ಅಂಬಿ ನೀನು ಸಾಕಿದ ಶ್ವಾನಗಳು ನಿನ್ನ ಮರೆಯಲ್ವೋ!
ಬೆಂಗಳೂರು, ನವೆಂಬರ್ 25: ಕಲಿಯುಗದ ಕರ್ಣ, ನಮ್ಮೂರ ಹಮ್ಮೀರ ಎಂದೆಲ್ಲಾ ಮಕ್ಕಳಿಂದ ವೃದ್ಧರವರೆಗೆ ಇಡೀ ಕನ್ನಡಿಗರ ಹೃದಯ ಸಾಮ್ರಾಟನಾಗಿದ್ದ ರೆಬಲ್ ಸ್ಟಾರ್ ಅಂಬರೀಶ್ ಪ್ರಾಣಿ ಪ್ರಿಯರು ಆಗಿದ್ದರು.
ತಮ್ಮ ಮನೆಯಲ್ಲಿ ದಶಕಗಳಿಂದ ಪ್ರೀತಿಯಿಂದ ಸಾಕಿದ್ದ ಶ್ವಾನಗಳನ್ನು ಬಿಟ್ಟು ಹೋಗಿರುವ ಅಂಬರೀಶ್ ನೆನಪಲ್ಲಿ ಮೂಕ ಪ್ರಾಣಿಗಳ ರೋದನ ಹೃದಯ ಕಲಕುವಂತಿದೆ.
ಮತ್ತೀಗ ತಮ್ಮ ಯಜಮಾನನ್ನು ಕಳೆದುಕೊಂಡು ಅನಾಥವಾಗಿರೋ ನಾಯಿಗಳು ಮೌನರೋಧನಕ್ಕೆ ಜಾರಿದ್ದು , ಅವುಗಳ ಸ್ಥಿತಿ ಮನಕಲಕುವಂತಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶಾಶ್ವತ ವಿಶ್ರಾಂತಿಗೆ ತೆರಳಿದ ಅಂಬರೀಶ್ ಇಲ್ಲದೆ ಸಾಕಿದ ಪ್ರೀತಿ ನಾಯಿಗಳು ಜೆಪಿನಗರದ ಮನೆಯಲ್ಲಿ ಮೌನದಲ್ಲಿ ಮರುಗುತ್ತಿವೆ.

ಮನೆಯಲ್ಲಿ ಒಡೆಯನಿಲ್ಲದೇ ಶ್ವಾನಗಳು ಕಂಗಾಲಾಗಿವೆ, ಬುಲ್ ಬುಲ್ ಹಾಗೂ ಕನ್ವರ್ ಲಾಲ್ ಎನ್ನುವ ಎರಡು ಸೆಂಟ್ ಬರ್ನಾಡ್ ಥಳಿಯ ಶ್ವಾನಗಳನ್ನು ಅಂಬರೀಶ್ ಸಾಕಿದ್ದರು. ಅಂಬಿ ದಿಢೀರ್ ಸಾವಿನಿಂದ ಶ್ವಾನಗಳು ದುಃಖಕ್ಕೆ ಜಾರಿವೆ.












Click it and Unblock the Notifications