ಬೆಂಗಳೂರು ಸಂಪರ್ಕಿಸುವ ಮೆಮು ರೈಲುಗಳು ಮತ್ತೆ ಆರಂಭ

ಬೆಂಗಳೂರು, ಜುಲೈ 15; ಬೆಂಗಳೂರು ನಗರ ಸಂಪರ್ಕಿಸುವ ಮೆಮು ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೆ ಗುರುವಾರದಿಂದ ಪುನಃ ಆರಂಭಿಸಿದೆ. ಜುಲೈ 17 ಮತ್ತು 18ರಿಂದಲೂ ಕೆಲವು ರೈಲುಗಳು ಸಂಚಾರ ನಡೆಸಲಿವೆ.

ಭಾರತೀಯ ರೈಲ್ವೆ ಗುರುವಾರದಿಂದ 5 ಮೆಮು ರೈಲುಗಳ ಸಂಚಾರವನ್ನು ಆರಂಭಿಸಿದೆ. ಈ ರೈಲುಗಳು ಬೆಂಗಳೂರು ನಗರವನ್ನು ಮಾರಿಕುಪ್ಪಂ, ಹೊಸೂರಿನಿಂದ ಸಂಪರ್ಕಿಸಲಿವೆ. ಕೆಲ ಹೊಸ ರೈಲುಗಳನ್ನು ಸಹ ಪರಿಚಯಿಸಲಾಗುತ್ತಿದೆ.

ಬೈಯಪ್ಪನಹಳ್ಳಿ-ಹೊಸೂರು (06259/ 06260), ಕೆಎಸ್‌ಆರ್ ಬೆಂಗಳೂರು-ಹೊಸೂರು (06261/ 06262), ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ (06263/ 06264) ರೈಲುಗಳು ಪ್ರತಿದಿನದ ಸಂಚಾರವನ್ನು ಪುನಃ ಆರಂಭಿಸಿವೆ.

Railways Restart Five Sets Of MEMU Trains To Connect Bengaluru

ಮಾರಿಕುಪ್ಪಂ-ಬಂಗಾರಪೇಟೆ ನಡುವೆ (07383/ 07384) ರೈಲು ಹೊಸದಾಗಿ ಆರಂಭಿಸಲಾಗುತ್ತಿದೆ. ಪ್ರತಿದಿನ ಈ ರೈಲು ಸಂಚಾರ ನಡೆಸಲಿದೆ ಎಂದು ರೈಲ್ವೆ ಹೇಳಿದೆ.

ಬಂಗಾರಪೇಟೆ-ಕುಪ್ಪಂ (06289/ 06290) ಮತ್ತು ಕುಪ್ಪಂ-ಕೆಎಸ್‌ಆರ್ ಬೆಂಗಳೂರು (06292) ಮಾರ್ಗದಲ್ಲಿ ವಾರಕ್ಕೆ ಒಮ್ಮೆ ಮೆಮು ರೈಲುಗಳು ಸಂಚಾರ ನಡೆಸಲಿವೆ.

ಬಾಣಸವಾಡಿ-ಬಂಗಾರಪೇಟೆ (06298/ 06297) ರೈಲು ಸಹ ವಾರಕ್ಕೊಮ್ಮೆ ಸಂಚಾರ ನಡೆಸಲಿದೆ. ಈ ರೈಲು ಬಂಗಾರಪೇಟೆಯಿಂದ ಜುಲೈ 17ರಂದು ಮತ್ತು ಬಾಣಸವಾಡಿಯಿಂದ ಜುಲೈ 18ರಿಂದ ಸಂಚಾರ ನಡೆಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+