಲಿ ರಿಂಗ್ ರೈಲು, ಇದರಿಂದಾಗುವ ಪ್ರಯೋಜನೆಗಳೇನು?
ಬೆಂಗಳೂರು, ಜನವರಿ, 12: ರಾಜ್ಯದ ರಾಜಧಾನಿ ಬೆಂಗಳೂರು ಸಾರಿಗೆ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಕಾಣುತ್ತಲೇ ಇದೆ. ಅಲ್ಲದೆ ಸಂಚಾರ ದಟ್ಟಣೆಯೂ ಕೂಡ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ನಗರದ ಹೊರವಲಯದ ಸುತ್ತಲೂ ಸುಮಾರು 287 ಕಿಲೋ ಮೀಟರ್ ಉದ್ದದ ರಿಂಗ್ ರೈಲು ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಿಂಗ್ ರೈಲು ನಿರ್ಮಾಣದ ಅಧ್ಯಯನಕ್ಕಾಗಿ ಈಗಾಗಲೇ 7 ಕೋಟಿ ರೂಪಾಯಿ ಮಂಜುರಾಗಿತ್ತು. ಇದೀಗ ಯೋಜನೆಗಾಗಿ ರೈಲ್ವೆ ಇಲಾಖೆಯಿಂದ ಅಂತಿಮ ಹಂತದ ಸ್ಥಳ ಸರ್ವೆ ಕಾರ್ಯ ನಡೆಯುತ್ತಿದೆ. ಈ ಲೊಕೆಶನ್ ಸರ್ವೆಯಲ್ಲಿ ರೈಲ್ವೆ ಇಲಾಖೆ ಹಲವು ಮಾಹಿತಿ ಸಂಗ್ರಹ ಮಾಡಿದೆ. ಅಲೈನ್‌ಮೆಂಟ್, ನಿಲ್ದಾಣಗಳ ಸಂಖ್ಯೆ ಮತ್ತು ಮ್ಯಾಪಿಂಗ್, ಸಿವಿಲ್ ಸ್ಟ್ರಕ್ಚರ್-ಬ್ರಿಡ್ಜ್ ಗಳ ಯೋಜನೆಗೆ ಬೇಕಾಗುವ ಲ್ಯಾಂಡ್ ಬಗ್ಗೆ ಮಾಹಿತಿಯನ್ನು ಸಂಗ್ರಹ ಮಾಡಿದೆ.

ಈ ರಿಂಗ್ ರೈಲ್ ಏಳು ಪ್ರಮುಖ ನಿಲ್ದಾಣಗಳನ್ನು ಹೊಂದಿರಲಿದೆ. ನೀಡವಂದ, ದೊಡ್ಡಬಳ್ಳಾಪುರ, ದೇವನಹಳ್ಳಿ, ಮಾಲೂರು, ಹೀಲಲಿಗೆ, ಹೆಜ್ಜಾಲ, ಸೋಲುರು ಪ್ರಮುಖ ನಿಲ್ದಾಣಗಳಾಗಿವೆ. ಬೆಂಗಳೂರು ಉಪನಗರ ರೈಲ್ವೇ ಯೋಜನೆ, ನಮ್ಮ ಮೆಟ್ರೋ ರೈಲಿಗೆ ಪೂರಕವಾಗಿ ನಗರದ ಸುತ್ತ ವೃತ್ತಾಕಾರವಾಗಿ ರಿಂಗ್ ರೈಲು ಯೋಜನೆ ನಿರ್ಮಾಣ ಆಗಲಿದೆ. ನಗರದಲ್ಲಿ ಮುಂದಿನ 20-30 ವರ್ಷಗಳ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಲ್ಲಿ ರಿಂಗ್ ರೈಲ್ ಪ್ರಮುಖ ಪಾತ್ರವಹಿಸಲಿದೆ.
ನಿಡವಂದದಿಂದ ದೊಡ್ಡಬಳ್ಳಾಪುರವರೆಗೆ 40.9 ಕಿಲೋ ಮೀಟರ್, ದೊಡ್ಡಬಳ್ಳಾಪುರದಿಂದ ದೇವನಹಳ್ಳಿವರೆಗೆ 28.5 ಕಿಲೋ ಮೀಟರ್, ದೇವನಹಳ್ಳಿಯಿಂದ ಮಾಲೂರುವರೆಗೆ 46.5 ಕಿಲೋ ಮೀಟರ್, ಮಾಲೂರಿನಿಂದ ಹೀಲಳಿಗೆವರೆಗೆ 52 ಕಿಲೋ ಮೀಟರ್, ಹೀಲಳಿಗೆಯಿಂದ ಹೆಜ್ಜಾಲವರೆಗೆ 42 ಕಿಲೋ ಮೀಟರ್, ಹೆಜ್ಜಾಲದಿಂದ ಸೋಲೂರುವರೆಗೆ 43.5 ಕಿಲೋ ಮೀಟರ್, ಸೋಲೂರಿನಿಂದ ನಿಡವಂದವರೆಗೆ 34.2 ಕಿಲೋ ಮೀಟರ್ ಸಂಪರ್ಕ ಕಲ್ಪಿಸಲಿದೆ.












Click it and Unblock the Notifications