ಬೆಂಗಳೂರಲ್ಲೂ ರಾಮಮಂದಿರ ನಿರ್ಮಾಣ: ಆರ್ ಅಶೋಕ್

ಬೆಂಗಳೂರು, ನವೆಂಬರ್ 5: ಬೆಂಗಳೂರಲ್ಲೂ ರಾಮಮಂದಿರ ನಿರ್ಮಿಸುವ ಚಿಂತನೆ ಇದೆ ಎಂದು ಬಿಜೆಪಿ ಮುಖಂಡ ಆರ್ ಅಶೋಕ್ ಹೇಳಿದ್ದಾರೆ.

ಇದೀಗ ಅಯೋಧ್ಯೆಯಲ್ಲಿ ಶೀಘ್ರ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ, ಬೆಂಗಳೂರಲ್ಲೂ ರಾಮಮಂದಿರವನ್ನು ನಿರ್ಮಾಣ ಮಾಡುವ ಚಿಂತನೆ ಇದೆ, ರಾಮನನ್ನು ಇಡೀ ದೇಶವೇ ಪೂಜಿಸುತ್ತದೆ, ಗೌರವ ಇದೆ, ಈ ಕುರಿತು ಚರ್ಚೆ ನಡೆಸಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಮರ್ಯಾದ ಪುರುಷೋತ್ತಮ ರಾಮನಿಗೆ ಇಡೀ ಭಾರತ ಗೌರವ ನೀಡುತ್ತೆ, ಟೀಂ ನಮ್ಮ ಜೊತೆ ಚರ್ಚೆ ಸನಡೆಸಲಿದ್ದೇವೆ, ಈ ಕುರಿತು ಇಡೀ ಭಾರತ ಸಹಕಾರ ನೀಡಲಿದೆ ಎಂದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಾನಾ ತೊಡಕುಗಳು ಹಲವಾರು ವರ್ಷಗಳಿಂದ ಬರುತ್ತಿದೆ. ಮಂದಿರ ನಿರ್ಮಾಣ ಮಾಡಲು ಬೇಕಾದ ಎಲ್ಲಾ ಪರಿಕರಗಳು ಸುಮಾರು 7 ವರ್ಷಗಳಿಂದ ಸಿದ್ಧವಿದೆ. ಆದರೂ ಮಂದಿರ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ.

Ram Mandir will built in Bengaluru too: R Ashok

ಒಂದೆಡೆ ಅಯೋಧ್ಯೆ ರಾಮಮಂದಿರ-ಬಾಬ್ರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ. 15 ನೇ ಶತಮಾನದ ಬಾಬ್ರಿ ಮದೀಸಿಯನ್ನು ಕರ ಸೇವಕರು 1992ರಲ್ಲಿ ನೆಲಸಮಗೊಳಿಸಿದರು. ನಂತರ ಈ ವಿವಾದಾತ್ಮಕ ನಿವೇಶನವನ್ನು ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಸಮನಾಗಿ ಹಂಚಿಕೆ ಮಾಡುವಂತೆ ಅಲಹಬಾದ್ ಹೈಕೋರ್ಟ್ ತೀರ್ಪು ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+