Get Updates
Get notified of breaking news, exclusive insights, and must-see stories!

Rahul Dravid: ನಾನು ಕನ್ನಡಿಗ.. ನನಗೆ ಕನ್ನಡ ಹಾಡೇ ಬೇಕು: ಕರ್ನಾಟಕ ಜನರ ಮನ ಗೆದ್ದ ರಾಹುಲ್‌ ದ್ರಾವಿಡ್‌ ವಿಡಿಯೋ ಭಾರೀ ವೈರಲ್‌

Rahul Dravid Kannada Song: ಬೆಂಗಳೂರು ಚಿನ್ನಸ್ವಾಮಿಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸ್ಟೇಡಿಯಂನ ಮೂರು ಪ್ರೇಕ್ಷಕ ಸ್ಟ್ಯಾಂಡ್‌ಗಳಿಗೆ ರಾಹುಲ್‌ ದ್ರಾವಿಡ್​, ಶಾಂತ ರಂಗಸ್ವಾಮಿ, ಅನಿಲ್‌ ಕುಂಬ್ಳೆ ಅವರ ಹೆಸರನ್ನು ಇಡಲಾಗಿತ್ತು. ಇದೇ ವೇಳೆ ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ಅನೂಪ್ ಶಂಕರ್ ನಿಮಗೆ ಯಾವ ಹಾಡು ಬೇಕು ಎಂದು ಕೇಳಿದ ಪ್ರಶ್ನೆಗೆ ದ್ರಾವಿಡ್‌ ಕೊಟ್ಟ ಉತ್ತರವು ಕರ್ನಾಟಕದ ಜನರ ಮನ ಗೆದ್ದಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಇತ್ತೀಚೆಗಷ್ಟೇ ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕ ಸ್ಟ್ಯಾಂಡ್‌ಗಳಿಗೆ ಕರ್ನಾಟಕದ ಕ್ರಿಕೆಟ್‌ ದಿಗ್ಗಜರಾದ ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ ಅವರ ಹೆಸರುಗಳನ್ನು ನಾಮಕರಣ ಮಾಡಲಾಗಿತ್ತು. ಇದೇ ವೇಳೆ ಸಂಗೀತ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿದ್ದು, ಗಾಯಕ ಅನೂಪ್ ಶಂಕರ್ ನಿಮಗೆ ಕನ್ನಡ, ಹಿಂದಿ, ತಮಿಳು, ತೆಲುಗು ನಾಲ್ಕು ಭಾಷೆಗಳಲ್ಲಿ ಯಾವ ಹಾಡು ಬೇಕು ಹೇಳಿ ಸಾರ್ ನಾನು ಹಾಡುತ್ತೇನೆ ಎಂದು ಕೇಳಿದ್ದಾರೆ. ಆಗ ರಾಹುಲ್‌ ದ್ರಾವಿಟ್‌ ನನಗೆ ಕನ್ನಡದ ಹಾಡೇ ಬೇಕು ಅಂತಾ ಹೇಳಿದ್ದಾರೆ.

Rahul Dravid Encourages Singer to Perform Kannada Song at Bengaluru s M Chinnaswamy Stadium video

ಖುಷಿಯಲ್ಲಿ ತೇಲಾಡಿದ ದ್ರಾವಿಡ್‌, ಅನಿಲ್‌ ಕುಂಬ್ಳೆ

ರಾಹುಲ್‌ ದ್ರಾವಿಡ್‌ ಅವರ ಆಸೆಯಂತೆ ಗಾಯಕ ಅನೂಪ್ ಶಂಕರ್ ಅವರು ನಟ ಶಂಕರ್ ನಾಗ್ ಅವರ ಚಲನಚಿತ್ರದ ಪ್ರಸಿದ್ಧ ಹಾಡೊಂದನ್ನು ಹಾಡಿದ್ದಾರೆ. ರಾಹುಲ್‌ ದ್ರಾವಿಡ್‌ ಹಾಗೂ ಅನಿಲ್‌ ಕುಂಬ್ಳೆ ಆ ಹಾಡಿಗೆ ತಲೆ ಹಾಕುತ್ತಾ.. ಚಪ್ಪಾಳೆ ತಟ್ಟುತ್ತಾ ಖುಷಿಯಲ್ಲಿ ತೇಲಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಹಾಗಾದ್ರೆ ದ್ರಾವಿಡ್‌ ಭಯಸಿದ್ದು ಯಾವ ಹಾಡನ್ನು ಎನ್ನುವ ಪ್ರಶ್ನೆ ಬಹುತೇಕರಲ್ಲಿರುತ್ತದೆ. ಅದೆಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ.

