ಮಳೆಯಿಂದ ಬಿಬಿಎಂಪಿಗೆ ಆದಾಯ ಅದು ಹೇಗೆ?
ಬೆಂಗಳೂರು, ಮೇ 1: ನಗರದಲ್ಲಿ ಮಳೆ ಬಂದರೆ ಒಂದೆಡೆ ಖುಷಿ, ಇನ್ನೊಂದೆಡೆ ದುಃಖ ಎರಡೂ ಒಮ್ಮೆಲೆ ಆಗುತ್ತದೆ, ಒಂದೆಡೆ ಭೂಮಿಯ ಕಾವನ್ನು ತಂಪಾಗಿಸಿದರೆ ಇನ್ನೊಂದೆಡೆ ಅಲ್ಲಿ ಮರಗಳನ್ನು ಧರೆಗುರುಳಿಸಿ ಜನರ ಸ್ಥಿತಿಯನ್ನು ಚಿಂತಾಜನಕ ಮಾಡಿಬಿಡುತ್ತದೆ.
ಇಷ್ಟೆಲ್ಲಾ ಆದರೂ ಮಳೆಯಿಂದ ನಮಗೆ ಆದಾಯ ಇದೆ ಎಂದು ಬಿಬಿಎಂಪಿ ಹೇಳಿಕೊಳ್ಳುತ್ತಿದೆ. ಇದೇನಪ್ಪಾ ಮಳೆಯಿಂದಾಗುವ ಅನಾಹುತಗಳಿಗೆ ಬಿಬಿಎಂಪಿಯಿಂದ ನೀಡುವ ಪರಿಹಾರದಲ್ಲೇನಾದರೂ ಅಕ್ರಮ ನಡೆದಿದೆಯಾ ಎಂದರೆ ಅದು ಸುಳ್ಳು.
ಮಳೆ ಬಂದರೆ ಬಿಬಿಎಂಪಿಗೆ ಹಣ ಬರುವುದು, ಮರಗಳು ಬೀಳುವುದರಿಂದ, 2017-18ನೇ ಸಾಲಿನಲ್ಲಿ ಬಿದ್ದ ಮರಗಳಿಂದಲೇ ಬಿಬಿಎಂಪಿಗೆ 24 ಲಕ್ಷ ರೂ. ಸಂಪಾದನೆ ಮಾಡಿದೆ.

ಕಳೆದ ವರ್ಷ ನಗರದಲ್ಲಿ ಭಾರಿ ಮಳೆಯಾಗಿ, ಹಲವು ಪ್ರದೇಶಗಳು ಜಲಾವೃತವಾಗಿದ್ದವು. ಜನರಿಗೆ ನೆಮ್ಮದಿಯೇ ಇಲ್ಲದಂತಾಗಿತ್ತು. ಅಲ್ಲದೆ, ಮಳೆಯ ಪರಿಣಾಮ ಮೇ ತಿಂಗಳಿಂದ ಅಕ್ಟೋಬರ್ ವರೆಗೆ 644 ಮರಗಳು ಹಾಗೂ 1 ಸಾವಿರಕ್ಕೂ ಹೆಚ್ಚು ಮರದ ಕಡೆ ರೆಂಬೆಗಳು ಮುರಿದು ಬಿದ್ದಿದ್ದವು. ಈ ವರ್ಷ ಸುರಿದ ಮಳೆಯಿಂದಾಗಿ 25 ಕ್ಕೂ ಹೆಚ್ಚು ಮರ, 200 ಕ್ಕೂ ಹೆಚ್ಚು ರೆಂಬೆಗಳು ಮುರಿದು ಬಿದ್ದಿವೆ.
60 ಟನ್ ದಿಮ್ಮಿ: ಮಳೆಯಿಂದಾಗಿ ಬಿದ್ದಿದ್ದ ಮರಗಳಿಂದಾಗಿ 1,559 ಮೆಟ್ರಿಕ್ ಟನ್ ಸೌದೆ, 60 ಟನ್ ದಿಮ್ಮಿ ಲಭ್ಯವಾಗಿದ್ದವು. ಅವುಗಳನ್ನೆಲ್ಲ ಮಾರಾಟ ಮಾಡಿರುವ ಬಿಬಿಎಂಪಿ, ಅದರಿಂದ 24,72,736 ರೂ. ಆದಾಯ ಗಳಿಸಿದೆ. ಅದರ ಜತೆಗೆ ಮರಗಳ ಮಾರಾಟದಲ್ಲಿನ ಅಕ್ರಮದ ಬಗೆಗಿನ ಆರೋಪ ತಪ್ಪಿಸಲು ಸೌದೆ, ನಾಆ ಮಾರಾಟದ ಬಗ್ಗೆ ಸಂಪೂರ್ಣ ದಾಖಲೆಯನ್ನು ಸಂಗ್ರಹಿಸಿದೆ.












Click it and Unblock the Notifications