Bengaluru House Rent: ಬೆಂಗಳೂರಿನ ದುಬಾರಿ ವಸತಿ ಪ್ರದೇಶದಲ್ಲಿ ಬಾಡಿಗೆ ದರ ದಿಢೀರ್ ಕುಸಿತ; ಭಾರೀ ವೈರಲ್
Bengaluru House Rent: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲಿದೆ. ಈ ನಡಿವೆಯೇ ಇದೀಗ ನಗರದ ಈ ಭಾಗದಲ್ಲಿ ಬಾಡಿಗೆ ದರ ಭಾರೀ ಪ್ರಮಾಣದಲ್ಲಿ ದಿಢೀರ್ ಕುಸಿತ ಕಂಡಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲದಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ ಎಲ್ಲಿ ಹಾಗೂ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರತಿನಿತ್ಯ ಏನಿಲ್ಲ ಅಂದರೂ ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗಕ್ಕಾಗಿಯೇ ಭೇಟಿ ನೀಡುತ್ತಲಿರುತ್ತಾರೆ. ಅದರಲ್ಲೂ ಇಲ್ಲಿ ಬಂದ ಮೇಲೆ ಬಾಡಿಗೆ ದರ ಕೇಳಿಯೇ ಬಹುತೇಕ ಮಂದಿ ಬೆಚ್ಚಿದ ಘಟನೆಗಳು ನಡೆದಿವೆ, ನಡೆಯುತ್ತಲಿವೆ. ಈ ನಡುವೆಯೇ ಇದೀಗ ಭರ್ಜರಿ ಆಫರ್ ಎನ್ನುವಂತೆ ನಗರದ ಪ್ರತಿಷ್ಠಿತ ಪ್ರದೇಶದಲ್ಲಿ ಬಾಡಿಗೆ ದರ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಇದೀಗ ಪ್ರತಿಷ್ಠಿತ ಕಂಪನಿಗಳು ಹಲವು ಕಾರಣ ನೀಡಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು, ಅವರು ಯಾವುದೇ ದಾರಿ ಇಲ್ಲದೆ ಜೀವನಕ್ಕಾಗಿ ತಮ್ಮ ತಮ್ಮ ಊರುಗಳ ಕಡೆ ಮುಖ ಮಾಡುತ್ತಿದ್ದಾರೆ. ಇದು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ನಡುವೆಯೇ ಇದೀಗ ನಗರದ ಪ್ರತಿಷ್ಠಿತ ಪ್ರದೇಶಗಳಲ್ಲೊಂದಾದ ವೈಟ್ ಫೀಲ್ಡ್ ಭಾಗದಲ್ಲಿ ಮನೆ ಬಾಡಿಗೆ ದರ ಇಳಿಕೆಯಾಗಿದೆ ಎನ್ನುವ ಪೋಸ್ಟರ್‌ವೊಂದು ಭಾರೀ ಸದ್ದು ಮಾಡುತ್ತಿದೆ.
ಇನ್ನೂ ಕೆಲವರು ವೈಟ್‌ಫೀಲ್ಡ್ ಪ್ರದೇಶ ಬಿಟ್ಟು ಬೇರೆ ಕಡೆ ಉದ್ಯೋಗ ಹುಡುಕಿಕೊಂಡು ಹೋಗುತ್ತಿದ್ದಾರೆ. ಇದರಿಂದಲೂ ಇಲ್ಲಿನ ಬಾಡಿಗೆ ಮನೆಗಳು ಖಾಲಿ ಆಗುತ್ತಿದ್ದು, ಇದರಿಂದ ಈ ಭಾಗದ ಮನೆ ಮಾಲೀಕರು ನಷ್ಟ ಅನುಭವಿಸುವಂತಾಗಿದೆ. ಈ ಹಿನ್ನೆಲೆ ಬಾಡಿಗೆದಾರರನ್ನು ಸೆಳೆಯಲು ಈ ಭಾಗದಲ್ಲಿ ಪ್ಲಾಟ್ ದರವನ್ನು ದಿಢೀರ್ ಮಾಡಲಾಗಿದೆ ಎನ್ನುವ ಸುದ್ದಿಯೊಂದು ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಇನ್ನು ಬೆಂಗಳೂರಿನ ಈ ಪ್ರದೇಶದಲ್ಲಿ ಬಾಡಿಗೆ ದರದಲ್ಲಿ ದಿಢೀರ್ ಕುಸಿತದಿಂದ ಭಾರತದ ತಂತ್ರಜ್ಞಾನ ವಲಯದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಆನ್‌ಲೈನ್‌ನಲ್ಲಿ ಉದ್ಯೋಗಗಳ ವಜಾ ಬಗ್ಗೆ ಊಹಾಪೋಹಗಳು ಹಬ್ಬಿದ್ದು, ಇದರಿಂದ ಬಹುತೇಕ ಮಂದಿ ಬಾಡಿಗೆ ಮನೆಗಳನ್ನು ಖಾಲಿ ಮಾಡಿ ತಮ್ಮ ಊರುಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಬಳಿಕ ಬಾಡಿಗೆ ದರ ಕುಸಿತ ಕಂಡಿದೆ ಎಂದು ತಿಳಿದುಬಂದಿದೆ.