ಜೊತೆಯಲಿ ಜೊತೆ ಜೊತೆಯಲಿ.. ಭಾರೀ ವೈರಲ್‌

ಗಾಯಕ ಅನೂಪ್ ಶಂಕರ್ ಅವರು ನಟ ಶಂಕರ್ ನಾಗ್ ಅಭಿನಯದ 'ಗೀತಾ' ಚಿತ್ರದ 'ಜೊತೆಯಲಿ ಜೊತೆ ಜೊತೆಯಲಿ' ಹಾಡನ್ನು ಹಾಡಿದ್ದಾರೆ. ಈ ಹಾಡನ್ನು ಕೇಳಿದ ದ್ರಾವಿಡ್ ಹಾಗೂ ಕುಂಬ್ಳೆ ತುಂಬಾ ಸಂತೋಷಗೊಂಡು ತುಂಬಾ ಚೆನ್ನಾಗಿ ಹಾಡಿದ್ದೀರಿ ಎಂದು ಗಾಯಕರಿಗೆ ಹೇಳಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಇದೇ ವಿಡಿಯೋವನ್ನು ಅನೂಪ್ ಶಂಕರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ತುಂಬಾ ಜನ ವಾಟ್ಸಾಪ್ ಸ್ಟೇಟಸ್‌ ಇಟ್ಟುಕೊಂಡಿದ್ದು, ಪದೇ ಪದೇ ಇದೇ ವಿಡಿಯೋವನ್ನು ನೋಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ವಿಡಿಯೋ ಸದ್ದು ಮಾಡುತ್ತಿದೆ.

ಕನ್ನಡದ ಬಗ್ಗೆ ಗಾಯಕ ಹೇಳಿದ್ದೇನು?

ಈ ಬಗ್ಗೆ ಸಾಮಾಜಿಕ ಜಾಲಯಾಣದಲ್ಲಿ ಗಾಯಕ ಅನೂಪ್ ಶಂಕರ್ ಅವರು, "ಚಿನ್ನಸ್ವಾಮಿ ಕ್ರೀಡಾಂಗಣದ ಸ್ವರ್ಣ ಮಹೋತ್ಸವ ಸಂದರ್ಭದಲ್ಲಿ ನಾನು ಹಾಡಿದ 'ಜೋತೆಯಲಿ' ಗೀತೆಗೆ ದೊರೆತ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಹೃದಯಪೂರ್ವಕ ಕೃತಜ್ಞನಾಗಿದ್ದೇನೆ. ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ಶಾಂತಾ ರಂಗಸ್ವಾಮಿ ಹಾಗೂ ಸುಜಿತ್ ಸೋಮಸುಂದರ್ ಅವರ ಸಮ್ಮುಖದಲ್ಲಿ ಹಾಡುವುದು ನನಗೆ ಪದಗಳಲ್ಲಿ ವಿವರಿಸಲಾಗದ ಗೌರವದ ಕ್ಷಣವಾಗಿತ್ತು," ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ, "ಈ ಅಮರ ಗೀತೆಯನ್ನು ಕರ್ನಾಟಕಕ್ಕೆ ಉಡುಗೊರೆಯಾಗಿ ನೀಡಿದ ದಿಗ್ಗಜರಾದ ಇಳಯರಾಜಾ, ಉದಯ ಶಂಕರ್, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ ಮತ್ತು ಶಂಕರ್ ನಾಗ್ ಅವರ ಅಪ್ರತಿಮ ಕಲೆ ಸದಾ ನಮ್ಮ ಹೃದಯಗಳಲ್ಲಿ ಜೀವಂತವಾಗಿರಲಿದೆ. ಕರ್ನಾಟಕದ ಮಹಿಮೆ ಮತ್ತು ಕನ್ನಡದ ಕೀರ್ತಿ ಸದಾಕಾಲ ಬೆಳಗಲಿ," ಎಂದು ಬರೆದುಕೊಂಡು ರಾಜ್ಯದ ಜನರ ಗಮನ ಸೆಳೆದಿದ್ದಾರೆ. ಹೀಗೆ ಕೆಲವೊಂದು ಹಾಡುಗಳು ಹಳೆಯದ್ದಾಗಿದ್ದರೂ ಸಹ ಅವುಗಳಲ್ಲಿನ ಅರ್ಥ, ಮೌಲ್ಯ, ಪ್ರೀತಿ ಮಾತ್ರ ಜನರ ಮನಸಿನಲ್ಲಿ ಹಾಗೆಯೇ ಉಳಿದುಬಿಟ್ಟಿರುತ್ತವೆ. ಅದರಲ್ಲೂ ಶಂಕರ್ ನಾಗ್ ಅವರು ನಟಿಸಿರುವ ಚಲನಚಿತ್ರಗಳಲ್ಲಿನ ಹಾಡುಗಳು ಯಾವಾಗಲೂ ಎವರ್‌ ಗ್ರೀನ್‌ ಆಗಿವೆ ಅಂತಲೇ ಹೇಳಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+