ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರೇಕಿಂಗ್ : ಬಿಬಿಎಂಪಿ ಚುನಾವಣೆಗೆ ದಿನಾಂಕ ಪ್ರಕಟ

|
Google Oneindia Kannada News

ಬೆಂಗಳೂರು, ಜೂ.25 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣಾ ದಿನಾಂಕ ಘೋಷಣೆಯಾಗಿದೆ. ನಗರದ 198 ವಾರ್ಡ್‌ಗಳಲ್ಲಿ ಒಂದೇ ಹಂತದಲ್ಲಿ ಜುಲೈ 28ರಂದು ಮತದಾನ ನಡೆಯಲಿದೆ.

ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಅವರು ಬಿಬಿಎಂಪಿ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದರು. ಅವಿಭಜಿತ ಬಿಬಿಎಂಪಿಯ 198 ವಾರ್ಡ್‌ಗಳಿಗೆ ಒಂದೇ ಹಂತದಲ್ಲಿ ಜುಲೈ 28ರ ಮಂಗಳವಾರ ಮತದಾನ ನಡೆಯಲಿದ್ದು, ಜು.31ರ ಶುಕ್ರವಾರ ಫಲಿತಾಂಶ ಪ್ರಕಟಗೊಳ್ಳಲಿದೆ. [ಬಿಬಿಎಂಪಿಗೆ ಚುನಾವಣೆ ನಡೆಸುವುದು ಅನಿವಾರ್ಯ]

election

ಜೂನ್ 25ರ ಗುರುವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಜುಲೈ 8ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ಜುಲೈ 15ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಜುಲೈ 20ರಂದು ನಾಮಮತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. [ಬಿಬಿಎಂಪಿ ವಿಭಜನೆ ಹೇಗೆ, ಇಲ್ಲಿದೆ ಮಾಹಿತಿ]

ಚುನಾವಣೆಗೆ 11,635 ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ ಮಾಡಲಾಗುತ್ತದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ಗರಿಷ್ಠ 5 ಲಕ್ಷ ರೂ.ಗಳನ್ನು ವೆಚ್ಚ ಮಾಡಬಹುದಾಗಿದೆ. ಚುನಾವಣಾ ವೆಚ್ಚ ಪರಿಶೀಲನೆಗೆ 88 ನೋಡೆಲ್ ಅಧಿಕಾರಿಗಳು, ಐವರು ವಿಶೇಷ ಚುನಾವಣಾ ವೀಕ್ಷಕರು, ಐವರು ವಿಶೇಷ ಚುನಾವಣಾ ವೀಕ್ಷಕರನ್ನು ನೇಮಕ ಮಾಡಲಾಗಿದೆ.

ಮತದಾನಕ್ಕಾಗಿ 6,730 ಮತಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. 71,22,165 ಜನರು ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಬಹುದಾಗಿದೆ. ಇವರಲ್ಲಿ ಪುರುಷ ಮತದಾರರು 37,38,808, ಮಹಿಳಾ ಮತದಾರರು 33,82,231, ಇತರೆ ಮತದಾರರು 1,126. ಜುಲೈ 15ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬಹುದಾಗಿದೆ. [ಹೆಸರು ಸೇರಿಸುವುದು ಹೇಗೆ?]

ಬಿಬಿಎಂಪಿಯನ್ನು ವಿಭಜನೆ ಮಾಡಿ ಚುನಾವಣೆ ನಡೆಸಲು ಪ್ರಯತ್ನ ನಡೆಸಿದ ಕಾಂಗ್ರೆಸ್ ಸರ್ಕಾರ ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ನಡೆಸಿದ ಕಾನೂನು ಹೋರಾಟವೂ ಫಲ ನೀಡಿರಲಿಲ್ಲ. ಆಗಸ್ಟ್ 5ರೊಳಗೆ ಬಿಬಿಎಂಪಿ ಚುನಾವಣೆಯನ್ನು ನಡೆಸಿ ಎಂದು ಸುಪ್ರೀಂಕೋರ್ಟ್ ಸರ್ಕಾರದಕ್ಕೆ ಆದೇಶ ನೀಡಿತ್ತು.

ಕರ್ನಾಟಕದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಳೆದ ಬಾರಿ ಪಾಲಿಕೆಯಲ್ಲಿ ಅಧಿಕಾರ ಪಡೆದಿದ್ದ ಬಿಜೆಪಿ ಈ ಬಾರಿಯೂ ಮೇಯರ್ ಪಟ್ಟಕ್ಕೇರುವ ನಿರೀಕ್ಷೆ ಹೊಂದಿದೆ. ಬಿಬಿಎಂಪಿ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಯಾವ ಚುನಾವಣೆಗಳಲ್ಲಿಯೂ ಪಕ್ಷೇತರರನ್ನು ಕಡೆಗಣಿಸುವಂತಿಲ್ಲ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿ ಅಧಿಕಾರ ಪಡೆದಿರುವ ಆಮ್ ಆದ್ಮಿ ಪಕ್ಷ ಬಿಬಿಎಂಪಿ ಚುನಾವಣಾ ತಯಾರಿ ಆರಂಭಿಸಿದ್ದು, ಈ ಬಾರಿಯ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. [ಬಿಬಿಎಂಪಿ ಚುನಾವಣೆಗೆ ತಯಾರಿ ಆರಂಭಿಸಿದ ಎಎಪಿ]

ಚುನಾವಣಾ ವೇಳಾಪಟ್ಟಿ

* 198 ವಾರ್ಡ್
* ಜುಲೈ 8 - ಅಧಿಸೂಚನೆ ಪ್ರಕಟ
* ಜುಲೈ 15 - ನಾಮಪತ್ರ ಸಲ್ಲಿಸಲು ಕೊನೆಯ ದಿನ
* ಜುಲೈ 20 - ನಾಮಪತ್ರ ಹಿಂಪಡೆಯಲು ಕೊನೆಯ ದಿನ
* ಜುಲೈ 28, ಮಂಗಳವಾರ - ಮತದಾನ
* ಜುಲೈ 30 - ಮರುಮತದಾನ (ಅಗತ್ಯವಿದ್ದರೆ)
* ಜುಲೈ 31, ಶುಕ್ರವಾರ - ಮತ ಎಣಿಕೆ
* ಒಟ್ಟು ಮತದಾರರು - 71,22,165

English summary
Karnataka News : Elections to BBMP, the Bengaluru Civic Body announced. State Election Commissioner PN Srinivasachari released the election calendar on 25th June, 2015. Polling Tuesday 28 July, Vote Counting Friday 31 July, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X