ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸಮಾಧಿ: ರಾಜ್ ಕುಟುಂಬ ಒಪ್ಪಿಗೆ
ಬೆಂಗಳೂರು, ನವೆಂಬರ್ 25: ಕಂಠೀರವ ಸ್ಟುಡಿಯೋದಲ್ಲಿ ಹಿರಿಯ ನಟ ಅಂಬರೀಶ್ ಸಮಾಧಿ ನಿರ್ಮಾಣಕ್ಕೆ ವರನಟ ಡಾ. ರಾಜ್‌ಕುಮಾರ್ ಕುಟುಂಬ ಹಸಿರು ನಿಶಾನೆ ತೋರಿದೆ.
ಡಾ. ರಾಜ್ ಹಿರಿಯ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಈ ವಿಷಯ ತಿಳಿಸಿದ್ದಾರೆ. ರಾಜ್ ಸಮಾಧಿ ಪಕ್ಕದಲ್ಲಿ ಅಂಬರೀಶ್ ಸಮಾಧಿ ಮಾಡುವುದು ದೈವ ನಿರ್ಣಯ, ಅದನ್ನು ನಿರ್ಧಾರ ಮಾಡಲು ನಾವು ಯಾರು, ಸರ್ಕಾರ ಹೇಗೆ ನಿರ್ಧಾರ ಮಾಡುತ್ತೋ ಅದಕ್ಕೆ ನಾವು ಬದ್ಧ ಎಂದು ತಿಳಿಸಿದರು.
ನಾನೂ ಸೇರಿದಂತೆ ನಮ್ಮ ತಮ್ಮಂದಿರು ಕೂಡ ಅಂಬರೀಶ್ ಜೊತೆ ನಟಿಸಿದ್ದಾರೆ. ಅಂಬರೀಶ್ ದೇಹ ಬಿಟ್ಟು ಹೋದರೂ ಆವರ ಆತ್ಮ ನಮ್ಮ ನಡುವೆಯೇ ಇರುತ್ತದೆ. ಎಲ್ಲಿ ಅಂತ್ಯಕ್ರಿಯೆ ಮಾಡಬೇಕು ಎನ್ನುವುದನ್ನು ಸರ್ಕಾರ ನಿರ್ಧರಿಸಿಲು ಎಂದರು.

ಅಂಬರೀಶ್ ಮಾಮ ನಮ್ಮೊಂದಿಗಿಲ್ಲ, 24 ಗಂಟೆಯೂ ಅವರು ಚಿತ್ರರಂಗದ ಬಗ್ಗೆ ಯೋಚಿಸಿದ್ದರು, ಅವರು ಸ್ನೇಹಜೀವಿ ಆಗಿದ್ದರು, ಯಾರೇ ಬಂದರೂ ಸಹಾಯ ಮಾಡುತ್ತಿದ್ದರು, ಚಿತ್ರರಂಗ ತಂದೆಯನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದರು.












Click it and Unblock the Notifications