ರಿಯಲ್ ಎಸ್ಟೇಟ್ ಏಜೆಂಟ್ಸ್‌‌ಗಳ ನೋಂದಣಿ ಕಡ್ಡಾಯವಾಗಲಿ

Real estate
ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಲ್ಲಿ ಭೂ ವ್ಯವಹಾರ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಲಿದ್ದು, ಈ ವ್ಯವಹಾರವನ್ನು ಕುದುರಿಸಲು ಸಹಸ್ರಾರು ದಲ್ಲಾಳಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದಾರೆ. ಪ್ರತಿದಿನ ಈ ಮಹಾ ನಗರಗಳಲ್ಲಿ ನಡೆಯುವ ಕೋಟ್ಯಂತರ ರೂಪಾಯಿಗಳ ವ್ಯವಹಾರದಲ್ಲಿ ದಲ್ಲಾಳಿಗಳ ಪಾತ್ರ ಇದ್ದೇ ಇರುತ್ತದೆ. ವ್ಯವಹಾರಗಳನ್ನು ಕುದುರಿಸುವ ಇವರಿಗೆ ಲಕ್ಷಾಂತರ ರೂಗಳ ಆದಾಯ ಹರಿದು ಬರುತ್ತದೆ. ಆದರೆ ಆದಾಯ ಮತ್ತು ವೃತ್ತಿ ತೆರಿಗೆ ವಲಯದ ವ್ಯಾಪ್ತಿಯಿಂದ ನುಣುಚಿಕೊಂಡು ಇತ್ತ ಆದಾಯ ತೆರಿಗೆಗೂ ಸಿಲುಕದೆ ಅತ್ತ ವೃತ್ತಿ ತೆರಿಗೆಗೂ ಸಿಲುಕದೆ ಸರಕಾರಕ್ಕೆ ಸಲ್ಲಬೇಕಾದ ಕೋಟ್ಯಂತರ ರೂಗಳ ತೆರಿಗೆ ವಂಚನೆ ತೆರೆಮರೆಯಲ್ಲಿ ನಡೆಯುತ್ತಲೇ ಇದೆ.

ಇಂದು ಈ ವ್ಯವಹಾರದಲ್ಲಿ ನುರಿತ ಅನೇಕ ದಲ್ಲಾಳಿಗಳು ಕೋಟ್ಯಾಧಿಪತಿಗಳಾಗಿದ್ದಾರೆ ಹೇರಳ ಆಸ್ತಿಪಾಸ್ತಿ, ನಗನಾಣ್ಯ ಐಷಾರಾಮಿ ಕಾರುಗಳು ಕಪ್ಪುಹಣದ ಮೂಟೆಗಟ್ಟಲೆ ಹಣ ಹೀಗೆ ಸಕಲವನ್ನೂ ಅನುಭವಿಸುವ ಈ ಜನರನ್ನು ವೃತ್ತಿ ಮತ್ತು ಆದಾಯ ತೆರಿಗೆಯ ವ್ಯಾಪ್ತಿಗೆ ತರುವ ಕೆಲಸ ಸರ್ಕಾರ ತುರ್ತಾಗಿ ಮಾಡಬೇಕಾಗಿದೆ.

ಇಂತಹ ವ್ಯವಹಾರಗಳ ದಂಧೆ ರಾಷ್ಟ್ರದ ಪ್ರಮುಖ ನಗರಗಳಲ್ಲಿ ಯಾವ ಅಂಕುಶವು ಇಲ್ಲದೇ ಅವ್ಯಾಹುತವಾಗಿ ಅಡೆತಡೆಯಿಲ್ಲದೆ ನಡೆಯುತಲಿದ್ದು, ಯಾವ ನಿಯಂತ್ರಣಕ್ಕೂ ಸಿಗದೆ, ಇಂದೊಂದು ರೀತಿಯಲ್ಲಿ ಹಗಲು ದರೋಡೆಯೇ ಆಗಿದೆ ಎಂದರೆ ತಪ್ಪಾಗದು.[ನಮ್ಮ ಮೆಟ್ರೋ ಎಫೆಕ್ಟ್: ರಿಯಲ್ ಎಸ್ಟೇಟ್ ಗಗನಕ್ಕೆ]

