ಬಾಂಗ್ಲಾಕ್ಕೆ ಮಿನಿ ಟ್ರಕ್ ರವಾನೆ; ರೈಲ್ವೆ ಮತ್ತೊಂದು ಸಾಧನೆ
ಬೆಂಗಳೂರು, ನವೆಂಬರ್ 24: ಭಾರತೀಯ ರೈಲ್ವೆ ವಾಹನಗಳ ಸಾಗಾಟದಲ್ಲಿ ಮತ್ತೊಂದು ಸಾಧನೆ ಮಾಡಿದೆ. ತಮಿಳುನಾಡಿನ ಹೊಸೂರಿನಿಂದ ಬಾಂಗ್ಲಾದೇಶಕ್ಕೆ ಮಿನಿಟ್ರಕ್‌ಗಳನ್ನು ಸಾಗಣೆ ಮಾಡಲಾಗಿದೆ.
ಕೇಂದ್ರ ರೈಲ್ವೆ ಸಚಿವ ಪಿಯೂಷ್ ಘೋಯೆಲ್ ಈ ಕುರಿತು ಟ್ವೀಟ್ ಮಾಡಿದ್ದಾರೆ. "ರಫ್ತು ಹೆಚ್ಚಿಸಲು ಭಾರತೀಯ ರೈಲ್ವೆ ಪ್ರೋತ್ಸಾಹ ನೀಡುತ್ತಿದೆ" ಎಂದು ಹೇಳಿದ್ದಾರೆ. ಮಿನಿಟ್ರಕ್ ಲೋಡ್ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಹೊಸೂರು ರೈಲ್ವೆ ನಿಲ್ದಾಣದಿಂದ ಮಿನಿ ಟ್ರಕ್‌ಗಳನ್ನು ಹೊತ್ತ ರೈಲು ಬಾಂಗ್ಲಾದೇಶಕ್ಕೆ ಸಂಚಾರ ನಡೆಸಿವೆ. ಮಿನಿ ಟ್ರಕ್‌ಗಳ ಸಾಗಣೆಗಾಗಿಯೇ ವಿಶೇಷವಾಗಿ ಬೋಗಿಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ವಾಹನ ಸಾಗಾಟದಲ್ಲಿ ರೈಲ್ವೆ ಹೊಸ ಸಾಧನೆ ಮಾಡಿದೆ.

ಲಾಕ್ ಡೌನ್ ಅವಧಿಯಲ್ಲಿ ಬೆಂಗಳೂರಿನಿಂದ ಟ್ರಾಕ್ಟರ್, ಕಾರುಗಳನ್ನು ರೈಲ್ವೆ ಇಲಾಖೆ ಸಾಗಣೆ ಮಾಡಿತ್ತು. ನೈಋತ್ಯ ರೈಲ್ವೆ ಮೈಸೂರು ವಿಭಾಗ ಬೈಕ್‌ಗಳನ್ನು ಸಾಗಣೆ ಮಾಡುವ ಮೂಲಕ ಆದಾಯವನ್ನುಗಳಿಸುತ್ತಿದೆ. ಬೆಂಗಳೂರಿನಿಂದ ದೇಶದ ವಿವಿಧ ಪ್ರದೇಶಗಳಿಗೆ ಕಾರುಗಳನ್ನು ಸಾಗಣೆ ಮಾಡಲಾಗಿತ್ತು.
ವಾಹನಗಳ ಸಾಗಾಟದಲ್ಲಿ ರೈಲ್ವೆ ಹೊಸ ಹೊಸ ಪ್ರಯೋಗವನ್ನು ಮಾಡುತ್ತಿದೆ. ಸೋಮವಾರ ಮಹಾರಾಷ್ಟ್ರದಿಂದ 83 ಪಿಕಪ್ ವಾಹನಗಳನ್ನು ಬಾಂಗ್ಲಾದೇಶಕ್ಕೆ ಕಳಿಸಲಾಗಿತ್ತು. ಇಂದು ಮಿನಿಟ್ರಕ್ ಸಾಗಣೆ ಮಾಡಲಾಗಿದೆ.
ನವೆಂಬರ್ 22ರಂದು ಮೈಸೂರಿನ ಕಡಕೋಳ ರೈಲು ನಿಲ್ದಾಣದಿಂದ 1100 ಟಿವಿಎಸ್ ಬೈಕ್‌ಗಳನ್ನು ಪಶ್ಚಿಮ ಬಂಗಾಳಕ್ಕೆ ಸಾಗಣೆ ಮಾಡಲಾಗಿತ್ತು. ಮೈಸೂರಿನಿಂದ ಮೂರನೇ ಬಾರಿಗೆ ಬೈಕ್‌ಗಳನ್ನು ರೈಲಿನಲ್ಲಿ ಸಾಗಾಟ ಮಾಡಲಾಗಿದೆ.
ಸಚಿವರ ಟ್ವೀಟ್
Indian Railways is transporting mini trucks from Hosur in Tamil Nadu to Bangladesh 🇮🇳🇧🇩
— Piyush Goyal Office (@PiyushGoyalOffc) November 24, 2020
Railways is at the forefront to promote exports#MoveItLikeRailways pic.twitter.com/yWA6FNMk5P












Click it and Unblock the Notifications