‘ಗುಮ್ಮ ಬಂದ ಗುಮ್ಮ' ನಾಟಕ ಮತ್ತೆ ಬಂದಿದೆ ನೋಡಿ
ಬೆಂಗಳೂರು, ಜನವರಿ 11: ರಂಗ ಶಂಕರದ ಬಹು ಪ್ರಖ್ಯಾತ ನಾಟಕ 'ಗುಮ್ಮ ಬಂದ ಗುಮ್ಮ' ಮತ್ತೊಮ್ಮೆ ಪ್ರದರ್ಶನ ಕಾಣುತ್ತಿದೆ.
2006 ರಲ್ಲಿ ಮೊದಲ ಪ್ರಯೋಗ ಕಂಡದಿದ್ದು, ಇಂದಿಗೂ ಮಕ್ಕಳಿಗೆ ಮತ್ತು ಪೋಷಕರಿಗೆ ಅತೀ ಪ್ರಿಯವಾದ ನಾಟಕವಾಗಿದೆ ಎಂಬುದೇ ನಮ್ಮ ಹೆಮ್ಮೆ. ಅಂದಿನಿಂದ ಇಂದಿನ ವರೆಗೂ, ಬಹಳಷ್ಟು ಬಾರಿ ಮರು ನಿರ್ಮಿಸಲ್ಪಟ್ಟ ಈ ನಾಟಕ , ಈಗ, ಮತ್ತೆ ಸುರೇಂದ್ರನಾಥ್ ಎಸ್. ರವರ ನಿರ್ದೇಶನದಲ್ಲಿ ನಿಮ್ಮ ಮುಂದೆ ಕಾಣಲಿದೆ.

ಮೂಲ ಜರ್ಮನ್ ನಾಟಕ ಮ್ಯಾಕ್ಸ್ ಅಂಡ್ ಮಿಲಿ ಯ ಆಧಾರಿತ 'ಗುಮ್ಮ ಬಂದ ಗುಮ್ಮ', ಮಕ್ಕಳ ಮನಸ್ಥಿತಿಯನ್ನು ಬಿಂಬಿಸುತ್ತದೆ, ಮಕ್ಕಳು ಹೇಗೆ ಭಾಷೆ, ಬಣ್ಣ, ಮೇಲು ಕೀಳಿನ ಹಂಗಿಲ್ಲದೇ, ಮತ್ತೊಬ್ಬರೊಂದಿಗೆ ಬೆರೆಯುತ್ತಾರೆಂಬುದೇ ಈ ನಾಟಕದ ತಿರುಳು.
ಮಕ್ಕಳನ್ನು ಮಾತ್ರವಲ್ಲದೇ, ಎಲ್ಲ ವಯಸ್ಸಿನ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ 'ಗುಮ್ಮ ಬಂದ ಗುಮ್ಮ' ನಾಟಕ.

ನಾಟಕದ ವಿವರ
ನಾಟಕದ ಹೆಸರು : 'ಗುಮ್ಮ ಬಂದ ಗುಮ್ಮ' (5 ವರ್ಷ ಮೇಲ್ಪಟ್ಟವರಿಗೆ ಮಾತ್ರ )
ನಿರ್ದೇಶನ : ಸುರೇಂದ್ರನಾಥ್ ಎಸ್.
ಸ್ಥಳ : ರಂಗ ಶಂಕರ
ದಿನಾಂಕ ಮತ್ತು ಸಮಯ : ಜನವರಿ 12 ಮತ್ತು 13 | ಸಂಜೆ 7:30 ಕ್ಕೆ
ಟಿಕೆಟ್ ದರ : ರೂ. 100/-
Online Booking : www.bookmyshow.com
ಟಿಕೆಟ್‌ಗಳು ರಂಗ ಶಂಕರದಲ್ಲಿ ದೊರೆಯುತ್ತವೆ. ; Payments accepted through paytm / Debit and Credit card also
(ಒನ್ಇಂಡಿಯಾ ಸುದ್ದಿ)












Click it and Unblock the Notifications