• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಬಿಎಂಪಿ ಚುನಾವಣೆಗಾಗಿ ಬಿಗ್ ಬೆಂಗಳೂರು ಫೈಟ್

By Mahesh
|

ಬೆಂಗಳೂರು, ಜು.1: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ನಗರದ 198 ವಾರ್ಡ್‌ಗಳಲ್ಲಿ ಒಂದೇ ಹಂತದಲ್ಲಿ ಜುಲೈ 28ರಂದು ಮತದಾನ ನಡೆಯಲಿದೆ. ಅದರೆ, ಭ್ರಷ್ಟಾಚಾರ ಅಳಿಸಿ, ಸುಸ್ಥಿರ ಬೆಂಗಳೂರಿಗಾಗಿ ಸಂಸದ ರಾಜೀವ್ ಚಂದ್ರಶೇಖರ್ ಅವರು ವಿಶಿಷ್ಟ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.

ನಮ್ಮ ಬೆಂಗಳೂರು ಪ್ರತಿಷ್ಠಾನದ ಮುಖ್ಯಸ್ಥರೂ ಆಗಿರುವ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಬಿಬಿಎಂಪಿ ಚುನಾವಣೆಗೂ ಮುನ್ನ ಸ್ವಯಂ ಪ್ರೇರಿತರಾಗಿ ವ್ಯವಸ್ಥೆಯಲ್ಲಿನ ಭ್ರಷ್ಟತೆಯನ್ನು ತೊಡೆದು ಹಾಕಲು ಸ್ವಯಂಸೇವಕರನ್ನು ಆಹ್ವಾನಿಸಿದ್ದಾರೆ.

ಆಸಕ್ತರು 'ಬಿಗ್ ಬೆಂಗಳೂರು ಫೈಟ್' ವೆಬ್ ಸೈಟ್ ಗೆ ಹೋಗಿ ತಮ್ಮ ಹೆಸರು, ಇಮೇಲ್ ವಿಳಾಸ ಹಾಗೂ ಫೋನ್ ನಂಬರ್ ನೀಡಿ ನೋಂದಾಯಿಸಿಕೊಳ್ಳಬಹುದು. [ಅಪ್ರಾಪ್ತರ ಕೈಗೆ ಎಣ್ಣೆ ಗ್ಲಾಸ್! ವಿರುದ್ಧ ರಾಜೀವ್ ವಿನೂತನ ಜಾಗೃತಿ]

ಅಭಿಯಾನ ಏಕೆ?: ಜನ ಜಾಗೃತಿ ಅಭಿಯಾನ ಕೈಗೊಳ್ಳುವುದರಲ್ಲಿ ಸಿದ್ದ ಹಸ್ತರಾಗಿರುವ ರಾಜೀವ್ ಅವರು ಇತ್ತೀಚೆಗೆ ಬಾರ್ ಗಳಲ್ಲಿ ಅಪ್ರಾಪ್ತ ಬಾಲಕರಿಗೆ ಮದ್ಯ ಪೂರೈಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಟ್ವಿಟ್ಟರ್ ನಲ್ಲಿ ಜಾಗೃತಿ ಮೂಡಿಸಿದ್ದರು. [ಬಿಬಿಎಂಪಿ ಚುನಾವಣೆ ವೇಳಾಪಟ್ಟಿ]

ಈಗ ಬಿಬಿಎಂಪಿ ಚುನಾವಣೆಗೂ ಮುನ್ನ ಚುನಾವಣೆ ಮಹತ್ವ, ಮತದಾನ, ಭ್ರಷ್ಟಾಚಾರ ನಿರ್ಮೂಲನೆ, ನಿಮ್ಮ ಪರಿಸರದ ಬಗ್ಗೆ ಅರಿವು ಹೀಗೆ ಅನೇಕ ವಿಷಯಗಳ ಮೇಲೆ ಜನ ಜಾಗೃತಿ ಮೂಡಿಸುತ್ತಿದ್ದಾರೆ. [ಬಿಬಿಎಂಪಿ ಚುನಾವಣೆಗೆ ತಯಾರಿ ಆರಂಭಿಸಿದ ಎಎಪಿ]

ಆಡಳಿತದಲ್ಲಿ ಪಾರದರ್ಶಕತೆ, ಭ್ರಷ್ಟಾಚಾರ ರಹಿತ ಆಡಳಿತ ನಿಮಗೆ ಸಿಗಬೇಕಾದರೆ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ, ಅಕ್ರಮ ಸಕ್ರಮ, ಭೂ ಒತ್ತುವರಿ, ಆಸ್ತಿ ತೆರಿಗೆ, ಮೂಲ ಸೌಕರ್ಯ ಕೊರತೆ ಹೀಗೆ ಅನೇಕ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ಮೂಡಬಹುದಾದ ಸಹಜ ಪ್ರಶ್ನೆಗಳಿಗೆ ಉತ್ತರ ಕೇಳುವ ಸಮಯ ಈಗ ಬಂದಿದೆ ಎಂದು ರಾಜೀವ್ ಹೇಳಿದ್ದಾರೆ. ಆಸಕ್ತರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಅವಿಭಜಿತ ಬಿಬಿಎಂಪಿಯ 198 ವಾರ್ಡ್‌ಗಳಿಗೆ ಒಂದೇ ಹಂತದಲ್ಲಿ ಜುಲೈ 28ರ ಮಂಗಳವಾರ ಮತದಾನ ನಡೆಯಲಿದ್ದು, ಜು.31ರ ಶುಕ್ರವಾರ ಫಲಿತಾಂಶ ಪ್ರಕಟಗೊಳ್ಳಲಿದೆ. (ಒನ್ ಇಂಡಿಯಾ ಸುದ್ದಿ)

English summary
MP Rajeev Chandrasekhar started a campaign 'The Big Bengaluru Fight' seeks to expose city issues and reclaim city governance, through mobilizing like- minded NGOs and engaging citizens by partnering with the media and seeking judicial intervention, if necessary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X