ಪ್ರಮುಖ ಸಾಕ್ಷಿ, ರವಿ ಬೆಳಗೆರೆ ಎರಡನೇ ಹೆಂಡತಿ ನಾಪತ್ತೆ

Recommended Video

      ರವಿ ಬೆಳಗೆರೆ ಬಂಧನ | ಪ್ರಮುಖ ಸಾಕ್ಷಿ, ರವಿ ಬೆಳಗೆರೆ ಎರಡನೇ ಹೆಂಡತಿ ನಾಪತ್ತೆ

      ಬೆಂಗಳೂರು, ಡಿಸೆಂಬರ್ 09 : ರವಿ ಬೆಳಗೆರೆ ಅವರ ಎರಡನೇ ಪತ್ನಿ ರಾಜರಾಜೇಶ್ವರಿ ನಗರ ಸಮೀಪದ ಪಟ್ಟಣಗೆರೆಯ ತಮ್ಮ ನಿವಾಸದಿಂದ ನಾಪತ್ತೆಯಾಗಿದ್ದಾರೆ.

      ರವಿ ಬೆಳಗೆರೆ ಅವರು ತಮ್ಮ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಲು ಪ್ರಮುಖ ಕಾರಣ ರವಿಬೆಳಗೆರೆ ಅವರ ಎರಡನೇ ಪತ್ನಿಯೇ ಎಂಬ ಊಹಾಪೋಹ ನಿನ್ನೆಯಿಂದಲೂ ಚಾಲ್ತಿಯಲ್ಲಿತ್ತು. ಸುನಿಲ್ ಹೆಗ್ಗರವಳ್ಳಿ ಅವರೊಂದಿಗೆ ರವಿ ಬೆಳಗೆರೆ ಎರಡನೇ ಪತ್ನಿ ಅವರಿಗೆ ಸಂಬಂಧವಿತ್ತು ಹಾಗಾಗಿಯೇ ಬೆಳಗೆರೆ ಸುನಿಲ್ ಅವರ ಹತ್ಯೆಗೆ ಸುಪಾರಿ ನೀಡಿದ್ದರು ಎಂಬ ಮಾತುಗಳು ಓಡಾಡುತ್ತಿದ್ದವು. ಈ ಅನುಮಾನಗಳಿಗೆ ರವಿ ಬೆಳೆಗೆರೆ ಕೆಲವು ತಿಂಗಳುಗಳ ಹಿಂದೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ ಬರಹಗಳು ಪೂರಕವಾಗಿ ನಿಂತಿದ್ದವು. ಈಗ ಅವರು ನಾಪತ್ತೆಯಾಗುವ ಮೂಲಕ ಅನುಮಾನಗಳು ಇನ್ನೂ ದಟ್ಟವಾದಂತಾಗಿದೆ

      Ravi Belagere's second wife goes missing from her House in Rajarajeshwari Nagar

      ರಾಜರಾಜೇಶ್ವರಿ ನಗರದಲ್ಲಿ 'ಹಿಮ ಬೆಳಗೆರೆ' ಎಂಬ ಹೆಸರಿನ ಭವ್ಯ ಮನೆಯಲ್ಲಿ ವಾಸವಿದ್ದ ರವಿ ಬೆಳಗೆರೆ ಅವರ ಎರಡನೇ ಪತ್ನಿ ನಿನ್ನೆ(ಡಿಸೆಂಬರ್ 09) ರಂದು ರವಿ ಬೆಳಗೆರೆ ಬಂಧನವಾಗುತ್ತಿದ್ದಂತೆಯೇ ಮನೆಯಿಂದ ನಾಪತ್ತೆಯಾಗಿದ್ದರೆ. ತಮ್ಮ ಫೇಸ್‌ಬುಕ್‌ ಖಾತೆಯಿಂದ ಅವರು ರವಿಬೆಳಗೆರೆ ಅವರೊಂದಿಗಿದ್ದ ಚಿತ್ರಗಳನ್ನು ಡಿಲೀಟ್ ಕೂಡ ಮಾಡಿದ್ದಾರೆ.

      ಸಿಸಿಬಿ ಪೊಲೀಸರು ರವಿ ಬೆಳಗೆರೆ ಅವರ ಎರಡನೇ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿ ಸುನಿಲ್ ಹೆಗ್ಗರವಳ್ಳಿ ಅವರೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ವಿಚಾರಿಸುವ ಸಾಧ್ಯತೆ ಇರುವ ಕಾರಣ ಅವರು ನಾಪತ್ತೆ ಆಗಿದ್ದಾರೆ ಎನ್ನಲಾಗುತ್ತಿದೆ. ಅವರಿಗೆ ಸಣ್ಣ ವಯಸ್ಸಿನ ಮಗನಿದ್ದೂ ಅವನನ್ನೂ ಕರೆದುಕೊಂಡು ನಾಪತ್ತೆ ಆಗಿದ್ದಾರೆ.

      ಈ ಪ್ರಕರಣದಲ್ಲಿ ರವಿ ಬೆಳಗೆರೆ ಅವರ ಎರಡನೇ ಪತ್ನಿ ಅವರ ಹೇಳಿಕೆ ಅತ್ಯಂತ ಪ್ರಮುಖವಾಗಿದ್ದು, ಸಿಸಿಬಿ ಪೊಲೀಸರು ಅವರನ್ನು ಪತ್ತೆ ಹಚ್ಚುವ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭಿಸಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+