ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾನಾಪುರದಲ್ಲಿ ಹುಲಿ ಬಿಟ್ಟ ಪ್ರಕರಣದ ತನಿಖೆ ಇಲ್ಲ

By Kiran B Hegde
|
Google Oneindia Kannada News

ಬೆಂಗಳೂರು, ಜ. 7: ಬೆಳಗಾವಿಯಲ್ಲಿ ಮಹಿಳೆಯನ್ನು ಬಲಿ ತೆಗೆದುಕೊಂಡ ನರಭಕ್ಷಕ ಹುಲಿಯನ್ನು ಖಾನಾಪುರ ಅರಣ್ಯಕ್ಕೆ ಬಿಟ್ಟ ಪ್ರಕರಣದ ತನಿಖೆ ನಡೆಸಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಆಗ್ರಹಿಸಿದ್ದವು. ಈ ನಿರ್ಧಾರದ ಹಿಂದೆ ರಾಜ್ಯ ಗೃಹ ಸಚಿವ ಜಾರ್ಜ್ ಅವರ ಪುತ್ರ ರಾಣಾ ಕೈವಾಡವಿದೆ ಎಂದು ಪರೋಕ್ಷವಾಗಿ ಆರೋಪಿಸಿದ್ದರು.

ಆದರೆ, ಈ ಪ್ರಕರಣದ ತನಿಖೆ ಅಗತ್ಯವಿಲ್ಲ ಎಂದು ಅರಣ್ಯ ಸಚಿವ ರಮಾನಾಥ ರೈ ಸ್ಪಷ್ಟವಾಗಿ ತಿಳಿಸಿದ್ದಾರೆ. ಅಲ್ಲದೆ, ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯೇ ಪಿಸಿಸಿಎಫ್ ನೇತೃತ್ವದ ವರದಿ ಆಧರಿಸಿ ಹುಲಿಯನ್ನು ಕಾಡಿಗೆ ಬಿಡಲಾಗಿತ್ತು. ಈ ಕಾಯಿದೆ ಪ್ರಕಾರ ಹುಲಿ ಇನ್ನೂ ಚಿಕ್ಕ ವಯಸ್ಸಿನದಾಗಿದ್ದರೆ ಕಾಡಿಗೆ ಬಿಡಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ. [ನರಭಕ್ಷಕ ಹುಲಿ ಕಾಡಿಗೆ ಬಿಟ್ಟಿದ್ದು ಏಕೆ?]

tiger

ಹುಲಿಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಆದರೆ, ಸಿಗ್ನಲ್ ಸಿಗದ ಕಾರಣ ಈ ರೇಡಿಯೋ ಕಾಲರ್ ಕೆಲಸ ಮಾಡಲಿಲ್ಲ. ಇಲ್ಲಿ ಯಾವುದೇ ನಿಯಮದ ಉಲ್ಲಂಘನೆಯಾಗಿಲ್ಲ. ಆದ್ದರಿಂದ ತನಿಖೆಯೂ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. [ಚಿಕ್ಕಮಗಳೂರು ಹುಲಿಗೆ ಬೆಳಗಾವಿಯಲ್ಲೂ ಮಹಿಳೆ ಬಲಿ]

ರಾಣಾ ಜಾರ್ಜ್ ಕೈವಾಡವಿಲ್ಲ : ನರಭಕ್ಷಕ ಹುಲಿಯನ್ನು ಖಾನಾಪುರ ಅರಣ್ಯದೊಳಗೆ ಬಿಡುವಲ್ಲಿ ಗೃಹ ಸಚಿವರ ಪುತ್ರ ರಾಣಾ ಜಾರ್ಜ್ ಕೈವಾಡವಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಅವರು ವನ್ಯಜೀವಿ ಸಲಹಾ ಮಂಡಳಿ ಸದಸ್ಯರು. ಆದ್ದರಿಂದ ಅರಣ್ಯ ಪ್ರದೇಶಕ್ಕೆ ಹೋಗುವುದು ಸಹಜ ಎಂದು ಸಮರ್ಥಿಸಿಕೊಂಡರು. [ನರಭಕ್ಷಕ ಹುಲಿ ಗುಂಡೇಟಿಗೆ ಬಲಿ]

ಖಾನಾಪುರ ಅರಣ್ಯದಲ್ಲಿ ಮತ್ತೊಂದು ಹುಲಿ ಇದೆ ಎಂಬ ವಿಷಯ ಇನ್ನೂ ದೃಢಪಟ್ಟಿಲ್ಲ ಎಂದು ರಮಾನಾಥ ರೈ ತಿಳಿಸಿದ್ದಾರೆ.

English summary
Minister for forest Ramanath Rai has refused to probe into tiger attack issue of Khanapur. BJP state president Prahlad Joshi and Leader of Opposition in the Legislative Assembly Jagadish Shettar had demanded a CID probe into the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X