ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆಗೆ ತಯಾರಿ ಆರಂಭಿಸಿದ ಎಎಪಿ

|
Google Oneindia Kannada News

ಬೆಂಗಳೂರು, ಮೇ 11 : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಹುಮತಗಳಿಸಿ ಸರ್ಕಾರ ರಚನೆ ಮಾಡಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಮೂರು ತಿಂಗಳಿನಲ್ಲಿ ಚುನಾವಣೆ ಎದುರಾಗಲಿದ್ದು, ಎಎಪಿ ಸಿದ್ಧತೆ ಆರಂಭಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಎಎಪಿ ಬಹಳ ಹಿಂದೆಯೇ ಘೋಷಿಸಿತ್ತು. ಇದರ ಮೊದಲ ಹಂತವಾಗಿ ಪಕ್ಷ 'ಬೊಂಬಾಟ್ ಬೆಂಗಳೂರು' ಎಂಬ ಘೋಷಣೆಯೊಂದಿಗೆ ಮನೆ-ಮನೆಗಳ ಸಮೀಕ್ಷೆಗೆ ಚಾಲನೆ ನೀಡಿದೆ. [ಬೊಂಬಾಟ್ ಬೆಂಗಳೂರಿಗಾಗಿ ಎಎಪಿಯಿಂದ ವೆಬ್ ಸೈಟ್]

Aam Admi Party

ಸಮೀಕ್ಷೆ ಹೇಗೆ : ಆಮ್ ಆದ್ಮಿ ಪಕ್ಷ 8 ಪ್ರಶ್ನೆಗಳೊಂದಿಗೆ ಮನೆ-ಮನೆ ಸಮೀಕ್ಷೆಯನ್ನು ಆರಂಭಿಸಿದೆ. ಮುಂಬರುವ ಬಿಬಿಎಂಪಿ ಚುನಾವಣೆ ಬಗ್ಗೆ ನಿಮಗೆ ಅರಿವಿದೆಯೇ? ಎಂಬುದರಿಂದ ಹಿಡಿದು ನಿಮಗೆ ಆಮ್ ಆದ್ಮಿ ಪಕ್ಷದ ಬೆಂಗಳೂರು ಪಾಲಿಕೆ ಬೇಕೆ? ಎಂಬುವ ತನಕ ಹಲವು ಪ್ರಶ್ನೆಗಳಿವೆ. [ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ : ಸುಪ್ರೀಂ]

5 ವರ್ಷಗಳಲ್ಲಿ ನಿಮ್ಮ ಪಾಲಿಕೆ ಸದಸ್ಯರನ್ನು ನೀವು ಭೇಟಿಯಾಗಿದ್ದೀರಾ?, ಬಿಬಿಎಂಪಿಯಲ್ಲಿ ಲಂಚವಿಲ್ಲದೇ ಏನಾದರೂ ಕೆಲಸವಾಗುತ್ತದೆ ಎಂದು ನಿಮಗೆ ಅನ್ನಿಸುತ್ತಿದೆಯೇ?, ದೆಹಲಿ ಚುನಾವಣೆಯಲ್ಲಿ ಎಎಪಿ ಹಣಬಲವಿಲ್ಲದೇ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಸೋಲಿಸಿರುವುದು ನಿಮಗೆ ಅರಿವಿದೆಯೇ? ಎಂಬ ಪ್ರಶ್ನೆಗಳನ್ನು ಜನರಿಗೆ ಕೇಳಲಾಗುತ್ತಿದೆ.

ಹೌದು ಅಥವ ಇಲ್ಲ ಎಂದು ಜನರು ಸಮೀಕ್ಷೆ ವೇಳೆ ಉತ್ತರ ನೀಡಬಹುದಾಗಿದೆ. ನಿಮ್ಮ ವಿಧಾನಸಭಾ ಕ್ಷೇತ್ರ, ವಾರ್ಡ್, ಮತದಾನದ ಬೂತ್ ಮಾಹಿತಿಯನ್ನು ಸಮೀಕ್ಷೆ ವೇಳೆ ಸಂಗ್ರಹಣೆ ಮಾಡಲಾಗುತ್ತದೆ. ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂ, ಇ-ಮೇಲ್ ವಿಳಾಸವನ್ನು ನೀವು ನೀಡಬಹುದಾಗಿದೆ.

aap sets eyes on BBMP polls

ಬಿಬಿಎಂಪಿ ಚುನಾವಣೆ ಎಂದು? : ಅಂದಹಾಗೆ ಪಾಲಿಕೆಯ ಆಡಳಿತಾವಧಿ ಏಪ್ರಿಲ್‌ನಲ್ಲಿ ಅಂತ್ಯಗೊಂಡಿದ್ದು, ಸರ್ಕಾರ ಪಾಲಿಕೆಯನ್ನು ವಿಸರ್ಜಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಹಲವಾರು ದಿನಗಳ ಕಾನೂನು ಹೋರಾಟದ ಬಳಿಕ ಮೂರು ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ ಎಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮೇ 5ರಂದು ಆದೇಶ ನೀಡಿದೆ.

English summary
After the victory in the Delhi assembly elections Aam Aadmi Party now sets eyes on Bruhat Bangalore Mahanagara Palike (BBMP). Party volunteers are checking the pulse of Bengaluru for the upcoming elections through a door-to-door survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X