Breaking: ರೇಖಾ ಕದಿರೇಶ್ ಹತ್ಯೆ ಹಿಂದೆ ಮಾಸ್ಟರ್ ಮೈಂಡ್ ಮಾಲಾ ಇರುವ ಶಂಕೆ?
ಬೆಂಗಳೂರು, ಜೂನ್ 26: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಹಿಂದೆ ಮಾಸ್ಟರ್ ಮೈಂಡ್ ಮಾಲಾ ಇರುವ ಶಂಕೆ ವ್ಯಕ್ತವಾಗಿದೆ.
ಇದುವರೆಗೆ ಕಾಟನ್‌ಪೇಟೆ ಪೊಲೀಸರಿಂದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆಯಾಗುತ್ತಿದ್ದಂತೆ, ಅವರ ಹತ್ಯೆಯ ಹಿಂದೆ ಯಾರ ಕೈವಾಡವಿರಬಹುದು ಎನ್ನುವ ಪ್ರಶ್ನೆಯೂ ಕಾಡಲು ಆರಂಭಿಸಿತ್ತು.
ಇದೀಗ ರೇಖಾ ಅವರ ಹತ್ಯೆಯ ಹಿಂದೆ ಯಾರ ಕೈವಾಡವಿರಬಹುದು ಎನ್ನುವ ಸುಳಿವು ಪೊಲೀಸರಿಗೆ ಸಿಕ್ಕಿದೆ, ಇದುವರೆಗೆ ಕಾಟನ್ ಪೇಟೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ, ಪೀಟರ್, ಸೂರ್ಯ, ಅರುಳ್, ಅಜಯ್ ಹಾಗೂ ಪುರುಷೋತ್ತಮ್ ಎಂಬುವವರು ಬಂಧನಕ್ಕೊಳಗಾಗಿದ್ದಾರೆ.

ಮಾಲಾಳ ಬಗ್ಗೆ ಇಂಚಿಂಚು ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ, ಪೊಲೀಸರಿಗೆ ಬಂದಿದ್ದ ಕೆಲವು ಅನುಮಾನಗಳು ಈಗ ಸಾಬೀತಾಗಿದೆ. ರೇಖಾಳ ಪ್ರತಿಯೊಂದು ಚಲನವಲನಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.
Recommended Video
ಹಣಕ್ಕಾಗಿ ಸಂಬಂಧಿಕರೇ ಈ ಕೆಲಸ ಮಾಡಿರೋ ಸಂದೇಶ! | Rekha Kadiresh | Oneindia Kannada












Click it and Unblock the Notifications