ಬೆಂಗಳೂರಿಗೆ ಗುಡ್ ಮಾರ್ನಿಂಗ್ ಹೇಳುತ್ತಿರುವ ಮಳೆ
ಬೆಂಗಳೂರು, ಮಾ.3 : ಮಂಗಳವಾರ ಬೆಳ್ಳಂಬೆಳಗ್ಗೆ ಬೆಂಗಳೂರಿಗರಿಗೆ ಮಳೆ ಗುಡ್ ಮಾರ್ನಿಂಗ್ ಹೇಳಿದೆ. ನಗರದ ಹಲವು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದು, ಮೋಡ ಕವಿದ ವಾತಾವರಣವೂ ಇದೆ. ಮುಂದಿನ ಮೂರು ದಿನ ಬೆಂಗಳೂರು ನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಂಗಳವಾರ ಬೆಳಗ್ಗೆ ರಿಚ್ ಮಂಡ್ ಸರ್ಕಲ್, ಶಾಂತಿನಗರ, ಜ್ಞಾನ ಭಾರತಿ ಕ್ಯಾಂಪಸ್, ಕೆಂಗೇರಿ, ಮಲ್ಲೇಶ್ವರಂ ಮುಂತಾದ ಕಡೆ ಮಳೆ ಸುರಿಯುತ್ತಿದೆ. ಬನಶಂಕರಿ 3ನೇ ಹಂತ, ಜಯನಗರದಲ್ಲಿಯೂ ಮಳೆಯಾಗುತ್ತಿದೆ. ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ದಿನವಿಡೀ ಮಳೆ ಬರುವ ಸಾಧ್ಯತೆ ಇದೆ. [ಕರ್ನಾಟಕದಲ್ಲಿ ಅಕಾಲಿಕ ಮಳೆ, ಯಾಕೆ ಹೀಗೆ?]

ಬೆಳ್ಳಂಬೆಳಗ್ಗೆ ಕಚೇರಿಗೆ ಹೋಗುವವರಿಗೆ ಮಳೆ ತೊಂದರೆ ಉಂಟುಮಾಡಿ ಜರ್ಕಿನ್, ಛತ್ರಿ ಹುಡುಕುವಂತೆ ಮಾಡಿದೆ. ಮೋಡ ಕವಿದ ವಾತಾವರಣವಿರುವುದರಿಂದ ದಿನಪೂರ್ತಿ ಮಳೆಯಾಗುವ ಸಾಧ್ಯತೆ ಇದ್ದು, ಛತ್ರಿ ಬಿಟ್ಟು ಮನೆಯಿಂದ ಬಂದರೆ ಸಂಜೆಯ ವೇಳೆಗೆ ಪುನಃ ಮಳೆಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಖಂಡಿತ.

ಇನ್ನೂ ಮೂರು ದಿನ ಮಳೆ : ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರೆಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿಯೂ ಮಳೆಯಾಗಲಿದೆ ಎಂದು ಮನ್ಸೂಚನೆ ನೀಡಿದ್ದಾರೆ.

ಮಾರ್ಚ್‌ನಲ್ಲಿ ಮಳೆ ಏಕೆ : ಕನ್ಯಾಕುಮಾರಿಯಿಂದ ಮೇಲ್ಮೈ ಸುಳಿಗಾಳಿ ದಕ್ಷಿಣ ಒಳನಾಡಿನತ್ತ ಪ್ರವೇಶಿಸುತ್ತಿದ್ದು ಇದರಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ ಎಂದು ಬಿ.ಪುಟ್ಟಣ್ಣ ಅವರು ಮಾಹಿತಿ ನೀಡಿದ್ದಾರೆ. ಮುಂದಿನ ಮೂರು ದಿನ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಮಳೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಅಂದಹಾಗೆ ಬೆಂಗಳೂರಿನಲ್ಲಿ ಉಷ್ಣಾಂಶ
Conditions for Bangalore, IN at 6:31 am IST: Current Conditions:Fog, 24 CForecast:Tue - Mostly Sunny. High: 33 Low: 20Wed - Mostly...
— Bangalore weather (@BloreFeelsLike) March 3, 2015 











Click it and Unblock the Notifications