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮಹಾನಗರ ಐಟಿ, ಬಿಟಿ ಯ ಕೇಂದ್ರವಾಗಿದ್ದು, ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿದ್ದು, ಜಗತ್ತಿನ ಎಲ್ಲ ಜನರನ್ನು ಆಕರ್ಷಿಸುತ್ತಿದೆ. ಈ ಕಾರಣದಿಂದಾಗಿ ಬೆಂಗಳೂರು ಇತಿಮಿತಿಯಿಲ್ಲದೇ ಬೃಹದಾಕಾರವಾಗಿ ಬೆಳೆಯುತ್ತಿದ್ದು, ಇಲ್ಲಿನ ಭೂಮಿಯ ಬೆಲೆ ಗಗನವನ್ನು ಮುಟ್ಟುತ್ತಿದ್ದು, ಭೂ ವ್ಯವಹಾರಗಳು ಕೋಟಿಕೋಟಿ ರೂಗಳಲ್ಲಿ ನಡೆಯುತ್ತಿದ್ದು, ಇದನ್ನು ಕುದುರಿಸಲು ದಲ್ಲಾಳಿಗಳ ದಂಡು ಹಿಂಡುಹಿಂಡಾಗಿ ಸೃಷ್ಟಿಯಾಗುತ್ತಿದೆ.

ಈ ದಲ್ಲಾಳಿಗಳ ಕಮೀಷನ್‌ ಶೇಕಡವಾರು ವ್ಯವಹಾರಗಳು ಹಲವು ಲಕ್ಷಗಳೇ ಆಗಿದ್ದು, ಯಾವ ಲೆಕ್ಕಕ್ಕೂ ಬಾರದೇ ಅವರ ಜೇಬನ್ನು ಸೇರುತ್ತದೆ. ಉದಾಹರಣೆಗೆ ಹತ್ತು ಕೋಟಿಯ ಮೌಲ್ಯದ ಆಸ್ತಿಯ ವ್ಯವಹಾರ ಪೂರೈಸಿದಲ್ಲಿ ಈ ದಲ್ಲಾಳಿಗಳ ಕಮೀಷನ್‌ ಶೇಕಡಾ 2ರಷ್ಟು ಆಗಿದ್ದು ಒಮ್ಮೊಮ್ಮೆ ಚೌಕಾಶಿಯಾಗಿ ಶೇ.ಒಂದು ಅಥವಾ ಒಂದುವರೆಯಷ್ಟು ತೀರ್ಮಾನವಾಗಿ ಅವರ ಸಂಭಾವನೆ ಸುಮಾರು 15 ಲಕ್ಷದಿಂದ 20 ಲಕ್ಷದವರೆಗೂ ತಲಪುತ್ತದೆ.

ಆದರೆ ಈ ತೆರೆಮರೆಯ ವ್ಯವಹಾರ ಯಾವುದೇ ತೆರಿಗೆಯ ವ್ಯಾಪ್ತಿಗೆ ಬಾರದೇ ಅಷ್ಟು ಹಣ ತೆರಿಗೆಯಿಂದ ವಂಚಿತವಾಗಿ ಕಪ್ಪುಹಣ ಉತ್ಪತ್ತಿಗೆ ಕಾರಣವಾಗುತ್ತದೆ. ಇನ್ನೂ ಹಲವು ದೊಡ್ಡ ದಲ್ಲಾಳಿಗಳ ವ್ಯವಹಾರ ಕೇವಲ ಕಮಿಷನ್‌‌ಗೆ ಸೀಮಿತವಾಗದೆ ಮಾರುವವರ ಜೊತೆ ಕ್ರಯದ ಒಪ್ಪಂದ ಮಾಡಿಕೊಂಡು, ಅವರಿಗೆ ಮುಂಗಡ ಹಣ ನೀಡಿ, ಒಪ್ಪಂದಂತೆ ಬೇರೆಯವರಿಗೆ ಮಾರಾಟಮಾಡಿ ಕಮಿಷನ್‌‌ಗಿಂತಲೂ ದುಪ್ಪಟ್ಟು ಇಲ್ಲವೇ ಇನ್ನೂ ಹೆಚ್ಚಿನ ಸಂಪಾದನೆಯನ್ನು ಮಾಡುವವರಿದ್ದಾರೆ

