• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ 12 ಮೇಲ್ಸೇತುವೆಗಳಿಗೆ ಕಾಯಕಲ್ಪ: ಎಲ್ಲೆಲ್ಲಿ?

|

ಬೆಂಗಳೂರು, ಡಿಸೆಂಬರ್ 18: ಸಿರ್ಸಿ ಸರ್ಕಲ್ ಮೇಲ್ಸೇತುವೆಯ ಇನ್ನೊಂದು ಬದಿಯ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಟೆಕ್ಕಿಟಾರ್ ಶೀಟ್ ಬಳಸಿ ಡಾಂಬರೀಕರಣ ಮಾಡಲಾಗುತ್ತದೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ನಗರದ ಐಟಿಸಿ , ಆನಂದ್‌ರಾವ್ ವೃತ್ತ, ಡೈರಿ ಸರ್ಕಲ್ ಮೇಲ್ಸೇತುವೆ ಸೇರಿದಂತೆ ಒಟ್ಟು 12 ಮೇಲ್ಸೇತುವೆಗಳನ್ನು ಸಿರ್ಸಿ ಫ್ಲೈಓವರ್ ಮಾದರಿಯಲ್ಲಿ ಟೆಕ್ಕಿಟಾರ್ ಶೀಟ್ ಬಳಸಿ ಡಾಂಬರೀಕರಣಕ್ಕೆ ಬಿಬಿಎಂಪಿ ಯೋಜನೆ ಸಿದ್ಧಪಡಿಸಿದೆ.

10 ದಿನಗಳ ಕಾಲ ಸುಮನಹಳ್ಳಿ ಮೇಲ್ಸೇತುವೆ ಬಂದ್, ಪರ್ಯಾಯ ಮಾರ್ಗ?

ಮೇಲ್ಸೇತುವೆಗಳ ನಿರ್ವಹಣೆ ಇಲ್ಲದೆ ಸಾಕಷ್ಟು ದೋಷಗಳು ಉಂಟಾಗಿದೆ ಎಂದು ತಜ್ಞರು ತಿಳಿಸಿರುವುದರಿಂದ ನಗರದಲ್ಲಿ ಎಲ್ಲಾ ಮೇಲ್ಸೇತುವೆಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಈಗಾಗಲೇ ಅದಕ್ಕೆ ತೇಪೆ ಹಾಕುವ ಕೆಲಸವನ್ನು ಬಿಬಿಎಂಪಿ ಅಲ್ಲಲ್ಲಿ ಮಾಡಿದೆ. ಇದೀಗ ಎಲ್ಲಾ ಮೇಲ್ಸೇತುವೆಗಳನ್ನು ಒಂದೇ ಬಾರಿ ಮರು ಡಾಂಬರೀಕರಣಕ್ಕೆ ಕ್ರಮ ಕೈಗೊಂಡಿದೆ.

ಸಿರ್ಸಿ ಸರ್ಕಲ್ ಮೇಲ್ಸೇತುವೆ ದುರಸ್ತಿ ಕಾಮಗಾರಿ ಇಂದಿನಿಂದ ಆರಂಭ

ಯಾವ್ಯಾವ ಮೇಲ್ಸೇತುವೆ ಕಾಯಕಲ್ಪ:

-ಐಟಿಸಿ ಮೇಲ್ಸೇತುವೆ

-ಬೆಳ್ಳಂದೂರು ಮೇಲ್ಸೇತುವೆ

-ಆರ್‌ಎಂಪಿ ಮೇಲ್ಸೇತುವೆ

-ಡೈರಿ ಸರ್ಕಲ್ ಮೇಲ್ಸೇತುವೆ

-ಲಿಂಗರಾಜಪುರ ಮೇಲ್ಸೇತುವೆ

-ನಾಗನಪಾಳ್ಯ ಮತ್ತು ರಾಮಸ್ವಾಮಿ ಪಾಳ್ಯ ಮೇಲ್ಸೇತುವೆ

-ರಿಚ್ಮಂಡ್ ಸರ್ಕಲ್ ಮೇಲ್ಸೇತುವೆ

-ನಾಯಂಡಹಳ್ಳಿ ಮೇಲ್ಸೇತುವೆ

-ಸಿಲ್ಕ್‌ ಬೋರ್ಡ್ ಮೇಲ್ಸೇತುವೆ

-ಯಶವಂತಪುರ ಹಾಗೂ ಮತ್ತಿಕೆರೆ ಮೇಲ್ಸೇತುವೆ

-ಎಚ್‌ಎಸ್‌ಆರ್ ಲೇಔಟ್‌ ಮೇಲ್ಸೇತುವೆ

-ಆನಂದ್‌ರಾವ್ ಸರ್ಕಲ್ ಮೇಲ್ಸೇತುವೆ

English summary
The BBMP is planning to build a total of 12 bridges, including the ITC, Anandrao Circle and Dairy Circle Bridge in the city, using a Tekkitar sheet on the Sirsi flyover model.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X