Boyfriend Rent: ಬೆಂಗಳೂರಿನಲ್ಲಿ ಕೇವಲ 389 ರೂಪಾಯಿಗೆ ಬಾಡಿಗೆ ಬಾಯ್ ಫ್ರೆಂಡ್: ಪೋಸ್ಟರ್ ಭಾರೀ ವೈರಲ್
ಸಾಮಾನ್ಯವಾಗಿ ಬೇರೆ ದೇಶಗಳಲ್ಲಿ ಬಾಡಿಗೆ ಹೆಂಡ್ತಿ, ಗಂಡ, ಹುಡುಗ, ಹುಡುಗಿ ಸಿಗ್ತಾರೆ ಎನ್ನುವುದು ಎಲ್ಲಾರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ಇದೀಗ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಸಹ ಬಾಡಿಗೆಗೆ ಬಾಯ್ ಫ್ರೆಂಡ್ ಸಿಗ್ತಾರೆ ಎನ್ನುವ ಪೋಸ್ಟರ್‌ವೊಂದು ಭಾರೀ ವೈರಲ್ ಆಗುತ್ತಿದೆ. ಅದರಲ್ಲೂ ವ್ಯಾಲೆಂಟೆನ್ಸ್ ಡೇ ದಿನದಂದೇ ಈ ಪೋಸ್ಟರ್ ಹರಿದಾಡುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರತಿವರ್ಷದ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ಮಾಡಲಾಗುತ್ತದೆ. ಹಾಗೆಯೇ ಇಂದು ಪ್ರೇಮಿಗಳ ದಿನಾಚರಣೆಯಂದೇ ಕಿಡಿಗೇಡಿಗಳನ್ನು ಪೋಸ್ಟರ್‌ವೊಂದನ್ನು ಗೋಡೆಯೊಂದರ ಮೇಲೆ ಅಂಟಿಸಿದ್ದು, ಇದೀಗ ಇದು ಭಾರೀ ವೈರಲ್ ಆಗುತ್ತಿದೆ.

ಬೇರೆ ದೇಶಗಳಲ್ಲಿ ಬಾಡಿಗೆಗೆ ಬಾಯ್ ಫ್ರೆಂಡ್ ಹಾಗೂ ಗರ್ಲ್‌ಫ್ರೆಂಡ್ ಸಿಗುವುದನ್ನು ಕೇಳಿರುತ್ತೀರಿ. ಆದರೆ, ಇದೀಗ ಬೆಂಗಳೂರಲ್ಲೂ ಅಂತಹ ಸಂಸ್ಕೃತಿ ಆರಂಭವಾಯ್ತಾ ಎನ್ನುವ ಪ್ರಶ್ನೆ ಈ ಪೋಸ್ಟರ್‌ನಿಂದ ಮೂಡಿದೆ. ಬೆಂಗಳೂರಿನಲ್ಲಿ ವ್ಯಾಲೆಂಟೈನ್‌ಗೆ ಬಾಯ್ ಫ್ರೆಂಡ್ ಬೇಕಾ? ಎಂದು ಕಿಡಿಗೇಡಿಗಳು ಪೋಸ್ಟರ್ ಅಂಟಿಸಿರುವ ಘಟನೆ ನಡೆದಿದೆ.
ಇಂದು (ಫೆಬ್ರವರಿ 14) ಪ್ರೇಮಿಗಳ ದಿನಾಚರಣೆಯನ್ನು ಬೆಂಗಳೂರು ನಗರದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲು ಪ್ರೇಮಿಗಳು ಈ ಬಾರಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ನಡುವೇಯೇ ಕೇವಲ 389 ರೂಪಾಯಿಗೆ ಒಂದು ದಿನದ ಮಟ್ಟಿಗೆ ಬಾಯ್ ಫ್ರೆಂಡ್ ಬಾಡಿಗೆಗೆ ಸಿಗುತ್ತಾರೆ ಎಂದು ಪೋಸ್ಟರ್‌ವೊಂದ್ನು ಗೋಡೆ ಮೇಲೆ ಅಂಟಿಸಿದ್ದಾರೆ. ಈ ಪೋಸ್ಟರ್ ಅಂಟಿಸಿರುವುದು ಬೇರೆಲ್ಲೂ ಅಲ್ಲ, ಬೆಂಗಳೂರಿನ ಜಯನಗರ ಭಾಗದಲ್ಲಿ ಎಂದು ತಿಳಿದುಬಂದಿದೆ. ಇದು ಇದೀಗ ಸಾಮಾಜಿ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಗೋಡೆಗೆ ಈ ರೀತಿಯಾಗಿ ಪೋಸ್ಟರ್ ಅಂಟಿಸಿರುವ ಕೆಲ ಕಿಡಿಗೇಡಿಗಳು, ಬಾಯ್ ಫ್ರೆಂಡ್ ಸಿಗುತ್ತಾನೆ ಸ್ಕ್ಯಾನ್ ಮಾಡಿ ಎಂಬ ಪೋಸ್ಟರ್ ಅಂಟಿಸಿದ್ದಾರೆ. Rent a Boy Friend Only 389 rs Scan Me ಎಂದು ಬರೆದಿರುವ ಪೋಸ್ಟರ್ ಅನ್ನು ಅಂಟಿಸಿದ್ದಾರೆ. ನಗರದ ಹಲವೆಡೆ ಈ ರೀತಿಯ ಪೋಸ್ಟರ್‌ಗಳು ಕಂಡುಬಂದಿವೆ ಎಂದು ತಿಳಿದುಬಂದಿದೆ. ಜಯನಗರ, ಬನಶಂಕರಿ, ಬಿಡಿಎ ಕಾಂಪ್ಲೇಕ್ಸ್‌ಗಳ ಬಳಿ ಈ ಪೋಸ್ಟರ್‌ಗಳು ಕಂಡುಬಂದಿವೆ ಎಂದು ತಿಳಿದುಬಂದಿದೆ.
ಇನ್ನೂ ಈ ಪೋಸ್ಟರ್‌ಗಳನ್ನು ಕಂಡ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಪೋಸ್ಟರ್ ಅಂಟಿಸಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಇಂತಹವರು ಸಮಾಜಕ್ಕೆ ಏನು ಸಂದೇಶವನ್ನು ಕೊಡೋದಿಕ್ಕೆ ಹೊರಟಿದ್ದಾರೆ ಅಂತಲೂ ಪ್ರಶ್ನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications