ಆಕೆ ಮೇಲಿನ ಸೇಡು ತೀರಿಸಿಕೊಳ್ಳಲು ಅತ್ಯಾಚಾರ ಮಾಡಿದ್ದೆ ಎಂದ ಟೆಕ್ಕಿ
ಬೆಂಗಳೂರು, ಜನವರಿ 11: ಆಕೆಯ ಮೇಲಿದ್ದ ಸೇಡು ತೀರಿಸಿಕೊಳ್ಳಲು ಅತ್ಯಾಚಾರ ಮಾಡಿದ್ದೆ ಎಂದು ದೆಹಲಿ ಮೂಲದ ಟೆಕ್ಕಿ ಮೈಕಲ್ ವಿಚಾರಣೆ ವೇಳೆ ಕೆಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ.
2018ರ ಅಕ್ಟೋಬರ್ 21ರಂದು ಟೆಕ್ಕಿ ಮೈಕಲ್ ಸಂತ್ರಸ್ತೆಯನ್ನು ಮನೆಗೆ ಊಟಕ್ಕೆ ಆಹ್ವಾನಿಸಿದ್ದ, ಬಳಿಕ ಆಕೆಯ ಬಳಿಕ ದೈಹಿಕ ಸಂಪರ್ಕ ಹೊಂದುವಂತೆ ಆತ ಪೀಡಿಸಿದ್ದ, ಆಕೆ ನಿರಾಕರಿಸಿದ್ದಳು.
ಅದಕ್ಕೆ ಕೋಪಗೊಂಡ ಮೈಕಲ್ ಕೋಪವನ್ನು ತೋರಿಸಿಕೊಳ್ಳದೆ, ಜ್ಯೂಸ್‌ನಲ್ಲಿ ನಿದ್ದೆ ಮಾತ್ರೆ ಹಾಕಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ, ತನ್ನ ಜೊತೆ ಆಕೆ ಬರಲಿಲ್ಲ ಎನ್ನುವ ಸೇಡಿಗೆ ಅತ್ಯಾಚಾರ ಮಾಡಿದ್ದೆ ಎನ್ನುವ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ಬುಧವಾರ ಟೆಕ್ಕಿಯನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದರು. ಆಕೆಯ ಕರೆಯಿಂದ ದೂರವಾಗಲು ದೆಹಲಿಗೆ ಹೋಗಿ ವಾಸವಾಗಿದ್ದ, ಕಳೆದ ಕೆಲವು ದಿನಗಳ ಹಿಂದೆ ಆತ ಮತ್ತೆ ಬೆಂಗಳೂರು ಬಂದಿದ್ದು ಯಾವುದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ. ಮೊದಲು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆಗೆ ಆಕೆಯ ಸ್ನೇಹಿತನಿಂದ ಮೈಕಲ್ ಪರಿಚಯವಾಗಿತ್ತು.












Click it and Unblock the Notifications