ಬಾಡಿಗೆ ದರ ಕಡಿಮೆ: ರೆಡ್ಡಿಟ್‌ನಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದು, ದೇಶದ ಐಟಿ ರಾಜಧಾನಿಯಲ್ಲಿ ಉದ್ಯೋಗ ಕಡಿತದ ಬಗ್ಗೆ ವ್ಯಾಪಕ ಚರ್ಚೆಯಾಗಯತ್ತಿದೆ. ರೆಡ್ಡಿಟ್‌ನಲ್ಲಿ ಬಳಕೆದಾರರೊಬ್ಬರು ಇತ್ತೀಚೆಗೆ ರೆಡ್ಡಿಟ್ ಥ್ರೆಡ್‌ನಿಂದ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದು, ವೈಟ್‌ಫೀಲ್ಡ್‌ನಲ್ಲಿ 40,000 ರೂಪಾಯಿ ಬಜೆಟ್‌ನಲ್ಲಿ 2BHK ಫ್ಲಾಟ್‌ಗಳು ಸಿಗುವುದು ತುಂಬಾ ಕಷ್ಟ ಹೇಳಿದ್ದರು.
4-5 ತಿಂಗಳ ಹಿಂದೆ ನನಗೆ 40,000 ರೂಪಾಯಿಗೆ ಉತ್ತಮ ಫ್ಲಾಟ್ ಸಿಗಲಿಲ್ಲ. ಆದರೆ, ಇಂದು ಅದಕ್ಕಿನ ಕಡಿಮೆ ದರದಲ್ಲಿ ಸಿಗುತ್ತಿದೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ ಎಂದು ಫೈನಾನ್ಸಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ರೆಡ್ಡಿಟ್ ಬಳಕೆದಾರರು ಹೇಳುವುದೇನು?: ಮತ್ತೊಬ್ಬ ರೆಡ್ಡಿಟ್ ಬಳಕೆದಾರರು, ಉದ್ಯೋಗಗಳ ಕಡಿತದಿಂದ ಅನೇಕರು ಈಗ ಮನೆಗಳು ಅಥವಾ ಪ್ಲಾಟ್‌ಗಳನ್ನು ಖರೀದಿಸುವ ಯೋಜನೆಗಳನ್ನು ಮುಂದೂಡುತ್ತಿದ್ದಾರೆ. ಬದಲಿಗೆ ಉಳಿತಾಯದ ಮೇಲೆ ತಮ್ಮ ಗಮನಸವನ್ನು ಕೇಂದ್ರೀಕರಿಸುತ್ತಿದ್ದಾರೆ. ಇದು ಸ್ವಾಭಾವಿಕವಾಗಿ ಬಾಡಿಗೆ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಆರ್‌ಟಿಒ (ರಿಟರ್ನ್ ಟು ಆಫೀಸ್) ಜಾರಿಯ ನಂತರ, ಮನೆ ಬಾಡಿಗೆಗಳ ಹೆಚ್ಚಳ ಆದವು. ಈಗ, ಉದ್ಯೋಗಗಳ ಕಡಿತದಿಂದ ಯಾರೂ ದೊಡ್ಡ ಮೊತ್ತ ವಿನಿಯೋಗಿಸಿ ಮನೆಗನ್ನು ಬಾಡಿಗೆ ಪಡೆಯಲು ಮುಂದಾಗಿತ್ತಿಲ್ಲ. ಅಷ್ಟೇ ಅಲ್ಲದೆ, ಇಎಂಐಗಳಿಗಾಗಿ ಖರ್ಚು ಮಾಡಲು ಬಯಸುವುದಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ ಅಳವಡಿಕೆಯ ಆರಂಭವಾದ ಬಳಿಕ ಇದೇ ಕಾರಣ ನೀಡಿ ಅನೇಕ ಕಂಪನಿಗಳು ದೊಡ್ಡ ಮಟ್ಟದಲ್ಲಿ ಉದ್ಯೋಗ ಕಡಿತ ಮಾಡುತ್ತಿವೆ. ಮೈಕ್ರೋಸಾಫ್ಟ್ , ಗೂಗಲ್, ಅಮೆಜಾನ್ ಮತ್ತು ಇಂಟೆಲ್‌ನಂತಹ ಪ್ರಮುಖ ದೈತ್ಯ ಕಂಪನಿಗಳಲ್ಲಿ ಈಗಾಗಲೇ ಭಾರೀ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿವೆ. AI ಉತ್ಪಾದಕತೆಯನ್ನು ಹೆಚ್ಚಿಸುವ ಭರವಸೆ ನೀಡಿದ್ದರೂ, ಪಾತ್ರಗಳನ್ನು ಮರು ಮೌಲ್ಯಮಾಪನ ಮಾಡಿ ಸುವ್ಯವಸ್ಥಿತಗೊಳಿಸಲಾಗಿರುವುದರಿಂದ ಅದು ಉದ್ಯೋಗಿಗಳ ಕಡಿತಕ್ಕೂ ಕಾರಣವಾಗಿದೆ.
ಬಾಡಿಗೆ ದರ ಕಡಿಮೆಯಾಗಲು ಕಾರಣ ಏನು?: ಈ ವರ್ಷ ಮೈಕ್ರೋಸಾಫ್ಟ್ ಸುಮಾರು 9,100 ಉದ್ಯೋಗ ಕಡಿತಗಳೊಂದಿಗೆ ಮುನ್ನಡೆ ಸಾಧಿಸಿದೆ. ಇದರ ಬೆನ್ನಲ್ಲೆ ಇಂಟೆಲ್ ಒರೆಗಾನ್‌ನಲ್ಲಿ 500ಕ್ಕೂ ಹೆಚ್ಚು ಮತ್ತು ಕ್ಯಾಲಿಫೋರ್ನಿಯಾದಲ್ಲಿ 107ಕ್ಕೂ ಹೆಚ್ಚು ಉದ್ಯೋಗ ಕಡಿತಗಳನ್ನು ಘೋಷಿಸಿದೆ. ಜಾಗತಿಕವಾಗಿ ಇನ್ನೂ 5,500 ಉದ್ಯೋಗ ಕಡಿತಗೊಳ್ಳುವ ನಿರೀಕ್ಷೆಯಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಇಂತಹದ್ದೇ ಕಾರಣಗಳಿಂದ ಬಹುತೇಕ ಮಂದಿ ಇದೀಗ ಹೆಚ್ಚಿನ ದರ ಇರುವ ಬಾಡಿಗೆ ಮನೆಗಳನ್ನು ತ್ಯಜಿಸಿ, ಬಾಡಿಗೆ ಕಡಿಮೆಯಿರುವ ಪ್ರದೇಶಗಳ ಕಡೆ ಮುಖ ಮಾಡುತ್ತಿದ್ದಾರೆ. ಇದು ಪ್ರತಿಷ್ಠಿತ ಪ್ರದೇಶಗಳ ಬಾಡಿಗೆ ಮನೆಗಳ ಮಾಲೀಕರಿಗೆ ದೊಡ್ಡ ತಲೆನೋವು ತಂದಿಟ್ಟಿದೆ. ಈ ಸಾಲಿಗೆ ಬೆಂಗಳೂರಿನ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ವೈಟ್ ಫೀಲ್ಡ್ ಕೂಡ ಸೇರಿದೆ.
-
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್












Click it and Unblock the Notifications