ಇವೆಲ್ಲವೂ ಕಣ್ಣಿಗೆ ಕಾದರೂ ಲೆಕ್ಕಕ್ಕೆ ಬಾರದೇ ತೆರಿಗೆ ವಂಚನೆಯಾಗುತ್ತದೆ. ಕಮೀಷನ್‌ ಹಣವನ್ನು ಕಡ್ಡಾಯವಾಗಿ ಚೆಕ್ಕು ಇಲ್ಲವೇ ಡಿಡಿ ರೂಪದಲ್ಲಿ ನೀಡಿದಲ್ಲಿ ಅದು ತೆರಿಗೆಯ ವ್ಯಾಪ್ತಿಗೆ ಖಂಡಿತವಾಗಿಯೇ ಬರುತ್ತದೆ.

ಜನರು ಮಾಡುವ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಕಡ್ಡಾಯವಾಗಿ ತೆರಿಗೆ ಜಾಲಕ್ಕೆ ಬರಲೇಬೇಕು. ಪ್ರತಿಯೊಬ್ಬರೂ ತಾವು ಮಾಡುವ ವೃತ್ತಿಗೆ ವೃತ್ತಿ ತೆರಿಗೆ ತೆರಬೇಕೆಂಬ ಕಾಯಿದೆ ಜಾರಿಯಲ್ಲಿದೆ. ಹೀಗಿರುವಾಗ ಭೂ ದಲ್ಲಾಳಿಗಳ ಸೇವೆಯನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕೆಂಬ ಕಾಯಿದೆಯನ್ನು ಜಾರಿಗೆ ತರಬೇಕಾಗಿದೆ. ಇಂತಹ ಕಡ್ಡಾಯ ನೋಂದಣಿಯಿಂದ ಈ ದಲ್ಲಾಳಿಗಳು ತೆರಿಗೆವಲಯಕ್ಕೆ ಸಿಲುಕಿ ವೃತ್ತಿ ತೆರಿಗೆ, ಆದಾಯ ತೆರಿಗೆ, ಮನೋರಂಜನಾ ತೆರಿಗೆ ಇವುಗಳಲ್ಲಿ ಭಾಗಿಯಾಗುವ ವ್ಯವಸ್ಥೆಯ ಅಗತ್ಯವಿದೆ.

ಬೆಂಗಳೂರು ನಗರದಲ್ಲಿ ಲಕ್ಷಾಂತರ ಜನ ಈ ದಲ್ಲಾಳಿ ವೃತ್ತಿಯಿಂದ ಶ್ರೀಮಂತರಾಗಿ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ನಗರದ ಪ್ರಮುಖ ಜಾಗಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಮತ್ತು ವಾಸದ ಮನೆಗಳನ್ನು ನಿರ್ಮಿಸಿ ಪ್ರತಿ ತಿಂಗಳು ಲಕ್ಷಾಂತರ ರೂ.ಗಳ ಬಾಡಿಗೆ ಪಡೆಯುತ್ತಿದ್ದಾರೆ. ಇದಕ್ಕೆ ಆದಾಯ ತೆರಿಗೆ ಇಲ್ಲ. ಇವರ ಮಕ್ಕಳು ಲಕ್ಷಾಂತರ ರೂ ದೇಣಿಗೆ ನೀಡಿ ಅಂತರಾಷ್ಟ್ರೀಯ ಮಟ್ಟದ ಶಾಲೆಗಳಲ್ಲಿ ಓದುತ್ತಿದ್ದಾರೆ. ಆದರೆ ಸರಕಾರಕ್ಕೆ ಸಲ್ಲಬೇಕಾದ ತೆರಿಗೆ ಮಾತ್ರ ಸೊನ್ನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+