Breaking; ಬೆಂಗಳೂರು ನಗರದಲ್ಲಿ ಮತ್ತೆ ಅಬ್ಬರಿಸಿದ ಮಳೆ

ಬೆಂಗಳೂರು, ಮೇ 07; ಉದ್ಯಾನ ನಗರಿ ಬೆಂಗಳೂರಿನಲ್ಲಿ ಮತ್ತೆ ಮಳೆಯಾಗುತ್ತಿದೆ. ಮಂಗಳವಾರದಿಂದ ನಗರದಲ್ಲಿ ಪ್ರತಿದಿನ ಸಂಜೆ ಗುಡುಗು ಸಹಿತ ಮಳೆ ನಗರದಲ್ಲಿ ಸುರಿಯುತ್ತಿದೆ.

ಶನಿವಾರ ಸಂಜೆ 6.30ರ ಸುಮಾರಿಗೆ ಬೆಂಗಳೂರು ನಗರದಲ್ಲಿ ಗುಡುಗು ಸಹಿತ ಮಳೆ ಆರಂಭವಾಗಿದೆ. ಮಳೆ ನೀರು ರಸ್ತೆಯಲ್ಲಿ ತುಂಬಿದ್ದು, ವೀಕೆಂಡ್‌ನಲ್ಲಿ ಹೊರ ಬಂದಿದ್ದ ಜನರು ಮಳೆಯಲ್ಲಿ ಸಿಲುಕಿದ್ದಾರೆ.

ಜಯನಗರ, ಬಸವನಗುಡಿ, ಮೆಜೆಸ್ಟಿಕ್, ಹನುಮಂತನಗರ, ವಿದ್ಯಾಪೀಠ ಸರ್ಕಲ್, ಮೈಸೂರು ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿವೆ.

Rain Lashes Bengaluru City For 5th Consecutive Day

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ನಗರದಲ್ಲಿ ಮಳೆಯಾಗುತ್ತಿದೆ. ನಗರದಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ, ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ 5 ದಿನಗಳಿಂದ ಬೆಂಗಳೂರು ನಗರದಲ್ಲಿ ಸಂಜೆ ಮಳೆ ಅರ್ಭಟಿಸುತ್ತಿದೆ. ಮಳೆಯ ಜೊತೆಗೆ ಗಾಳಿ, ಗುಡುಗಿನ ಅಬ್ಬರ ಸಹ ಹೆಚ್ಚಾಗಿದೆ. ಗಾಳಿಯ ಕಾರಣದಿಂದಾಗಿ ಹಲವಾರು ಬಡಾವಣೆಗಳಲ್ಲಿ ಮರಗಳು ಧರೆಗುರುಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+