ಆರ್. ವಿ. ರಸ್ತೆ-ಯಲಚೇನಹಳ್ಳಿ ನಡುವೆ 1 ಗಂಟೆ ಮೊದಲು ಮೆಟ್ರೋ ಸ್ಥಗಿತ

ಬೆಂಗಳೂರು, ಸೆಪ್ಟೆಂಬರ್ 18 : ಆರ್. ವಿ. ರಸ್ತೆ-ಯಲಚೇನಹಳ್ಳಿ ತನಕ ಶನಿವಾರ ಮತ್ತು ಭಾನುವಾರ ನಮ್ಮ ಮೆಟ್ರೋ ರೈಲು ಒಂದು ಗಂಟೆ ಮುಂಚಿತವಾಗಿ ಸ್ಥಗಿತಗೊಳ್ಳಲಿದೆ. ನೇರಳೆ ಮಾರ್ಗದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಬೆಳಗ್ಗೆ 7 ಗಂಟೆಗೆ ಆರಂಭವಾಗುವ ನಮ್ಮ ಮೆಟ್ರೋ ರೈಲುಗಳ ಸಂಚಾರ ರಾತ್ರಿ 9ರ ಬದಲು 8 ಗಂಟೆಗೆ ಅಂತ್ಯವಾಗಲಿದೆ. ಯಲಚೇನಹಳ್ಳಿ-ಅಂಜನಾಪುರ ವಿಸ್ತರಿಸಿದ ಮಾರ್ಗದಲ್ಲಿ ವಾಣಿಜ್ಯ ಸಂಚಾರಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಬೇಕಿರುವುದರಿಂದ ಒಂದು ಗಂಟೆ ಮುಂಚಿತವಾಗಿ ರೈಲು ಸಂಚಾರ ನಿಲ್ಲಿಸಲಿದೆ.

ಸೆ. 19 ಮತ್ತು 20ರಂದು ಯಲಚೇನಹಳ್ಳಿ ನಿಲ್ದಾಣದಿಂದ ನಾಗಸಂದ್ರದ ತನಕ ಹಸಿರು ಮಾರ್ಗದಲ್ಲಿ ಕೊನೆಯ ರೈಲು ಯಲಚೇನಹಳ್ಳಿಯಿಂದ ರಾತ್ರಿ 8ಕ್ಕೆ ಹೊರಡಲಿದೆ. ನಾಗಸಂದ್ರದಿಂದ ಯೆಲಚೇನಹಳ್ಳಿಗೆ ಕೊನೆಯ ರೈಲು 6.56ಕ್ಕೆ ಹೊರಡಲಿದೆ.

R.V.Road Yelachenahalli Metro Rail To Stop On 8 Pm

ಆರ್. ವಿ. ರಸ್ತೆ ಮತ್ತು ನಾಗಸಂದ್ರ ನಡುವೆ ರೈಲುಗಳು ಎಂದಿನಂತೆ ರಾತ್ರಿ 9ರ ತನಕ ಸಂಚಾರ ನಡೆಸಲಿವೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಈ ಮಾರ್ಗದಲ್ಲಿ ರೈಲು ಸೇವೆಯೂ ಎಂದಿನಂತೆ ಬೆಳಗ್ಗೆ 7ಕ್ಕೆ ಆರಂಭವಾಗಲಿದೆ.

ಹಸಿರು ಮಾರ್ಗದಲ್ಲಿ ಆರ್. ವಿ. ರಸ್ತೆ-ಯಲಚೇನಹಳ್ಳಿ ನಿಲ್ದಾಣಗಳ ನಡುವೆ ಮಾತ್ರ ಸಂಚಾರ ಒಂದು ಗಂಟೆ ಮುಂಚಿತವಾಗಿ ಸ್ಥಗಿತಗೊಳ್ಳಲಿದೆ. ನೇರಳೆ ಮಾರ್ಗದ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವಿನ ಸಂಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಎಂಆರ್‌ಸಿಎಲ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+